ಪಂಚಮಸಾಲಿ 2ಎಗೆ ಸೇರಿಸಿದರೆ ಇತರೆ ಜಾತಿಗಳ ವಿರೋಧವೇಕೆ?

ಬೆಂಗಳೂರು: ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಪ್ರವರ್ಗ 2ಎ ಅಡಿ ಮೀಸಲಾತಿ ಸೌಲಭ್ಯ ನೀಡುವುದಕ್ಕೆ ಇದೇ ಪ್ರವರ್ಗದಡಿ ಬರುವ ಇತರೆ ಜಾತಿಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.

ಪಂಚಮಸಾಲಿ ಸಮುದಾಯವನ್ನುಪ್ರವರ್ಗ 2 ಅಡಿ ಸೇರ್ಪಡೆ ಮಾಡಬೇಕೆಂದು ಅರ್ಜಿ ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಮನವಿ ಸಲ್ಲಿಸಿರುವ ಇತರೆ ಜಾತಿಗಳು, ಪ್ರವರ್ಗ 2 ಪಟ್ಟಿಯಲ್ಲಿ 410ಕ್ಕೂ ಹೆಚ್ಚು ಜಾತಿಗಳು ಸೇರಿವೆ. ವರ್ಗಕ್ಕೆ ಪ್ರಸ್ತುತ ಶೇ.15ರಷ್ಟು ಮಾತ್ರ ಮೀಸಲಾತಿ ಸೌಲಭ್ಯವಿದೆ. ಹೀಗಿರುವಾಗ ಪಂಚಮಸಾಲಿ ಲಿಂಗಾಯತ ಸಮುದಾಯದವರು ಇದೇ ಪ್ರವರ್ಗದಡಿ ಮೀಸಲಾತಿಗೆ ಮನವಿ ಮಾಡುತ್ತಿದ್ದು, ಇದಕ್ಕೆ ಅವಕಾಶ ನೀಡಬಾರದು ಎಂದು ಕೋರಿದ್ದಾರೆ.

ರಾಜ್ಯದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿರುವ ಪಂಚಮಸಾಲಿ ಲಿಂಗಾಯತರನ್ನು ಪ್ರವರ್ಗ 2ಎಗೆ ಸೇರ್ಪಡೆ ಮಾಡಿದಲ್ಲಿ ಇದೇ ಪ್ರವರ್ಗದಲ್ಲಿರುವ ಇತರೆ ಜಾತಿಗಳಿಗೆ ಅನ್ಯಾಯವಾಗಲಿದೆ ಎಂದು ವಿರೋದಿಸುತ್ತಿವೆ.

ಪಂಚಮಸಾಲಿ ಸಮುದಾಯ ಆರ್ಥಿಕವಾಗಿ ಪ್ರಬಲರಾಗಿದೆ. ಅವರನ್ನು ಯಾವುದೇ ಕಾರಣಕ್ಕೂ ಪ್ರವರ್ಗ 2ಎ ಗೆ ಸೇರಿಸಬಾರದು ಎಂದು ಕೋರಿದ್ದಾರೆ. ಕುರಿತು ಹಲವು ಜಾತಿಗಳ ಮುಖಂಡರು ಹಿಂದುಳಿದ ವರ್ಗಗಳ ಆಯೋಗಕ್ಕೆ ಮನವಿ ಸಲ್ಲಿಸಿದ್ದಾರೆಂದು ಆಯೋಗದ ಉನ್ನತ ಮೂಲಗಳು ತಿಳಿಸಿವೆ.

Exit mobile version