ಲಕ್ಷ್ಮೇಶ್ವರ: ಭಾರತ ಹಳ್ಳಿಗಳ ದೇಶ, ಕೃಷಿಯನ್ನೇ ಅವಲಂಭಿಸಿ ದೇಶದಅಂದಾಜು ಶೇ.67 ರಷ್ಟು ಜನಸಂಖ್ಯೆ ಬದುಕುತ್ತಿದೆ. ಕಾಲಕಾಲಕ್ಕೆ ಸರಿಯಾಗಿ ಮಳೆ ಬೆಳೆ ಬೆಲೆ ಬಾರದೇ ರೈತನ ಬಾಳು ಕಣ್ಣಿರಿನ ಗೋಳಾಗಿದೆ.
ಅತಿವೃಷ್ಟಿ ಮತ್ತು ಅನಾವೃಷ್ಟಿ ರೈತನ ಬಾಳಿನಲ್ಲಿ ಚೆಲ್ಲಾಟವಾಡುತ್ತಿವೆ. ಸ್ವಾತಂತ್ರ್ಯಯ ನಂತರದಲ್ಲಿ ಕೃಷಿಗೆ ಸಾಕಷ್ಟು ಪ್ರೋತ್ಸಾಹವನ್ನು ನೀಡಿದಾಗಲೂ ಕೂಡ ನಿರಿಕ್ಷಿತ ಮಟ್ಟದಲ್ಲಿ ಅಭಿವೃದ್ದಿ ಮತ್ತು ಬೆಳವಣಿಗೆಯಾಗಿದ್ದು ವಿಷಾದಕರ ಸಂಗತಿ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತಿವರ್ಷ ತನ್ನ ಬಜೆಟ್‌ಗಳಲ್ಲಿ ಕೋಟ್ಯಾಂತರ ರೂ. ಕೃಷಿ ಮತ್ತು ಪೂರಕ ಕ್ಷೇತ್ರಗಳಿಗೆಗಾಗಿ ಮೀಸಲಿಟ್ಟಾಗಲು ಕೂಡಾ ಅದು ಅರ್ಹ ಕೃಷಿಕನಿಗೆ ತಲುಪದೇ ಇರುವುದು ಗುಟ್ಟಾಗಿ ಉಳಿದಿಲ್ಲ. ರೈತನ ಅಭಿವೃದ್ದಿಯೇ ದೇಶದ ಅಭಿವೃದ್ಧಿ ರೈತನ ದೇಶದ ಬೆನ್ನೆಲುಬು ಎಂಬುದು ಕೇವಲ ಭಾಷಣ ಮತ್ತು ಬಿಳಿ ಹಾಳೆಗಳಲ್ಲಿ, ವಿದ್ಯುತ್ ವಾಹಿನಿಗಳಲ್ಲಿ ಪ್ರಸಾರವಾದರೇ ಸಾಲದು ಬದಲಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ನಿಟ್ಟಿನಲ್ಲಿ ಕಟ್ಟುನಿಟ್ಟಾಗಿ ರೈತ ಪರವಾಗಿ ಕಾರ್ಯಕ್ರಮಗಳನ್ನು ರೂಪಿಸಿ, ಪ್ರಚುರಪಡಿಸಿ, ಅನುಷ್ಠಾನಗೊಳಿಸಿ, ಕಟ್ಟ ಕಡೆಯ ರೈತನಿಗೆ ತಲುಪುವಂತೆ ಮಾಡಬೇಕಾಗಿದೆ.
ಈ ನಿಟ್ಟಿನಲ್ಲಿ ಅಂದಾಜು ಮತ್ತು ಸಂಶೋಧನೆಯ ಪ್ರಕಾರ ರೈತ ಕಷ್ಟಪಟ್ಟು ಬೆಳೆದ ಬೆಳೆಯನ್ನು ಅವನ ಜಮೀನುಗಳಿಂದ ಮಾರುಕಟ್ಟೆಗೆ ಅಥವಾ ಸುರಕ್ಷಿತ ಸ್ಥಳಗಳಿಗೆ ತರುವಲ್ಲಿ ಅಂದಾಜು ಶೇ.16 ನಷ್ಟು ವಿಫಲನಾಗುತ್ತಿದ್ದಾನೆ. ಬೆಳೆದ ಬೆಳೆ ಜಮೀನುಗಳಲ್ಲಿಯೇ ಹಾಳಾಗಿ ಹೋಗುತ್ತಿರುವುದನ್ನು ತಾವೆಲ್ಲ ಕಂಡಿರಬಹುದು. ಇದಕ್ಕೆ ಕಾರಣ ಅತಿವೃಷ್ಟಿ, ಜಮೀನಿಗಳಿಗೆ ಸರಿಯಾದ ರಸ್ತೆ ಸಂಕರ್ಪವಿಲ್ಲದಿರುವುದು. ಸಂಕರ್ಪ ರಸ್ತೆಗಳು ಗುಣಮಟ್ಟದ ರಸ್ತೆಗಳಾಗದೇ ತಾತ್ಕಾಲಿಕ ಮಣ್ಣು ಮಟ್ಟಿಯಿಂದ ಕೂಡಿರುವುದರಿಂದ ಎತ್ತು ಚಕ್ಕಡಿಯಾಗಲಿ, ಟ್ರಾಕ್ಟçರ್‌ಗಳಾಗಲಿ, ಚಿಕ್ಕ-ಪುಟ್ಟ ವಾಣಿಜ್ಯ ವಾಹನಗಳಾಗಲಿ ಜಮೀನುಗಳಿಂದ ರೈತನ ಬೆಳೆಯನ್ನು ಬೇರೆಡೆ ಸಾಗಿಸಲು ಸಾಧ್ಯವಾಗುತ್ತಿಲ್ಲ.
