ಮುಳಗುಂದ: ಕೋವಿಡ್ ಹಿನ್ನೆಲೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಧಿಸಿರುವ ಮಾರ್ಗಸೂಚಿಗಳ ಪ್ರಕಾರ ಸಾರ್ವಜನಿಕರು ದಸರಾ ಹಾಗೂ ಈದ್ ಮಿಲಾದ್ ಹಬ್ಬಗಳನ್ನ ಆಚರಿಸಬೇಕು ಎಂದು ಗದಗ ಗ್ರಾಮೀಣ ಸಿಪಿಐ ರವಿಕುಮಾರ ಕಪ್ಪತ್ತನವರ ಹೇಳಿದರು.
ಅವರು ಸ್ಥಳೀಯ ಪೋಲಿಸ್ ಠಾಣೆಯಲ್ಲಿ ದಸರಾ ಹಾಗೂ ಈದ್ ಮಿಲಾದ್ ಹಬ್ಬ ಆಚರಣೆ ಹಿನ್ನೆಲೆ ಬುಧವಾರ ಸಂಜೆ ನಡೆದ ಶಾಂತಿ ಪಾಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿಜಯದಶಮಿ, ಬನ್ನಿ ಮುಡಿಯುವ ಸಂದರ್ಭದಲ್ಲಿ ಪಾಲಿಕೆ ಉತ್ಸವ ಮಾಡುವಂತಿಲ್ಲ, ಗುಡಿಗಳಲ್ಲೆ ಸರಳವಾಗಿ ಪೂಜೆ ಸಲ್ಲಿಸಬೇಕು. ಹೆಚ್ಚಿನ ಜನ ಸಂದಣಿ ಸೇರದಂತೆ ಸಂಘಟಿಕರು ನಿಗಾವಹಿಸಬೇಕು. ಪ್ರತಿಯೊಬ್ಬರು ಮಾಸ್ಕ್ ಧರಿಸುವದು ಕಡ್ಡಾಯವಾಗಿದೆ. ಇನ್ನೂ ಈದ್ ಮಿಲಾದ್ ಆಚರಣೆಯಲ್ಲೂ ಸಹ ಮೆರವಣಿಗೆ ನಿಷೇದಿಸಲಾಗಿದೆ. ಮಸೂತಿಯಲ್ಲಿ ಅಂತರ ಕಾಯ್ದುಕೊಂಡು ಪ್ರಾರ್ಥನೆ ಸಲ್ಲಿಸಿ, 60 ವರ್ಷ ಮೇಲ್ಪಟ್ಟ ವೃದ್ದರು ಮತ್ತು ಮಕ್ಕಳನ್ನ ಮನೆಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ಕೊರೊನಾ ವನ್ನು ಯಾರು ಕೂಡಾ ನಿರ್ಲಕ್ಷ್ಯ ಮಾಡಬಾರದು ವೈಯಕ್ತಿಕ ಶುಚಿತ್ವ ಕಾಪಡಿಕೊಳ್ಳಬೇಕು ಎಂದು ತಿಳಿಸಿದರು.
