ಗದಗ ಜಿಲ್ಲೆಯಲ್ಲಿ ಐದು ದಿನ ಸಂಪೂರ್ಣ ಲಾಕ್ ಡೌನ್: ಏನಿರುತ್ತೆ..? ಏನಿರಲ್ಲಾ…?

lock down

ಗದಗ ಜಿಲ್ಲೆಯಲ್ಲಿ ಐದು ದಿನ ಸಂಪೂರ್ಣ ಲಾಕ್ ಡೌನ್: ಏನಿರುತ್ತೆ..? ಏನಿರಲ್ಲಾ...?

ಗದಗ: ಈಗಾಗಲೇ ಕೋರೊನಾ ಸೋಂಕಿತರ ಪ್ರಮಾಣ ಹೆಚ್ಚುತ್ತಿದ್ದು, ಕೋವಿಡ್ ನಿಯಂತ್ರಣದ ದೃಷ್ಟಿಯಿಂದ ಗದಗ ಜಿಲ್ಲೆಯನ್ನು ಸಂಪೂರ್ಣ ಲಾಕ್ ಡೌನ್ ಗೆ ನಿರ್ಧಾರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್ ಹೇಳಿದರು.
ಅವರು ಗದಗನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,
ಮೇ.27 ರ ಬೆಳಿಗ್ಗೆ 10 ಗಂಟೆಯಿಂದ ಜೂನ್ 1 ನೇ ತಾರೀಖಿನ ಬೆಳಿಗ್ಗೆ 6 ಗಂಟೆಯವರೆಗೆ ಕಠಿಣ ಲಾಕ್ ಡೌನ್ ವಿಧಿಸಲಾಗಿದೆ.
ಈ ಅವಧಿಯಲ್ಲಿ ಸೋಂಕಿತರ ಪ್ರಮಾಣ ಕಡಿಮೆಯಾಗದಿದ್ದಲ್ಲಿ ಮುಂದಿನ ನಿರ್ಧಾರ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು.
ಜನರ ಸಹಕಾರ ಇದ್ದಾಗ ಮಾತ್ರ ಕೊರೊನಾ ನಿಯಂತ್ರಣ ಸಾಧ್ಯ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್

ಲಸಿಕೆಗೆ ಸಂಬಂಧಿಸಿದಂತೆ ಕೋವ್ಯಾಕ್ಸಿನ್ ಎರಡನೇ ಡೋಸ್ ಗೆ ಮಾತ್ರ ಅವಕಾಶ ನೀಡಲಾಗಿದೆ.
ಕೋವಿಶೀಲ್ಡ್ ಗೆ 12 ರಿಂದ 16 ವಾರವಾಗಿದ್ದರೆ ಎರಡನೇ ಡೋಸ್ ಗೆ ಅವಕಾಶ ನೀಡಲಾಗುವುದು.
ಅನಾವಶ್ಯಕವಾಗಿ ವಾಹನಗಳು ಬಂದರೆ ವಿಪತ್ತು ನಿರ್ವಹಣೆ ಕಾಯ್ದೆಯಡಿ ಕ್ರಮ ಕ್ರಮ ಕೈಗೊಳ್ಳಲು ಸೂಚಿಸಿದರು.
ಅಕ್ಕಪಕ್ಕದ ಜಿಲ್ಲೆಗಳಿಂದ ಜನರು ಬರುತ್ತಿರುವ ಹಿನ್ನೆಲೆ ಕೊರೊನಾ ಹೆಚ್ಚಳ ವಾಗುವ ಸಂಭವವಿದೆ. ಈ ಹಿನ್ನೆಲೆಯಲ್ಲಿ ಲಾಕ್ ಡೌನ್ ಗೆ ನಿರ್ಧಾರಿಸಲಾಗಿದೆ.
ಸದ್ಯಕ್ಕೆ ಜಿಲ್ಲೆಯಲ್ಲಿ ಕೊರೊನಾ ತಹಬದಿಗೆ ಬರುತ್ತಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮದ ಅಂಗವಾಗಿ ಲಾಕ್ ಡೌನ್ ಘೋಷಿಸಲಾಗಿದೆ. ಕೊವಿಡ್ ಲಕ್ಷಣ ಕಂಡುಬಂದ ವ್ಯಕ್ತಿಗಳನ್ನು ಜಿಲ್ಲಾಸ್ಪತ್ರೆಗೆ ಕಳಿಸಲು ಕೊರೊನಾ ಕೆಲಸ‌ ಮಾಡುತ್ತಿರುವ ವೈದ್ಯರಿಗೆ ಸೂಚನೆ ನೀಡಿದರು.

ಪೂರ್ತಿ ಸುದ್ದಿಗಾಗಿ ಈ ಮೇಲಿನ ವಿಡಿಯೋವನ್ನು ನೋಡಿ

ಏನಿರುತ್ತೆ..? ಏನಿರಲ್ಲಾ…?

