ಕನಕ ದುರ್ಗಾದೇವಿಯ ರಥೋತ್ಸವ

ಗಜೇಂದ್ರಗಡ: ಸಮೀಪದ ಕೊಡಗಾನೂರ ಗ್ರಾಮದಲ್ಲಿ ಆದಿ ದೇವತೆ ಕನಕ ದುರ್ಗಾದೇವಿಯ ರಥೋತ್ಸವ ಭಕ್ತರ ಹರ್ಷೋದ್ಘಾರದ ಮಧ್ಯೆ ವಿಜೃಂಭಣೆಯಿಂದ ನಡೆಯಿತು.

ಜಾತ್ರಾ ಮಹೋತ್ಸವ ಪ್ರಯುಕ್ತ ವಿಶೇಷ ಪೂಜೆಗಳು ನಡೆದವು. ನಂತರ ದೇವಸ್ಥಾನದ ಪೂಜಾರಿಯಿಂದ ಅಗ್ನಿ ಪ್ರವೇಶ, ಕಾಯಿ ಪವಾಡ, ಕತ್ತಿ ವರಸೆ ನಡೆದವು. ಚಿಲಝರಿ ಗ್ರಾಮದಿಂದ ರಥದ ಹಗ್ಗ, ಸೂಡಿ, ಬೆನಹಾಳ, ಬೇಲೂರ, ಪೂರ್ತಗೇರಿ ಗ್ರಾಮಗಳಿಂದ ಕಳಸಗಳನ್ನು ಮೆರವಣಿಗೆಯಲ್ಲಿತರಲಾಯಿತು. ಸಂಜೆ ಮಹಾ ರಥೋತ್ಸವ ಭಕ್ತ ಸಾಗರದ ಮದ್ಯೆ ಶ್ರದ್ಧಾ ಭಕ್ತಿಯಿಂದ ನಡೆಯಿತು. ರಥೋತ್ಸವದಲ್ಲಿ ಭಕ್ತರು ಶ್ರೀ ದುರ್ಗಾದೇವಿ ಮಾತಾ ಕಿ ಜೈ ಎಂದು ಜಯಘೋಷ ಹಾಕುತ್ತಾ, ಬಾಳೆಹಣ್ಣು, ಉತ್ತತ್ತಿ ಸಮರ್ಪಸಿದರು. ಭಜನೆ, ಜಾಂಜ್‌ಮೇಳ, ಸಕಲ ಮಂಗಲ ವಾಧ್ಯಗಳು ಮೇಳೈಸಿದವು. ರಥವು ಯಶಸ್ವಿಯಾಗಿ ಮರಳಿ ಸ್ವಸ್ಥಳಕ್ಕೆ ಬಂದು ನಿಂತಾಗ ಚಪ್ಪಾಳೆ ತಟ್ಟಿದ ಭಕ್ತರು ಭಕ್ತಿಭಾವ ಮೆರೆದರು.

Exit mobile version