ಈಗಾಗಲೇ ಕೇಂದ್ರ ಸರ್ಕಾರದ ಮಹಾತ್ಮ ಗಾಂಧಿ ರಾಷ್ಟಿಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ(ನರೇಗಾ) ಅಡಿಯಲ್ಲಿ ಪುರುಷ ಮತ್ತು ಮಹಿಳೆಯರು ದೈಹಿಕ ಶ್ರಮದ ಮೂಲಕ ರಾಷ್ಟçದ ಅಭಿವೃದ್ದಿಗೆ ಪೂರಕವಾಗುವ ರಸ್ತೆ, ಕ್ಯಾನಲ್ ಮತ್ತು ಬಾವಿಗಳನ್ನು ತೆಗೆಯಲು ಗ್ರಾ.ಪಂ ಮೂಲಕ ಪ್ರತಿ ವರ್ಷ ಕನಿಷ್ಠ 100 ದಿನಗಳ ಕಾಲ ಉದ್ಯೋಗ ಒದಗಿಸಬೇಕು. ಈ ಯೋಜನೆಯಡಿಯಲ್ಲಿ ಅನವಶ್ಯಕವಾಗಿ ಜಮೀನುಗಳಲ್ಲಿ ಒಡ್ಡು ಹಾಕಿಸುವುದು, ಬದುವು ನಿರ್ಮಿಸುವುದು ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ವಿನಾಕಾರಣ ಸರ್ಕಾರದ ಬೊಕ್ಕಸ ಲೂಟಿಯಾಗುತ್ತಿದೆ.
ಕೇಂದ್ರ ಸರ್ಕಾರದ ನರೇಗಾ ಯೋಜನೆಯನ್ನು ನಮ್ಮಜಮೀನು ನಮ್ಮರಸ್ತೆ ಎಂಬ ಹೊಸ ಯೋಜನೆಯ ಮೂಲಕ ಸದ್ಯಕ್ಕೆ ಜಮೀನು ಸಂಪರ್ಕಿಸಲು ಇರುವ ಕಾಲ್ದಾರಿ, ಚಕ್ಕಡಿದಾರಿ, ಸರ್ಕಾರಿ ದಾರಿಗಳನ್ನು ಕನಿಷ್ಠ 5 ಮೀ. ವಿಸ್ತರಿಸಿ ನರೇಗಾಕಾರ್ಡ ಹೊಂದಿರುವ ಪುರುಷ ಮತ್ತು ಮಹಿಳಾ ಕಾರ್ಮಿಕರುಗಳಿಂದ ಜಮೀನು ಸಂಪರ್ಕಿಸುವ ಒಳ ದಾರಿಗಳನ್ನು ಪಕ್ಕಾ ರಸ್ತೆಗಳನ್ನಾಗಿ ಮಾಡಬಹುದು. ರಸ್ತೆಯುದ್ದಕ್ಕೂಎರಡು ಬದಿ ಕಚ್ಚಾ ಗಟಾರಗಳನ್ನು ನಿರ್ಮಿಸಿ ಅದರ ಇಕ್ಕೆಲುಗಳಲ್ಲಿ ಸಸಿಗಳನ್ನು ನೆಟ್ಟರೆ ಮಣ್ಣಿನ ಸವಕಳಿಯನ್ನು ತಡೆಗಟ್ಟ ಬಹುದು. ಜೊತೆಗೆ ಬೇಸಿಗೆಯಲ್ಲಿ ನೆರಳನ್ನು ಪಡೆಯಬಹುದಲ್ಲದೇ ರಸ್ತೆಗೂ ಸುರಕ್ಷಿತ ಕವಚವಾಗಿ ಹೊರಹೊಮ್ಮುತ್ತದೆ. ಜಮೀನುಗಳನ್ನು ಸಂಪರ್ಕಿಸುವ ರಸ್ತೆಗಳನ್ನು ಡಾಂಬರೀಕರಣ ಮಾಡಿದರೆ ಒಳ್ಳೆಯದು. ಮಾಡದಿದ್ದರೇ ಕನಿಷ್ಟ ಮೋಹರಂ ಹಾಕಿ ರೋಲರ್ ಓಡಾಡಿಸಿದರೆ ಸಾಕಷ್ಟು ಗಟ್ಟಿಯಾಗಿ ರೈತರಿಗೆ ತಮ್ಮ ಜಮೀನುಗಳಿಗೆ ಎಲ್ಲ ಕಾಲಗಳಲ್ಲೂ ಸಂಪರ್ಕಿಸಿಲು ಸಹಾಯವಾಗಿ ತಾವುಗಳು ಬೆಳೆದ ಬೆಳೆಯನ್ನು ಸಕಾಲಕ್ಕೆ ಮಾರುಕಟ್ಟೆಗೆ ಸುರಕ್ಷಿತ ಸ್ಥಳಗಳಿಗೆ ತಲುಪಿಸಲು ಸಹಾಯವಾಗುತ್ತದೆ. ಇದರಿಂದ ರಾಷ್ಟೀಯ ಉತ್ಪನ್ನವು ಹೆಚ್ಚುತ್ತದೆ. ನರೇಗಾ ಯೋಜನೆಯ ಸಂಪೂರ್ಣ ಲಾಭವನ್ನು ಪಡೆದುಕೊಂಡತಾಗುತ್ತದೆ.
-ಸೋಮೇಶ ಜ.ಉಪನಾಳ, ಲಕ್ಷ್ಮೇಶ್ವರ
