ನರಗುಂದ ತಾಲೂಕಿನ 383 ಹಣ್ಣು ಬೆಳೆಗಾರರಿಗೆ ಸರಕಾರದಿಂದ ಪರಿಹಾರ

ನರಗುಂದ: (ಕೊಣ್ಣೂರ) ಅತೀವೃಷ್ಟಿ ಮಹಾಪುರದಿಂದ ತತ್ತರಿಸಿದ ರೈತರಿಗೆ ಕೋವೀಡ್ 19 ಮಹಾಮಾರಿಯು ಶಾಪವಾಗಿ ಪರೀಣಮಿಸಿರುವದರಿಂದ ರೈತರ ಜನಜೀವನ ಚಿಂತಾಜನಕವಾಗಿದೆ. ಅದರಲ್ಲೂ ವಿಷೇಶವಾಗಿ ತಾಲೂಕಿನ ಕೊಣ್ಣೂರ, ಶಿರೋಳ, ವಾಸನ, ಹಿರೇಕೊಪ್ಪ, ಚಿಕ್ಕನರಗುಂದ ರೈತರು ಮಲಪ್ರಭಾ ನದಿದಡದಲ್ಲಿರುವದರಿಂದ ತೋಟಗಾರಿಕೆ ಬೆಳೆಯ ಮೇಲೆ ಹೆಚ್ಚು ಅವಲಂಭಿತರಾಗಿದ್ದಾರೆ. ಇಲ್ಲಿನ ಪೇರಲ ಹಣ್ಣು ಹೆಚ್ಚು ಪ್ರಾಮುಖ್ಯೆತೆ ಪಡೆದಿದ್ದು, ಕಳೆದ ಒಂದುವರೆ ವರ್ಷದಿಂದ ಪ್ರಾಕೃತಿಕವಾಗಿ ನಷ್ಟ ಅನುಭವಿಸಿದ ರೈತರಿಗೆ ಕೋವೀಡ್ ಮಹಾಮಾರಿ ಬರೆಯಾಗಿದೆ.
ರೈತರ ಸಂಕಷ್ಟವನ್ನು ಗಮನದಲ್ಲಿಟ್ಟುಕೋಂಡು ರಾಜ್ಯ ಸರಕಾರ ಹಣ್ಣು ಬೆಳೆಗಾರರಿಗೆ ಪರಿಹಾರ ಘೋಷಿಸಿದ್ದು ತಾಲೂಕಿನ ಎಫ್.ಐ.ಡಿ ನೋಂದಣಿಯಾದ ಕೊಣ್ಣೂರ, ಶಿರೋಳ, ವಾಸನ, ಹಿರೇಕೊಪ್ಪ, ಚಿಕ್ಕನರಗುಂದ ಒಳಗೊಂಡತೆ 383 ರೈತರಿಗೆ ಹೆಕ್ಟೇರಗೆ (2.1/2 ಎಕರೆ) ಜಮೀನಿಗೆ 10000, ರೂಪಾಯಿಗಳನ್ನು ನಿಡುತ್ತಿದೆ.
ಈ ಹಿಂದೆ ಜಿ.ಪಿ.ಎಸ್ ತಂತ್ರಾಂಶದ ಮೂಲಕ ಮಾಹಿತಿ ಸಂಗ್ರಹಿಸಿದ್ದು ಮೇ.24 ರ ಸರಕಾರದ ಆದೇಶದಂತೆ ತಾಲೂಕಿನ ಕೊಣ್ಣೂರ, ಶಿರೋಳ, ವಾಸನ, ಹಿರೇಕೊಪ್ಪ, ಚಿಕ್ಕನರಗುಂದ ಎಫ.ಐ.ಡಿ ನೋಂದಣೆಯಾದ 383 ಹಣ್ಣು ಬೆಳೆಯುವ ರೈತರು ಹಾಗೂ ಎರಡು ಹೂ ಬೆಳೆಯುವ ರೈತರ ಪಟ್ಟಿ ತಯಾರಿಸಿದ್ದು ಪ್ರತಿ ಹೆಕ್ಟೇರ್ ಗೆ 10000 ರೂಪಾಯಿಗಳನ್ನು ಕೊಡಲಾಗುತ್ತಿದೆ. ರೈತರ ಆಧಾರ ಕಾರ್ಡ ಜೋಡನೆ ಇರುವ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾಯಿಸಲಾಗುವುದು ಎಂದು ತಾಲೂಕಾ ತೋಟಗಾರಿಕೆ ಇಲಾಖೆ ಅಧಿಕಾರಿ ಆನಂದ ರಾ ನರಸನ್ನವರ ತಿಳಿಸಿದರು.

Exit mobile version