ದನದ ಕೊಟ್ಟಿಗೆಯಂತಾದ ಬಸ್ ತಂಗುದಾನ

ನರೇಗಲ್: ಸಮೀಪದ ಮಜರೆ ಕೂಡಿಕೊಪ್ಪ ಗ್ರಾಮದಲ್ಲಿ 2015-16 ರ ಸಾಲಿನಲ್ಲಿ 4 ಲಕ್ಷ ವೆಚ್ಚದಲ್ಲಿ  ಬಸ್ ನಿಲ್ದಾಣವನ್ನು ನಿರ್ಮಾಣ ಮಾಡಲಾಗಿದೆ,

ಹಲವು ವರ್ಷಗಳಿಂದ ಈ ಮಿನಿ ಬಸ್ ನಿಲ್ದಾಣದಲ್ಲಿ ದನಗಳನ್ನು ಕಟ್ಟುತ್ತಿದ್ದು ಪ್ರಯಾಣಿಕರಿಗೆ ಉಪಯೋಗವಿಲ್ಲದೆ ಸರಕಾರಿ ಆಸ್ತಿಯನ್ನು ದನದ ಕೊಟ್ಟಿಗೆ ಮಾಡಿ ಕೊಂಡಿದ್ದು ಇದನ್ನು ಆದಷ್ಟು ಬೇಗ ಸ್ವಚ್ಛಗೊಳಿ ಪ್ರಯಾಣಿಕರ ಉಪಯೋಗಕ್ಕೆ ಕೊಡಬೇಕು ಎಂದು ಸ್ಥಳೀಯ, ಹಸನಸಾಬ್ ಕೊಪ್ಪಳ ಹೇಳಿದರು.

ಈ ರಸ್ತೆಯ ಮಾರ್ಗದಲ್ಲಿ ಪ್ರಮುಖ ಶಿಕ್ಷಣ ಸಂಸ್ಥೆಯಾದ ಶ್ರೀ ಅನ್ನದಾನೆಶ್ವರ ಶಿಕ್ಷಣ ಸಂಸ್ಥೆ ಇದ್ದು ದಿನ ನಿತ್ಯ ಸಾವಿರಾರು ವಿಧ್ಯಾರ್ಥಿಗಳು ಹಾಗೂ ಪ್ರಯಾಣಿಕರು ಸಂಚರಿಸುತ್ತಾರೆ. ಹಾಗೂ ಈ ನಿಲ್ದಾಣದಲ್ಲಿ ದನಗಳನ್ನು ಕಟ್ಟಿರುವುದರಿಂದ ಬಸ್ ಇಲ್ಲಿ ನಿಲ್ಲಲ್ಲಾ ಹಾಗೂ ಪ್ರಯಾಣಿಕರು ಕೂಡಾ ಇಲ್ಲಿ ನಿಂತು ಪ್ರಯಾಣ ಮಾಡುದಿಲ್ಲ, ಆದರೆ ಪ್ರಯಾಣಿಕರಿಗೆ ಉಪಯೋಗ ವಾಗಬೇಕಾದ ಬಸ್ ನಿಲ್ದಾಣ ದನದ ಕೊಟ್ಟಿಗೆಯಾಗಿದ್ದು ಹಾಗೂ ನಿಲ್ದಾಣದ ಒಳಗೆ ಹೊಟ್ಟು ಮೇವು ಹಾಕಿದ್ದು ಕಸದ ತೊಟ್ಟಿ ನಿರ್ಮಾಣವಾಗಿದೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಇದಕ್ಕೆ ಸಂಬಧಿಸಿದ ಅಧಿಕಾರಿಗಳು ಇದನ್ನು ದುರಸ್ತಿ ಗೊಳಿಸಿ ಪ್ರಯಾಣಿಕರಿಗೆ ಉಪಯೋಗಕ್ಕೆ ನೀಡಬೇಕು.ಎಂದು ಪ್ರಯಾಣಿಕರಾದ, ಪರಶುರಾಮ ರಾಥೋಡ್, ನಿಲಪ್ಪ ಬಡಿಗೇರ ಆಗ್ರಹಿಸಿದರು.

Exit mobile version