ನಿಮ್ಮ ಡೇಟಾ ಇದ್ದರೆ ಕೂಡಲೇ ಸೇವ್ ಮಾಡಿಕೊಳ್ಳಿ

ಗೂಗಲ್ : ಫೆ.24 ರಿಂದ ಆಚೆಗೆ ತನ್ನ ಪ್ಲೇ ಮ್ಯೂಸಿಕ್ ಅಪ್ಲಿಕೇಶನ್ ಅನ್ನು ಸ್ಥಗಿತಗೊಳಿಸುವುದಾಗಿ ತನ್ನ ಬಳಕೆದಾರರಿಗೆ ಇ-ಮೇಲ್ ಮುಖಾಂತರ ಈಗಾಗಲೇ ತಿಳಿಸಿದೆ.

ಪ್ಲೇ ಮ್ಯೂಸಿಕ್ ಲೈಬ್ರರಿಯಲ್ಲಿ ಮಾಡಲಾದ ಅಪ್ಲೋಡ್‌ಗಳು, ಖರೀದಿಗಳು ಸೇರಿದಂತೆ ಎಲ್ಲಾ ದತ್ತಾಂಶಗಳೂ ಮುಂದಿನ ವಾರ ಅಳಿಸಿ ಹೋಗಲಿದ್ದು, ಇವುಗಳನ್ನು ಏನೇ ಮಾಡಿದರೂ ರಿಕವರ್ ಮಾಡಲು ಸಾಧ್ಯವಿಲ್ಲ.

ಡಿ.2020 ರಲ್ಲಿಯೇ ಪ್ಲೇ ಮ್ಯೂಸಿಕ್ ಕೆಲಸ ಮಾಡುವುದನ್ನು ನಿಲ್ಲಿಸಿತ್ತು. ಆದರೂ ಸಹ ತನ್ನ ಅಪ್ಲಿಕೇಶನ್‌ನಲ್ಲಿ ಅಪ್ಲೋಡ್ ಮಾಡಲಾದ ದತ್ತಾಂಶವನ್ನು ಡೌನ್ಲೋಡ್ ಮಾಡಿಕೊಳ್ಳಲು ಫೆಬ್ರವರಿ 24ರವರೆಗೂ ಗೂಗಲ್ ತನ್ನ ಬಳಕೆದಾರರಿಗೆ ಅವಕಾಶ ಮಾಡಿಕೊಟ್ಟಿತ್ತು.

ತನ್ನ ಮತ್ತೊಂದು ಹೊಸ ನೀತಿಯ ಪ್ರಕಾರ, ಎರಡು ವರ್ಷಗಳ ಮಟ್ಟಿಗೆ ನಿಷ್ಕ್ರಿಯವಾಗಿರುವ ಗ್ರಾಹಕರ ಖಾತೆಗಳನ್ನು ಡಿಲೀಟ್ ಮಾಡುವ ಕೆಲಸವನ್ನು ಗೂಗಲ್ ಜೂ.1 ರಿಂದ ಮಾಡುವ ಸಾಧ್ಯತೆ ಇದೆ. ಹೀಗಾಗಿ ಬಳಕೆದಾರರು ತಂತಮ್ಮ ಗೂಗಲ್ ಖಾತೆಗಳನ್ನು ಆಗಾಗ ಭೇಟಿ ಕೊಟ್ಟು ವೀಕ್ಷಿಸುತ್ತಿರುವುದು ಉತ್ತಮ.

Exit mobile version