ಇಸ್ಪೀಟ್ ಜೂಜಾಟ : 7 ಜನರ ಬಂಧನ

ಮುಳಗುಂದ: ಸ್ಥಳೀಯ ಪೊಲೀಸ್ ಠಾಣೆ ವ್ಯಾಪ್ತಿಯ ಮಹಾಲಿಂಗಪುರ ತಾಂಡಾದ ಸಮುದಾಯ ಭವನದ ಹತ್ತಿರ ಇಸ್ಪೀಟ್ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ ಗುಂಪಿನ ಮೇಲೆ ಪಿಎಸ್‌ಐ ಸಚಿನ ಅಲಮೇಲಕರ ಸಿಬ್ಬಂದಿ ದಾಳಿ ನಡೆಸಿದ 7 ಜನ ಆರೋಪಿತರನ್ನು ಶನಿವಾರ ಬಂಧಿಸಿದ್ದಾರೆ.
ಬಂಧಿತರಿಂದ 3700 ರೂ ಜೂಜಾಟದ ಹಣವನ್ನು ವಶಪಡಿಸಿಕೊಂಡು ವಾಸು ಲಮಾಣಿ, ಮಂಜುನಾಥ ಲಮಾಣಿ, ಮಾರುತಿ ಲಮಾಣಿ, ಶಂಕರ ಲಮಾಣಿ, ರಾಜು ಪವಾರ, ಚಂದ್ರಕಾಂತ ನಾಯಕ, ಶಿವಪ್ಪ ಲಮಾಣಿ ಬಂಧಿತ ಆರೋಪಿಗಳ ವಿರುದ್ಧ ಮುಳಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version