ಗಜೇಂದ್ರಗಡದಲ್ಲಿ ಅಭಿಮಾನಿ ಬಳಗದಿಂದ ರಾಜ್ ಜನ್ಮದಿನ

ಗಜೇಂದ್ರಗಡ: ನಟ ಸಾರ್ವಭೌಮ ಡಾ.ರಾಜಕುಮಾರ ನಾಡು, ನುಡಿ, ನೆಲ, ಜಲ, ಸಂಸ್ಕೃತಿ ಭಾಷಾಭಿಮಾನ ಮೆರೆಯುವ ಮೂಲಕ ಕನ್ನಡಿಗರ ಮನದಲ್ಲಿ ಶಾಶ್ವತವಾಗಿನೆಲೆಯೂರಿದ್ದಾರೆ. ಈ ನಿಟ್ಟಿನಲ್ಲಿ ಮೇರು ನಟನ ಆದರ್ಶಗಳನ್ನು ಅಜರಾಮವಾಗಿರಿಸುವುದು ಪ್ರತಿಯೊಬ್ಬ ಕನ್ನಡಿಗರ ಕರ್ತವ್ಯವಾಗಿದೆ ಎಂದು ಡಾ.ರಾಜುಕುಮಾರ ಅಭಿಮಾನಿ ಬಳಗ ಅಧ್ಯಕ್ಷ ಸಂಗಪ್ಪ ಯಲಬುಣಚಿ ಹೇಳಿದರು.

                ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರ ಸಂಘ ಕಾರ್ಯಾಲಯದಲ್ಲಿ ಡಾ. ರಾಜಕುಮಾರ ಅಭಿಮಾನಿ ಬಳಗ ಹಾಗೂ ಬೀದಿ ಬದಿ ವ್ಯಾಪಾರಸ್ಥರ ಸಂಘ ವತಿಯಿಂದ ಶನಿವಾರ ನಡೆದ ಅಮರ ಜೀವಿ ಡಾ. ರಾಜಕುಮಾರ ಜನ್ಮದಿನ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

                ಕನ್ನಡ ಸಾಂಸ್ಕೃತಿಕ ಲೋಕದ ರಾಯಬಾರಿ ಡಾ.ರಾಜಕುಮಾರ ಅವರು ಅದ್ವಿತಿಯ ಕಲಾವಿದರಾಗಿದ್ದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬAತೆ ರಾಜ್ ನಿರ್ವಹಿಸದ ಪಾತ್ರವಿಲ್ಲ. ತಮ್ಮ ನಟನೆಯ ಮೂಲಕ ಉತ್ತಮ ಸಾಮಾಜಿಕ ಮೌಲ್ಯಗಳನ್ನು ಸಮಾಜಕ್ಕೆ ನೀಡಿದ್ದಾರೆ. ಅವರು ಸರಳ ಸಜ್ಜನಿಕೆಯ ಸಾಕಾರ ಮೂರ್ತಿಯಾಗಿದ್ದರು. ಕೇವಲ ನಟನೆಗೆ ಮೀಸಲಾಗಿರದೆ ನಾಡು, ನುಡಿಗೆ, ಜಲ ಭಾಷೆಯ ಉಳಿವಿಗಾಗಿ ಹೋರಾಟ ನಡೆಸಿ ಗೋಕಾಕ್ ಚಳುವಳಿಯನ್ನು ಯಶಸ್ವಿಗೊಳಿಸಿದ ಕೀರ್ತಿ ಡಾ.ರಾಜಕುಮಾರ ಅವರಿಗೆ ಸಲ್ಲುತ್ತದೆ. ಅಂತಹ ಧಿಮಂತ ನಾಯಕನ ಆದರ್ಶಗಳನ್ನು ನಾವುಗಳು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅವಶ್ಯವಿದೆ ಎಂದರು. 

                ಬೀದಿ ಬದಿ ವ್ಯಾಪಾರಸ್ಥರ ಸಂಘ ಅಧ್ಯಕ್ಷ ಬಾಷೇಸಾಬ ಕರ್ನಾಚಿ, ಬಾಬು ಗೊಡೇಕಾರ ಮಾತನಾಡಿ, ಡಾ. ರಾಜಕುಮಾರ ಅವರು ಕೇವಲ ನಟನೆ ಮಾಡಿ, ನಮ್ಮನ್ನಗಲದೇ, ತಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ಸಮಾಜಕ್ಕೆ ದೊಡ್ಡ ಸಂದೇಶ ನೀಡಿದ್ದಾರೆ. ವಿಶ್ವದಲ್ಲಿ ಕೊಟ್ಯಾಂತರ ಅಂಧರು ಕತ್ತಲಲ್ಲಿ ಬದುಕು ಸಾಗಿಸುತ್ತಿದ್ದಾರೆ. ಅಂಥವರಿಗೆ ನಾವು ಮರಣಾನಂತರ ಕಣ್ಣುಗಳನ್ನು ದಾನ ಮಾಡಿದರೆ, ಅಂಧರ ಬಾಳಿಗೆ ಬೆಳಕು ನೀಡಿದಂತಾಗುತ್ತದೆ. ಈ ದೆಸೆಯಲ್ಲಿ ಪ್ರತಿಯೊಬ್ಬರೂ ನೇತ್ರದಾನ ಮಾಡಿ, ಡಾ. ರಾಜಕುಮಾರ ಅವರಿಗೆ ಸಲ್ಲಿಸುವ ನಿಜವಾದ ಗೌರವವಾಗುತ್ತದೆ ಎಂದರು.

                ಇದೇ ವೇಳೆ ಸರಳವಾಗಿ ಜನ್ಮದಿನವನ್ನು ಆಚರಿಸಲಾಯಿತು. ರಾಜು ಮಾಂಡ್ರೆ, ಬಸವರಾಜ ಗಾಡಗೋಳಿ, ಪ್ರಕಾಶ ಪಾಗಾದ ಮುಂತಾದವರಿದ್ದರು.

Exit mobile version