ಅಸುಂಡಿ ಬಾಲಕಿ ಕೊಲೆ ಪ್ರಕರಣ:24 ಗಂಟೆಯಾದರು ಇನ್ನೂ ಪತ್ತೆಯಾಗದ ಹಂತಕರು

ಗದಗ: ತಾಲೂಕಿನ ಅಸುಂಡಿ ಗ್ರಾಮದಲ್ಲಿ 9ನೇ ತರಗತಿಯ ವಿದ್ಯಾರ್ಥಿನಿಯ ಶವ ಬುಧವಾರ ಸಂಜೆ ಕೊಳೆತ ಸ್ಥಿತಿಯಲ್ಲಿ ಪತ್ತೆ ಯಾಗಿತ್ತು. ಸ್ಥಳಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ, ಡಿವೈಎಸ್ಪಿ, ಸಿಪಿಐ ಗದಗ ಗ್ರಾಮೀಣ ಪೊಲೀಸರು ಬೇಟಿ ನೀಡಿ ಶವವನ್ನು ಪರಿಶೀಲಿಸಿ ಪ್ರಕರಣ ದಾಖಲಿಸಿ 24 ಗಂಟೆ ಕಳೆದರು ಇನ್ನೂ ಅರೋಪಿಗಳ ಪತ್ತೆಯಾಗಿಲ್ಲ.

ಇತ್ತಿಚಿಗೆ ಇಂತಹ ಪ್ರಕರಣಗಳೂ ರಾಜ್ಯದಲ್ಲಿ ಹೆಚ್ಚಾಗುತ್ತಿರುವುದು ದುರದುಷ್ಟಕರ ಅದರಲ್ಲೂ ಗದಗ ಜಿಲ್ಲೆಯ ಅಸುಂಡಿ ಗ್ರಾಮದ ಬಾಲಕಿಯ ಕೊಲೆ ಪ್ರಕರಣ ಜನರಲ್ಲಿ ಬಯಭೀತಿಯನ್ನು ಹುಟ್ಟಿಸಿದೆ, ಇದರಿಂದ ಮಕ್ಕಳನ್ನು ಶಾಲೆಗೆ ಕಳಿಸಲು ಪಾಲಕರು ಹಿಂದೆಟು ಹಾಕುತ್ತಿದ್ದಾರೆ. ಪ್ರಕರಣ ಕುರಿತು ಉತ್ತರಪ್ರಭದೊಂದಿಗೆ ಗದಗ ಗ್ರಾಮೀಣ ಸಿಪಿಐ ಅವರಿಗೆ ದೂರವಾಣಿ ಮುಖಾಂತರ ಸಂಪರ್ಕಿಸಿದಾಗ ಮೇಲ್ನೋಟಕ್ಕೆ ಬಾಲಕಿಯ ಮೇಲೆ ಅತ್ಯಾಚಾರದ ಶಂಕೆ ಇಲ್ಲ ಇನ್ನೂ ವಿಧಿವಿಜ್ಞಾನ ಪ್ರಯೋಗಾಲಯದಿಂದ ವರದಿ ಬಂದಿರುವುದಿಲ್ಲ,ವರದಿ ಬಂದ ನಂತರ ಸತ್ಯಾಸತ್ತತೆ ಗೊತ್ತಾಗುತ್ತದೆ, ಇನ್ನೂ ಆರೋಪಿಗಳ ಪತ್ತೆಯಾಗಿಲ್ಲ ಎಂದು ಪ್ರತಿಕ್ರಿಯಿಸಿದರು. ಈ ಪ್ರಕರಣ ಸಾಕಷ್ಟು ಅನುಮಾನವನ್ನು ಹುಟ್ಟಿಸಿದೆ. ಮಕ್ಕಳ ರಕ್ಷಣಾ ಸಮಿತಿ ಈ ಪ್ರಕರಣವನ್ನು ವಿಶೇಷವೆಂದು ಪರಿಗಣಿಸಿ ನೊಂದ ಕುಟುಂಬಕ್ಕೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಮದ್ಯಪ್ರವೇಶ ಮಾಡಬೇಂಬುದು ಅಲ್ಲಿನ ಸಾರ್ವಜನಿಕರ ಒತ್ತಾಯ.ಈ ಪ್ರಕರಣದಲ್ಲಿ ಪೊಲೀಸ್ ಇಲಾಖೆಯು ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ಆರೋಪಿಗಳ ಹೆಡೆಮುರಿ ಕಟ್ಟಬೇಕಾಗಿದೆ.

ಪ್ರಕರಣ ಕುರಿತು ಉತ್ತರಪ್ರಭದೊಂದಿಗೆ ಗದಗ ಗ್ರಾಮೀಣ ಸಿಪಿಐ ಅವರಿಗೆ ದೂರವಾಣಿ ಮುಖಾಂತರ ಸಂಪರ್ಕಿಸಿದಾಗ ಮೇಲ್ನೋಟಕ್ಕೆ ಬಾಲಕಿಯ ಮೇಲೆ ಅತ್ಯಾಚಾರದ ಶಂಕೆ ಇಲ್ಲ ಇನ್ನೂ ವಿಧಿವಿಜ್ಞಾನ ಪ್ರಯೋಗಾಲಯದಿಂದ ವರದಿ ಬಂದಿರುವುದಿಲ್ಲ,ವರದಿ ಬಂದ ನಂತರ ಸತ್ಯಾಸತ್ತತೆ ಗೊತ್ತಾಗುತ್ತದೆ, ಇನ್ನೂ ಆರೋಪಿಗಳ ಪತ್ತೆಯಾಗಿಲ್ಲ ಎಂದು ಪ್ರತಿಕ್ರಿಯಿಸಿದರು

Exit mobile version