ನರೆಗಲ್ ಗಾರ್ಡನ್ ಕಥೆ: 10 ಲಕ್ಷ ಖರ್ಚು ಮಾಡಿ 9 ವರ್ಷವಾದ್ರು, ಉಪಯೋಗಕ್ಕೆ ಬಾರದ ಉದ್ಯಾನವನ..!

ಗದಗ: ದೇವಾಲಯದ ಪಕ್ಕದಲ್ಲಿರುವ ಉದ್ಯಾನವನ ದೇವರು ವರ ಕೊಟ್ರು ಪೂಜಾರಿ ವರ ಕೊಡಲಿಲ್ಲ ಎನ್ನುವಂತಿದೆ. ಸರ್ಕಾರ ನೀಡಿದ ಲಕ್ಷಾಂತರ ಹಣ ದೇವರ ಹುಂಡಿಗೆ ಹಾಕಿದಂತಾಗಿದೆ. ನರೇಗಲ್ಲನ ಈಶ್ವರ ದೇವಾಲಯದ ಪಕ್ಕದಲ್ಲಿನ ಉದ್ಯಾನವನದ ಕಥೆ ಇದು.

ಹೌದು ಪಟ್ಟಣದ 16ನೇ ವಾರ್ಡಿನಲ್ಲಿ ಇರುವ ಈಶ್ವರ ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆ ಹಾಗೂ ವಾರ್ಡಿನ ನಾಗರಿಕರಿಗೆ ಅನಕೂಲವಾಗಲಿ ಎನ್ನುವ ಉದ್ದೇಶದಿಂದ ಇಲ್ಲಿ ಉದ್ಯಾನವನ ನಿರ್ಮಾಣ ಮಾಡಲಾಗಿತ್ತು.

10 ಲಕ್ಷ 9 ವರ್ಷವಾದರೂ ಪ್ರಯೋಜನಕ್ಕಿಲ್ಲ
2010 -11ನೇ ಸಾಲಿನಲ್ಲಿ ಅಂದಾಜು 10 ಲಕ್ಷ ರೂಪಾಯಿ ಖರ್ಚು ಮಾಡಿ ನಿರ್ಮಿಸಲ್ಪಟ್ಟಿದ್ದ ಉದ್ಯಾನವನ 9 ವರ್ಷಗಳು ಕಳೆದರು ಸಹ ಪ್ರಯೋಜನಕ್ಕೆ ಬಾರದಂತಾಗಿದೆ.


ಅಷ್ಟೇ ಅಲ್ಲದೇ ಈ ಉದ್ಯಾನವನಕ್ಕೆ ಹೋಗಲು ಸರಿಯಾದ ರಸ್ತೆ ಹಾಗೂ ದಾರಿ ಇಲ್ಲದೆ ಇರುವುದರಿಂದ ಉದ್ಯಾನವನ ಎಲ್ಲಿದೆ ಎಂದು ನೋಡುವ ಭಾಗ್ಯವೂ ಇಲ್ಲಿನ ದೇವಸ್ಥಾನಕ್ಕೆ ಬರುವ ಭಕ್ತರಿಗೆ, ವಾರ್ಡಿನ ನಾಗರಿಕರಿಗೆ ಸಿಕ್ಕಿಲ್ಲ. ಈ ಉದ್ಯಾನವನವೂ ಅಭಿವೃದ್ಧಿಗೊಂಡರೆ ಬಸ್ ನಿಲ್ದಾಣ ಸಮೀಪ ಇರುವುದರಿಂದ ಪ್ರಯಾಣಿಕರಿಗೆ, ವಾಹನ ಚಾಲಕರಿಗೆ, ನಿರ್ವಾಹಕರಿಗೆ ಬಂದು ವಿಶ್ರಾಂತಿ ಪಡೆಯಲು ಅನಕೂಲವಾಗುತ್ತದೆ. ಅಷ್ಟೇ ಅಲ್ಲದೆ ಬಸ್ ನಿಲ್ದಾಣ ಹಾಗೂ ಮಳಿಗೆಗಳ ಸುತ್ತಲೂ ವ್ಯಾಪರ ಮಾಡುವ ವ್ಯಾಪರಸ್ಥರಿಗೂ ಕೊಂಚ ವಿಶ್ರಾಂತಿಗೆ ಅನುಕೂಲವಾಗುತ್ತದೆ.
ಆದರೆ ಅಭಿವೃದ್ಧಿಯೂ ಮರಿಚಿಕೆಯಾಗಿದ್ದು, ಈ ಉದ್ಯಾನವನದಲ್ಲಿ ಕೂಡಾ ನೀರಿನ ವ್ಯವಸ್ಥೆ ಇಲ್ಲ ಗಿಡಗಳು ಕೆಳುವುದೆ ಬೇಡ.

ಐತಿಹಾಸಿಕ ಹಿನ್ನಲೇ ಹೊಂದಿರುವ ಈಶ್ವರ ದೇವಸ್ಥಾನದ ಆವರಣದಲ್ಲಿ ಉದ್ಯಾನವನ ನಿರ್ಮಿಸುತ್ತೇವೆ ಎಂದು ನಿರ್ಲಕ್ಷ್ಯತನ ತೋರಿರುವ ಪಟ್ಟಣ ಪಂಚಾಯ್ತಿ ಅಧಿಕಾರಿಗಳು, ಸಿಬ್ಬಂದಿಗಳು ದೇವಸ್ಥಾನಕ್ಕೆ ಹೋಗಲು ದಾರಿ, ಗಿಡಗಳನ್ನು ನೆಟ್ಟು ಅಭಿವೃದ್ಧಿ ಪಡಿಸಲು ಮುಂದಾಗಬೇಕು

– ಯಲ್ಲಪ್ಪ ಮಣ್ಣವಡ್ಡರ. ಬಸವರಾಜ ಹಿರೇಮಠ, ಶಿವಣ್ಣ ಬೇಕರಿ, ಸ್ಥಳೀಯ ನಿವಾಸಿಗಳು

Exit mobile version