ಸಂಭ್ರಮದ ಯಲಗೂರ ರಥೋತ್ಸವ


ಚಿತ್ರ ವರದಿ: ಗುಲಾಬಚಂದ ಜಾಧವ
ಆಲಮಟ್ಟಿ :
ಎಲ್ಲಡೆ ಜಯಘೋಷದ ಕರತಾಡನ.ಅಪಾರ ಭಕ್ತಾದಿಗಳ ಮೊಗದಲ್ಲಿ ಸಂಭ್ರಮೋಲ್ಲಾಸ.ಕಣಕಣದಲ್ಲೂ ಅಮಿತ್ಯೋತ್ಸಾಹ. ಈ ದೃಶ್ಯ ವೈಭವ ಆಧ್ಯಾತ್ಮಿಕ ತರಂಗಕ್ಕೆ ಹೆಸರುವಾಸಿಯಾದ ಕೃಷ್ಣೆ ತಟದ ಸುಕ್ಷೇತ್ರ ಯಲಗುರೇಶನ ಅಂಗಳದಲ್ಲಿ ಭಾನುವಾರ ಸಂಜೆ ವಿಜೃಂಭಿಸಿತು.


ಅಸಂಖ್ಯ ಭಕ್ತರ ಹೃದಯ ಗೆದ್ದಿರುವ ಯಲಗೂರ ಹನುಮನ ಕಾರ್ತಿಕೋತ್ಸವ ನಿಮಿತ್ಯ ಅದ್ದೂರಿಯಾಗಿ ಜರುಗಿದ ರಥೋತ್ಸವದಲ್ಲಿ ಅಭೂತಪೂರ್ವ ಭಕ್ತಿರಸಭಾವ ನೋಟ ಅನಾವರಣವಾಗಿತ್ತು. ಸಹಸ್ರಾರು ಭಕ್ತರ ಮಧ್ಯೆ ಸಂಭ್ರಮ,ಸಡಗರದಿಂದ ರಥೋತ್ಸವದ ತೇರು ಎಳೆಯಲಾಯಿತು.
ಗೋವಿಂದ, ಗೋವಿಂದ ಎಂಬ ಘೋಷಣೆ ಎಲ್ಲೆಡೆ ಝೇಂಕರಿಸಿ ಮೊಳಗಿತು. ಕಿವಿ ಗಡಚುವಂತೆ ಮಾರ್ದನಿಸಿತು ಉದ್ಗೋಷದ ನಿನಾದ.
ಗ್ರಾಮದ ಪ್ರಮುಖ ಬೀದಿಗಳ ಇಕ್ಕೆಲಗಳಲ್ಲಿ ನಿಂತು ಭಕ್ತರು ರಥೋತ್ಸವ ವನ್ನು ವೀಕ್ಷಿಸಿ ಸಂಭ್ರಮ ಪಟ್ಟರು.
ಅಹೋರಾತ್ರಿ ದಾಸ ವಾಣಿ ಸ್ವರ ಮಾಧುರ್ಯ ಝೇಂಕಾರ;
ಇಲ್ಲಿಯ ತೆಂಗಿನ ತೋಟದ ವೇದಿಕೆಯಲ್ಲಿ ಅಹೋರಾತ್ರಿ ಸಂಗೀತ ದಾಸವಾಣಿ ;ಸಂಜೆ 6 ಘಂಟೆಯಿಂದ ಬೆಳಗ್ಗೆ 5 ಘಂಟೆ ವರೆಗೆ ಗಾಯನ ಮತ್ತು ದಾಸ ವಾಣಿ, ಸ್ನೇಹಾ ಮತ್ತು ಪ್ರೇಮಾ ಕಡಿವಾಲ ,ಬಿ.ಬಿ. ಕುಲಕರ್ಣಿ,
ಜ್ಯೋತಿ ನಾಗೇಶ , ವರ್ಷ ಕುಲಕರ್ಣಿ, ಕು || ವರ್ಷ ಮತ್ತು ವೃಂದಾ ಬಿದರಹಳ್ಳಿ ನೃತ್ಯ , ನಟರಾಜ ಸಂಗೀತ ನೃತ್ಯ ನಿಕೇತನ, ಬಾಗಲಕೋಟದ ವಿಧ್ಯಾರ್ಥಿಗಳಿಂದ
ನೃತ್ಯ , ಸೌಜನ್ಯ ಮೋಹರೆ, ರಜತ ಆರ್ ಕುಲಕರ್ಣಿ ಬಾಬಯ್ಯ ಚೆನ್ನಯ್ಯ ದೇಗಾಂವಿಮಠ ತಬಲಾ ಸೋಲೊ , ವೀಣಾ. ಬಡಿಗೇರ , ಓಂಕಾರ ಕರಕಂಬಿ , ನೇತ್ರ ಜೋಶಿ , ಸ್ವಾತಿ ಉತ್ತರೇಶ್ವರ , ಸ್ನೇಹ ಕಡಿವಾಲ ,ಪಂ. ನಟರಾಜ ಮಹಾಜನಸಂತೋಷ ಗದ್ದನಕೇರಿ
ಕುಮಾರ ಜಯತೀರ್ಥ ತಾಸಗಾವ , ರಾಘವೇ ಜರುಗಿತು. ಜಮಖಂಡಿ ರಾಜೇಂದ್ರ ದೇಶಪಾಂಡೆ, ವಿದೂಷಿ ಸಂಗೀತಾ ಕಟ್ಟಿ ಕುಲಕರ್ಣಿ ಅವರು ನೀಡಿದ ಗಾಯನಕ್ಕೆ ಸಂಗೀತ ಪ್ರಿಯ ಶೋತೃುಗಳು ತಲೆದೂಗಿದರು. ಭವ್ಯಾ ರಾಣಿ, ಬಿಂದು ಮಾಧವಾಚಾರ್ಯ ಕಡಿವಾಲ, ಅಮಿತ ಮನಗೂಳಿ, ಅನೂಪ್ ಕುಲಕರ್ಣಿ, ಪುನಿತ್ ದೇಶಪಾಂಡೆ ನಿರೂಪಿಸಿದರು.
ಅನುಗ್ರಹ ಪ್ರಶಸ್ತಿ ಪ್ರಧಾನ;
ಖ್ಯಾತ ಸಂಶೋಧಕ ಕೃಷ್ಣ ಕೊಲ್ಹಾರ ಕುಲಕರ್ಣಿ ಅವರಿಗೆ ಯಲಗೂರೇಶ ಅನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ರಂಜಿಸಿದ ಗೊಂಬೆಗಳ ಕುಣಿತ; ಮೂಕಿಹಾಳದ ಕುದುರೆ ಕುಣಿತ, ಗೊಂಬೆಗಳ ಕುಣಿತ ರಂಜಿಸಿತು. ಶ್ಯಾಮ ಪಾತರದ ಈ ಕಾರ್ಯಕ್ರಮ ಉದ್ಘಾಟಿಸಿದರು.
ರಾತ್ರಿ ಹೊಂಡ ಪೂಜೆ ಜರುಗಿತು

Exit mobile version