ಮುಳಗುಂದದಲ್ಲಿ ರಸ್ತೆ ಸುರಕ್ಷತೆ ಸಪ್ತಾಹ

ಮುಳಗುಂದ: ಪಟ್ಟಣದ ಎಸ್.ಜೆ.ಜೆ.ಎಂ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗದಗ ಜಿಲ್ಲಾ ಪೋಲಿಸ್ ಹಾಗೂ ಸ್ಥಳಿಯ ಪೋಲಿಸ್ ಠಾಣೆ ವತಿಯಿಂದ ರಸ್ತೆ ಸುರಕ್ಷತೆ ಸಪ್ತಾಹ ನಡೆಯಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಠಾಣಾ ಪಿ.ಎಸ್.ಐ ಸಚಿನ್ ಅಲಮೇಲಕರ ಮಾತನಾಡಿ, ವಿದ್ಯಾರ್ಥಿಗಳು ಸಂಚಾರಿ ನಿಯಮಗಳನ್ನು ತಿಳಿದುಕೊಂಡು ಪಾಲಿಸಬೇಕು. ಬೈಕ್ ಅಪಘಾತ ವೇಳೆ ಮೊದಲಿಗೆ ತಲೆಗೆ ಪೆಟ್ಟು ಬೀಳುತ್ತದೆ ಇದರಿಂದ ಪ್ರಾಣಹಾನಿ ಸಂಭವಿಸುತ್ತದೆ. ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಕಾರಿನಲ್ಲಿ ಪ್ರಯಾಣಿಸುವಾಗ ಸಿಟ್ ಬೆಲ್ಟ ಹಾಕಿಕೊಳ್ಳಿ. ನಿಯಮ ಮೀರಿ ನಡೆಯುವವರ ವಿರುದ್ದ ಕಾನೂನು ಜರುಗಿಸಲಾಗುವದು. ಎಂದರು.

ಶಿಕ್ಷಕರಾದ ಸಿ.ಎಚ್.ದೊಡ್ಡಮನಿ, ಎಸ್.ಚಂದ್ರಶೇಖರ, ಎನ್.ಪಿ.ಲಮಾಣ, ಮರಿದೇವರಮಠ, ಸಿಬ್ಬಂದಿ ಐ.ಕೆ.ತಾವರಗೇರಿ ಹಾಗೂ ವಿದ್ಯಾರ್ಥಿಗಳು ಇದ್ದರು.

ಮುಳಗುಂದ ಪೋಲಿಸ್ ಠಾಣೆ ಪಿಎಸೈ ಸಚಿನ್ ಅಲಮೇಲಕರ ಸಾರ್ವಜನಿಕರಿಗೆ ರಸ್ತೆ ಸುರಕ್ಷತೆ ಪಾಲನೆ ಕುರಿತು ಜಾಗೃತಿ ಮೂಡಿಸಿದರು.

Exit mobile version