ಇಂದು ಆರ್ಟ್ ಅಡ್ಡಾ ಉದ್ಘಾಟನೆ

ಗದಗ: ನಗರದ ಹಾಕಿ ಗ್ರೌಂಡ ಹತ್ತಿರ, ಎಸ್.ಎಂ.ಕೃಷ್ಣ ನಗರ ರಸ್ತೆಯ ಬಳಿ ಮಾ.6 ರಂದು ಶನಿವಾರ ಸಂಜೆ 6-30ಕ್ಕೆ ಬಣ್ಣದ ಮನೆ ಸಾಂಸ್ಕೃತಿಕ ವೇದಿಕೆ ವತಿಯಿಂದ ಆರ್ಟ್ ಅಡ್ಡಾ ಸಭಾಭವನ ಉದ್ಘಾಟನೆ ಹಾಗೂ ಸಂಧ್ಯಾ ಸುರಾಗ ಕಾರ್ಯಕ್ರಮ ನೆರವೇರುವುದು.
ಸಾಂಸ್ಕೃತಿಕ ಸಭಾಭವನದ ಉದ್ಘಾಟನೆಯನ್ನು ಹಿರಿಯ ಹಿಂದೂಸ್ತಾನಿ ಸಂಗೀತಗಾರರಾದ ಪಂಡಿತ ಡಾ.ಎಂ.ವೆAಕಟೇಶಕುಮಾರ ವಹಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿಗಳಾದ ಡಾ.ಅರ್ಜುನ ಗೊಳಸಂಗಿ ವಹಿಸುವರು. ಗಣ್ಯ ವ್ಯಾಪಾರಸ್ಥರಾದ ಸಂಜಯ ಬಾಗಮಾರ, ಹಿರಿಯ ಕಲಾವಿದರಾದ ಆರ್.ಡಿ.ಕಡ್ಲಿಕೊಪ್ಪ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಸಂಧ್ಯಾ ಸುರಾಗ ಸಂಗೀತ ಕಾರ್ಯಕ್ರಮವನ್ನು ಪಂಡಿತ ವೆಂಕಟೇಶಕುಮಾರ ಅವರ ಶಿಷ್ಯೆ ಕು.ಐಶ್ವರ್ಯಾ ದೇಸಾಯಿ ನಡೆಸುವರು. ಇವರಿಗೆ ಕೇಶವ ಜೋಷಿ ತಬಲಾ ಸಾಥ್, ಸತೀಶ ಕೊಳ್ಳಿ ಹಾರ್ಮೋನಿಯಂ ಸಾಥ್ ನೀಡುವರು. ಕಾರ್ಯಕ್ರಮಕ್ಕೆ ಕಲಾಸಕ್ತರು ಭಾಗವಹಿಸಿ ಯಶಸ್ವಿಗೊಳಿಸಲು ಬಣ್ಣದ ಮನೆ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ವಿಜಯ ಕಿರೇಸೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version