ನಮ್ಮ ಸಂಸ್ಕೃತಿ ಅನುಸರಿಸಿ : ಪ್ರಹ್ಲಾದ ಹೊಸಳ್ಳಿ

ಗದಗ: ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗದೆ ದೇಶದ ಧರ್ಮ, ಸಂಸ್ಕೃತಿಯನ್ನು ಅನುಸರಿಸಿ, ಯುವ ಜನತೆ ಒಕ್ಕಟ್ಟಿನಿಂದ ಸಮಾಜಕ್ಕೆ ಗೌರವ ತರುವಂತಹ ಕಾರ್ಯಚಟುವಟಿಕೆಗಳನ್ನು ಮಾಡಬೇಕೆಂದು ತಾಲೂಕ ಪಂಚಾಯತ ಮಾಜಿ ಸದಸ್ಯ ಪ್ರಹ್ಲಾದ ಹೊಸಳ್ಳಿ ಹೇಳಿದರು.

ತಾಲೂಕಿನ ಅಡವಿಸೋಮಾಪುರ ಗ್ರಾಮದಲ್ಲಿ ರವಿವಾರ ಹಮ್ಮಿಕೊಂಡ ಛತ್ರಪತಿ ಶಿವಾಜಿ ಮಹಾರಾಜರ 394ನೇ ಜಯಂತಿ ಆಚರಣೆಗೆ ಚಾಲನೆ ನೀಡಿ ಮಾತನಾಡಿದರು.

ಪ್ರತಿಯೊಬ್ಬರು ನಮ್ಮ ಧರ್ಮ, ಸಂಸ್ಕೃತಿಯನ್ನು ಎತ್ತಿಹಿಡಿಯಬೇಕು. ಧರ್ಮ ಜಾತಿ, ಬೇಧಬಾವ ಮರೆತು ಯುವ ಜನತೆ ಒಂದಾಗಿ ಸಮಾಜದ ಅಭಿವೃದ್ಧಿಗೆ ಕೆಲಸ ಮಾಡಬೇಕು ಎಂದು ಹೇಳಿದರು.

ಹಿಂದೂ ಸಾಮ್ರಾಜ್ಯ ರಚನೆ ಜೊತೆಗೆ ಭಾರತೀಯರಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿದ ಶಿವಾಜಿ ಮಹಾರಾಜರು ನಮ್ಮೆಲ್ಲರ ನಾಯಕರು. ಧರ್ಮವನ್ನು ಉಳಸಿ ಬೆಳಸಿದ ಮಹಾನ್ ಹೋರಾಟಗಾರರ ಜೀವನ ಚರಿತ್ರೆಗಳ ಬಗೆಗೆ ನಾವೂ ತಿಳಿದುಕೊಳ್ಳಬೇಕು. ಅನೈತಿಕ ಚಟುವಟಿಕೆಗಳನ್ನು ತಟೆಗಟ್ಟುವಲ್ಲಿ ಯುವಕರು ಜಾಗೃತೆಯನ್ನು ವಹಿಸಬೇಕು ಎಂದು ಹೇಳಿದರು.

ಸಮಾಜಕ್ಕೆ ಸಾತ್ವಿಕ ಸಂದೇಶಗಳನ್ನು ಸಾರಿ ಜಗತ್ತಿಗೆ ಮಾದರಿಯಾದ ಛತ್ರಪತಿ ಶಿವಾಜಿ ಮಹಾರಾಜರಂತೆ ನಾವೆಲ್ಲ ಬದುಕಬೇಕು. ಯುವಕರು ದೇಶಪ್ರೇಮ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕು ಎಂದರು.

ವಿಶ್ವ ಹಿಂದು ಪರಿಷತ್ ಸಹ ಕಾರ್ಯದರ್ಶಿ ರಾಘವೇಂದ್ರ ಹಬೀಬ ಮಾತನಾಡಿ, ಹಿಂದೂ ಧರ್ಮ ರಕ್ಷಣೆ, ಉಳಿಸಿ, ಬೆಳಸುವುದು ಯುವಕರ ಆಧ್ಯ ಕರ್ತವ್ಯವಾಗಿದೆ. ಮಹಾನ್ ನಾಯಕರ, ಹೋರಾಟಗಾರರ ಜೀವನ ಚರಿಕತ್ರೆಯನ್ನು ಅರಿತುಕೊಂಡು ಅದರಂತೆ ಬದುಕಬೇಕು ಎಂದು ತಿಳಿಸಿದರು.

ಸಮಾರಂಭದ ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜೈ ಭವಾನಿ, ಜೈ ಶಿವಾಜಿ ಘೋಷಣೆಗೆಯನ್ನು ಕೂಗುತ್ತಾ ಶಿವಾಜಿ ಮಹಾರಾಜದ ಬಾವಚಿತ್ರದೊಂದಿಗೆ ಸಂಚರಿಸಿದ ಭವ್ಯವಾದ ಮೆರವಣಿಗೆಯು ಅದ್ದೂರಿಯಾಗಿ ಜರುಗಿತು.

ಗಣೇಶ ಜಡಿ, ಗ್ರಾ.ಪಂ ಸದಸ್ಯ ಮಲ್ಲಪ್ಪ ಅಸುಂಡಿ, ಸುರೇಶ ಹಾದಿಮನಿ, ಮಂಜುನಾಥ ಕರಿ, ಕುಮಾರ ಗಂಗಿಮಡಿ, ಮಂಜುನಾಥ ಮೇಟಿ, ಮಂಜುನಾಥ ಜಡಿ, ಲೋಹಿತ್‌ಗೌಡ ಕರಿಗೌಡ, ಮುತ್ತು ಜಡಿ, ಸಂತೋಷ ವಾಲ್ಮೀಕಿ, ರಮೇಶ ಹೊಸಳ್ಳಿ, ರಾಮು ಗಡಾದ, ಶಿವಾನಂದ ಹುಲಗಣ್ಣವರ ಮುಂತಾದವರು ಉಪಸ್ಥಿತರಿದ್ದರು.

Exit mobile version