ಪಂಚಮಸಾಲಿ ಸಮಾಜಕ್ಕೆ 2ಎ ಮಿಸಲಾತಿ ಅವಶ್ಯವಿದೆ: ಮೋಹನ ಮಾಳಿಶೆಟ್ಟಿ

ಗದಗ: ಪಂಚಮಸಾಲಿ 2ಎ ಮಿಸಲಾತಿಗೆ ಸೇರಿಸಬೇಕು ಎಂದು ಒತ್ತಾಯಿಸಿ ಫೆ.21 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ ಜಿಲ್ಲೆಯ ಸಮಾಜದ ಜನರು ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾಧ್ಯಕ್ಷ ಮೋಹನ ಮಾಳಿಶೆಟ್ಟಿ ಹೇಳಿದರು.

ಗುರುವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಿಂದ 30 ಸಾವಿರಕ್ಕೂ ಹೆಚ್ಚು ಪಂಚಮಸಾಲಿ ಸಮಾಜ ಬಾಂಧವರು ಬೆಂಗಳೂರಿನಲ್ಲಿ ನಡೆಯುವ ಸಮಾವೇಶದಲ್ಲಿ ಪಲ್ಗೊಳ್ಳಲಿದ್ದಾರೆ. ಸಮಾವೇಶದಲ್ಲಿ ಜಿಲ್ಲೆಯ ಸಮುದಾಯದ ಜನರು ಪಾಲ್ಗೊಳ್ಳಲು ಈಗಾಗಲೇ ವ್ಯವಸ್ಥೆ ಮಾಡಲಾಗಿದ್ದು, ಜಿಲ್ಲೆಯಿಂದ 275 ಬಸ್, 25 ಕ್ರೂಸರ್, 10 ಕಾರು ವ್ಯವಸ್ಥೆ ಮಾಡಲಾಗಿದೆ. ಇನ್ನುಳಿದ ಜನರು ತಮ್ಮ ಸ್ವಂತ ವಾಹನದಲ್ಲಿ ಆಗಮಿಸುವ ಮೂಲಕ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಪಂಚಮಸಾಲಿ ಸಮಾಜವನ್ನು 2ಎ ಮಿಸಲಾತಿಗೆ ಸೇರಿಸಬೇಕು ಎಂಬುದು 1994 ರಲ್ಲೆ ಆರಂಭವಾಗಿದೆ. ಆದರೆ, ಅಂದಿನಿಂದ ಈವರೆಗೂ ಸರ್ಕಾರ ಸಮುದಾಯಕ್ಕೆ ಸ್ಪಂದಿಸುವ ಕೆಲಸ ಮಾಡಿಲ್ಲ. ಪಂಚಮಸಾಲಿ ಸಮುದಾಯದ ಜನರು ಶಿಕ್ಷಣ ಹಾಗೂ ಉದ್ಯೋಗದಿಂದ ವಂಚಿತರಾಗಿದ್ದು, ಸಮುದಾಯಕ್ಕೆ 2ಎ ಮಿಸಲಾತಿ ಅವಶ್ಯವಿದೆ ಎಂದರು.

ಅನ್ನಿ ಪಾಟೀಲಗೌಡರ, ಮಲ್ಲಿಕಾರ್ಜುನ, ಸಿದ್ದಣ್ಣ ಪಲ್ಲೆದ, ಅಯ್ಯಪ್ಪ ಅಂಗಡಿ, ಎಸ್.ಕೆ ಚಿನ್ನೂರ, ಸಂಗಮೇಶ ಕವಳಕಾಯಿ, ಮಹೇಶ ಉಪಸ್ಥಿತರಿದ್ದರು.

Exit mobile version