ಪಕ್ಷಕ್ಕೆ ಕೆಲವರಿಂದ ಮುಜುಗರ ಉಂಟಾಗುತ್ತಿದೆ: ಶಾಸಕ ರಾಮದಾಸ್

ಮೈಸೂರು: ಮೈಸೂರು ಪಾಲಿಕೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಮೈತ್ರಿ ಬಗ್ಗೆ ಇನ್ನೂ ಮಾತುಕತೆ ನಡೆದಿಲ್ಲ ಎಂದು ಶಾಸಕ ಎಸ್.ಎ.ರಾಮದಾಸ್ ಹೇಳಿದ್ದಾರೆ.

ಮೈಸೂರಿನ ಕನಕಗಿರಿಯ ಸುಯೇಜ್ ಫಾರಂನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು,  ಮೇಯರ್ ಆಯ್ಕೆ ಸಂಬಂಧ ಜಿಲ್ಲಾ ಮಂತ್ರಿ, ಸಾರಾ ಮತ್ತೆ ಮಾತನಾಡಬೇಕಿದೆ. ನಾವು ಸೆಕೆಂಡ್ ರೌಂಡ್‌ನಲ್ಲಿ  ಮಾತನಾಡ್ತೀವಿ. ಈ ಹಿಂದೆ ಮೈತ್ರಿ ವೇಳೆ ನಾಲ್ಕೈದು ಬಾರಿ ಬದಲಾವಣೆ ಆಗಿತ್ತು. ಆಗಾಗಿ ನಮ್ಮನ್ಮ ಎರಡೂ ಪಕ್ಷಗಳು ದಾಳವನ್ನಾಗಿ ಬಳಸಿಕೊಳ್ಳುತ್ತವೆ ಎಂದು ಹೇಳಿದ್ದೆ ಅಷ್ಟೆ. ಸದ್ಯ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ಸ್ಥಳೀಯ ಸರ್ಕಾರಗಳು ಬಿಜೆಪಿಯಲ್ಲಿದ್ರೆ ನಾಗರೀಕರ ಕನಸನ್ನ ಈಡೇರಿಸಬಹುದು ಎಂದು ಶಾಸಕ ಎಸ್.ಎ.ರಾಮದಾಸ್ ಹೇಳಿದರು.

ಕಾಶಪ್ಪನವರ್ ಮಾತನಾಡಿ, ಯತ್ನಾಳ್, ವಿಜಯೇಂದ್ರ ನಡುವೆ ವಾಕ್ಸಮರ ವಿಚಾರಕ್ಕೆ ಸಂಬಂಧಿಸಿದಂತೆ ಇದರಿಂದ ಪಕ್ಷಕ್ಕೆ ಮುಜುಗರ ಆಗುವುದು ಸಹಜ. ಇದು ಪಕ್ಷ ಮತ್ತು ಅವರಿಗೆ ಬಿಟ್ಟ ವಿಚಾರ. ಆದ್ರೆ ಸಹಜವಾಗಿ ಮುಜುಗರ ಆಗ್ತಾ ಇದೆ. ಆದರೆ ಇದನ್ನೆಲ್ಲ ಪಕ್ಷದ ಹಿರಿಯರು ನೋಡಿಕೊಳ್ತಾರೆ ಎಂದರು.

ನಾನು ಸಂಘ ಪರಿವಾರದವನಾಗಿದ್ರಿಂದಲೇ ಇಂದಿಗೂ ಸಂತೋಷವಾಗಿದ್ದೇನೆ ಎಂದು ಮೂಲ ಬಿಜೆಪಿಗರಿಗೆ ಮಂತ್ರಿ ಸ್ಥಾನ ಕೈ ತಪ್ಪಿದ ಹಿನ್ನೆಲೆ ಪ್ರತಿಕ್ರಿಯಿಸಿ ನನ್ನ ಲಕ್ಷ್ಮಣ ರೇಖೆಯಲ್ಲಿ ಖುಷಿಯಾಗಿ ಕೆಲಸ ಮಾಡ್ತಿದ್ದೇನೆ. ಮಂತ್ರಿ ಸ್ಥಾನ ನೀಡೋದು ಬಿಡೋದು ಮನೆಯ ಯಜಮಾನರಿಗೆ ಸೇರಿದ ವಿಚಾರ ಎಂದು ಹೇಳಿದರು.

Exit mobile version