ಗಾಂಜಾ ಬೆಳೆ:ಒರ್ವನ ಬಂಧನ

ಮುಳಗುಂದ: ಪಟ್ಟಣದ ಯಲಿಶಿರೂರ ರಸ್ತೆಯ ಜಮೀನಿನಲ್ಲಿ ಗಾಂಜಾ ಬೆಳೆದಿದ್ದ ಓರ್ವನನ್ನು ಪೋಲಿಸರು ಬಂಧಿಸಿದ್ದಾರೆ. ಬಂಧಿತನಿಂದ 17 ಸಾವಿರ ಮೌಲ್ಯದ 1 ಕೆ.ಜಿ 700 ಗ್ರಾಂ, ಗಾಂಜಾ ವಶಕ್ಕೆ ಪಡೆಯಲಾಗಿದೆ.

ಪಟ್ಟಣದ ತಿಗಡಿಕೇರಿ ಓಣಿಯ ನಿವಾಸಿ ಚನ್ನಪ್ಪ ನಾ. ಆರೇರ(67) ಬಂಧಿತ ಆರೋಪಿ. ಕಳೆದ ಹಲವು ತಿಂಗಳಿಂದ ತನ್ನ ಸ್ವಂತ ಜಮೀನಿನಲ್ಲಿ ಹತ್ತಿ ಬೆಳೆ ಮಧ್ಯ ಗಾಂಜಾ ಬೆಳೆದಿದ್ದ.

ಮುಳಗುಂದ ಠಾಣೆ ಪಿಎಸ್‍ಐ ಸಚಿನ್ ಅಲಮೇಲಕರ ಹಾಗೂ ಸಿಬ್ಬಂದಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಯನ್ನ ಬಂಧಿಸಿ ತನಿಖೆಗೆ ಒಳಪಡಿಸಿದ್ದಾರೆ.

ಈ ಕುರಿತು ಮುಳಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version