ನವದೆಹಲಿ: ಈಗಾಗಲೇ ಕೊರೊನಾದಿಂದಾಗಿ ಇಡೀ ಜಗತ್ತೆ ತಲ್ಲಣಗೊಂಡಿತ್ತು. ಇನ್ನೇನು ಕೊರೊನಾ ನಿಯಂತ್ರಣಕ್ಕೆ ಬಂ ತು ಎನ್ನುವಷ್ಟರಲ್ಲಿ ಈಗ ಮತ್ತೆ ಕೊರೊನಾ ಎರಡನೇ ಅಲೆ ಆರಂಭವಾಗಿ ಜನರನ್ನು ಆತಂಕಕ್ಕೀಡು ಮಾಡಿದೆ. ಈ ಆತಂಕದ ಮದ್ಯೆ ಕರೋನಾ ವೈರಸ್ ನಂತರ 16 ಕಾಯಿಲೆಗಳು ವರದಿಯಾಗಿವೆ.
ಈ ಬಗ್ಗೆ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರ ಗುಂಪು ಎಚ್ಚರಿಕೆ ನೀಡಿದೆ. ಈ ಕಾಯಿಲೆ ನಿಯಂತ್ರಣದ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಎದುರಾಗಲಿರುವ ಅನಾಹುತ ತಡೆಗಟ್ಟಲು ಸಾಧ್ಯವಿಲ್ಲ ಎಂಬ ಎಚ್ಚರಿಕೆ ನೀಡಿದೆ. ಸದ್ಯ ಸಿಇಪಿಐ ತನ್ನ ವರದಿಯಲ್ಲಿ 16 ಕಾಯಿಲೆಗಳನ್ನು ಉಲ್ಲೇಖಿಸಿದ್ದು, ಅದು ವೇಗವಾಗಿ ಹೊರಹೊಮ್ಮುತ್ತಿದೆ. ಇದರ ಜೊತೆಗೆ 27 ರೋಗಗಳು ಸಾಂಕ್ರಾಮಿಕ ರೋಗಗಳಾಗಿ ನಿಧಾನಗತಿಯಲ್ಲಿ ಪರಿಣಮಿಸುವ ಸಾಧ್ಯತೆ ಇದೆ ಎಂದು ಬಿಲ್ ಗೇಟ್ಸ್ ಗುಣಪು ತಿಳಿಸಿದೆ.
ಕೊರೊನಾ ವೈರಸ್ ನ ಅಪಾಯವನ್ನು ವರದಿಯು ಎತ್ತಿ ತೋರಿಸಿದೆ. ವರದಿಪ್ರಕಾರ, ಮತ್ತೊಮ್ಮೆ ಹರಡುತ್ತಿರುವ ಕರೋನಾ ವೈರಸ್ ಸಾರ್ಸ್ ಮತ್ತು MERS ಜೊತೆ ಸೇರಿದರೆ ಅತ್ಯಂತ ಮಾರಕ ಪರಿಣಾಮಗಳನ್ನು ಉಂಟುಮಾಡುತ್ತದೆ. ಇದು ಇಡೀ ಮಾನವ ಕುಲಕ್ಕೆ ಅಪಾಯವನ್ನು ತಂದೊಡ್ಡಬಹುದು ಎಂದು ಬಿಲ್ ಗೇಟ್ಸ್ ಗುಂಪು ಆತಂಕ ವ್ಯಕ್ತಪಡಿಸಿದೆ.