1, ತರಕಾರಿ, ಹಣ್ಣು, ಹೂವು ವ್ಯಾಪಾರಸ್ಥರು ತಳ್ಳುಗಾಡಿಗಳಲ್ಲಿ ವ್ಯಾಪಾರ ಮಾಡಬೇಕು.

2, ಎಲ್ಲಾ ಬಗೆಯ ಮಾರುಕಟ್ಟೆಗಳ ಬಂದ್

3, ತಳ್ಳುಗಾಡಿವರು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡು ವ್ಯಾಪಾರ ಮಾಡಬೇಕು. ಜನರೂ ಸಹ ಮಾಸ್ಕ್ ಧರಿಸಿಯೇ ಕೊಂಡುಕೊಳ್ಳಬೇಕು.

4, ಹಾಲು ಮಾರಾಟ ಮಾಡುವುದಕ್ಕೆ ಬೆಳಿಗ್ಗೆ 8 ಗಂಟೆಯವರೆಗೆ ಅವಕಾಶ.

5, ಕಿರಾಣಿ ಸಾಮಾನುಗಳಿಗೆ ಹೋಂ ಡಿಲೆವರಿಗೆ ಮಾತ್ರ ಅವಕಾಶ.

6, ರೈತಾಪಿ ವಸ್ತುಗಳ ಖರೀದಿಗೆ ಬೆಳಿಗ್ಗೆ 10 ರವರೆಗೆ ಮಾತ್ರ ಅವಕಾಶ

7, ನಗರ ಹಾಗೂ ಹಳ್ಳಿಗಳಲ್ಲಿಯೂ ಸಹ ಎಲ್ಲಾ ಬಗೆಯ ಹೋಟೆಲ್ ಗಳು ಬಂದ್. ಒಂದು ವೇಳೆ ಹೊಟೇಲ್ ಚಾಲನೆ ಇದ್ದರೆ, ಗ್ರಾಮಾಂತರ ಪ್ರದೇಶದಲ್ಲಿ ಪಿಡಿಒ ಹಾಗೂ ತಲಾಟೆ ಹೊಣೆಯಾಗುತ್ತಾರೆ.

8, ಬಾರ್ ಹಾಗೂ ವೈನ್ ಶಾಪ್ ಗಳು ಸಹ 1 ನೇ ತಾರೀಖಿನವರೆಗೂ ಬಂದ್

9, ಮಾಂಸದಂಗಡಿಗಳು ಬಂದ್

10, ಅಂಚೆ ಕಚೇರಿ ಹಾಗೂ ಬ್ಯಾಂಕ್ ಸಿಬ್ಬಂದಿಗಳು ಕದ ಹಾಕಿಕೊಂಡು ಕಚೇರಿ ಕೆಲಸಕ್ಕೆ ಮಾತ್ರ ಅವಕಾಶ

11, ಜನರಿಗೆ ಡಿಪಾಸಿಟ್ ಹಾಗೂ ಹಣ ತೆಗೆಯಲು ಅವಕಾಶವಿಲ್ಲ.

13, ಮದುವೆ ಸೇರಿದಂತೆ ಎಲ್ಲಾ ಬಗೆಯ ಶುಭ ಕಾರ್ಯಗಳಿಗೂ ಕಡಿವಾಣ

14, ಪೂರ್ವ ನಿಗದಿತ ಮದುವೆಗೆಳಿಗೆ ಷರತ್ತಿಗೊಳಪಟ್ಟು ಅನುಮತಿ.

15, ತರಕಾರಿ,ಹಣ್ಣು‌ ವ್ಯಾಪಾರ ಮಾಡುವವರಿಗೆ ಒತ್ತುವ ಗಾಡಿಯಲ್ಲಿ ಮಾರಾಟಕ್ಕೆ ಅವಕಾಶ

16, ಎಲ್ಲಾ ಹೋಟೆಲ್, ಡಾಬಾ, ಬಂದ್

17, ಗ್ರಾಮೀಣ ಪ್ರದೇಶದ ವ್ತಾಪ್ತಿಯ ಹೋಟೆಲ್ ಗಳು ಸಹ ಕಟ್ಟುನಿಟ್ಟಾಗಿ ಬಂದ್

18, ವೈನ್ ಶಾಪ್ ಹಾಗೂ ಬಾರ್ ರೆಸ್ಟೋರೆಂಟ್ ಎಲ್ಲವೂ ಬಂದ್

19, ಐದು ದಿನಗಳ ಕಾಲ ಎಣ್ಣೆ ಪಾರ್ಸಲ್ ಗೂ ಅವಕಾಶವಿಲ್ಲ.

Exit mobile version