ಚಿತ್ರಕಲಾ, ಜಾನಪದ ವಿವಿ ಸಿಬ್ಬಂದಿ ವೇತನಕ್ಕೆ 11.60 ಲಕ್ಷ ಬಿಡುಗಡೆ: ವಿಪ ಸದಸ್ಯ ಸಂಕನೂರ

ಗದಗ: ರಾಜ್ಯದಲ್ಲಿ ಅಡ್ಹಾಕ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಮೂರು ಚಿತ್ರಕಲಾ ಮಹಾವಿದ್ಯಾಲಯದ ಹಾಗೂ ಜಾನಪದ ವಿಶ್ವವಿದ್ಯಾಲಯ, ಕನ್ನಡ ವಿಶ್ವವಿದ್ಯಾಲಯ ಹಂಪಿ, ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಇವುಗಳ ಸಿಬ್ಬಂದಿಗಳಿಗೆ 2020-21ನೇ ಸಾಲಿನಲ್ಲಿ ನೀಡಬೇಕಾದಂತಹ ಬಾಕಿ ವೇತನಕ್ಕಾಗಿ ಆರ್ಥಿಕ ಇಲಾಖೆ 11 ಕೋಟಿ 60 ಲಕ್ಷ ಹಣ ಬಿಡುಗಡೆ ಮಾಡಿದೆ ಎಂದು ವಿಧಾನ ಪರಿಷತ್ತ ಸದಸ್ಯ ಎಸ್.ವ್ಹಿ.ಸಂಕನೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ರಾಜ್ಯದ ಚಿತ್ರಕಲಾ ಪರಿಷತ್ತಿನ ಕಾಲೇಜ ಆಫ್ ಫೈನ್ ಆರ್ಟ್ಸ್-ಬೆಂಗಳೂರು, ವಿಜಯ ಲಲಿತ ಕಲಾ ಕಾಲೇಜು-ಗದಗ ಮತ್ತು ಎಂ.ಎA.ಕೆ ಕಾಲೇಜ್ ಆಫ್ ವಿಜುಯಲ್ ಆರ್ಟ್ಸ್-ಕಲಬುರ್ಗಿ ಇಲ್ಲಿ 8 ತಿಂಗಳಿAದ ವೇತನ ಬಿಡುಗಡೆಯಾಗದೆ ತೊಂದರೆಗಿಡಾಗಿದ್ದು ಅದೇ ರೀತಿ ಜಾನಪದ ವಿಶ್ವವಿದ್ಯಾಲಯ, ಕನ್ನಡ ವಿಶ್ವವಿದ್ಯಾಲಯ, ಹೊರಗುತ್ತಿಗೆ ಆಧಾರ ಮೇಲೆ ನೇಮಕಾತಿಗೊಂಡು ಕಾರ್ಯನಿರ್ವಹಿಸುತ್ತಿರುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೂ ಕೂಡ ವೇತನವಿಲ್ಲದೆ ಆರ್ಥಿಕ ತೊಂದರೆಗೀಡಾಗಿದ್ದರು.

ಈ ಕುರಿತು ಇತ್ತೀಚೆಗೆ ನಡೆದ ಅಧಿವೇಶನದಲ್ಲಿ ನಿಯಮ 72 ಮತ್ತು 330ರ ಅಡಿಯಲ್ಲಿ ಈ ವಿಷಯವನ್ನು ವಿಧಾನ ಪರಿಷತ್ ಸದಸ್ಯ ಎಸ್.ವ್ಹಿ ಸಂಕನೂರ, ಶ್ರೀಕಂಠೇಗೌಡರು, ಮರಿತಿಬ್ಬೇಗೌಡರು ಪ್ರಸ್ತಾಪಿಸಿದ್ದು ಇದು ಅಲ್ಲದೆ ವಿಧಾನ ಪರಿಷತ್ತ ಸಭಾಪತಿ ಬಸವರಾಜ ಹೊರಟ್ಟಿ ಅವರು ಸಹ ಅಧಿಕಾರಕ್ಕೆ ಹಣಬಿಡುಗಡೆಗೆ ಸೂಚನೆ ನೀಡದ್ದನ್ನು ಸ್ಮರಿಸಬಹುದಾಗಿದೆ ಎಂದು ವಿಧಾನ ಪರಿಷತ್ತ ಸದಸ್ಯ ಎಸ್.ವ್ಹಿ.ಸಂಕನೂರ ಹೇಳಿದರು.

Exit mobile version