ಲಕ್ಷ್ಮೇಶ್ವರ: ಹೆಚ್ಚಿನ ಬಸ್ ವ್ಯವಸ್ಥೆಗೆ ಒತ್ತಾಯಿಸಿ ಎಬಿವಿಪಿ ಪ್ರತಿಭಟನೆ

ಲಕ್ಷ್ಮೇಶ್ವರ: ಪಟ್ಟಣದಿಂದ ಗದಗ ನಗರಕ್ಕೆ ಹೆಚ್ಚಿನ ಬಸ್‍ಗಳ ವ್ಯವಸ್ಥೆ ಕಲ್ಪಿಸಬೇಕೆಂದು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಪ್ರತಿಭಟನೆ ನಡೆಸಿದರು.

ಈ ವೇಳೆ ಎಬಿವಿಪಿ ಸಂಚಾಲಕ ಮಾಂತೇಶ ಮಣಕವಾಡ ಮಾತನಾಡಿ, ಲಕ್ಷ್ಮೇಶ್ವರದಿಂದ ಬೆಳಗಿನ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು ಪ್ರಯಾಣಿಸುತ್ತಾರೆ. ಆದರೆ ಬಸ್‍ಗಳ ಕೊರತೆ ಇರುವುದರಿಂದ ಜನರಿಗೆ ತೊಂದರೆ ಆಗುತ್ತಿದೆ. ಹಿಗಾಗಿ ಮುಂಜಾನೆ ವೇಳೆ ಹೆಚ್ಚಿನ ಬಸ್‍ಗಳು ಸಂಚರಿಸುವಂತಾಗಬೇಕು. ರಾಮಗಿರಿ ಸಮೀಪದ ಬಸಾಪುರ ಗ್ರಾಮಕ್ಕೆ ಬಸ್ ಸೌಲಭ್ಯ ಕಡಿಮೆ ಇದ್ದು ಗ್ರಾಮಕ್ಕೆ ಹೆಚ್ಚಿನ ಬಸ್‍ಗಳ ವ್ಯವಸ್ಥೆ ಮಾಡಬೇಕು ಎಂದು ಈ ವೇಳೆ ಒತ್ತಾಯಿಸಿದರು.

ಪ್ರತಿಭಟನೆಗೆ ಸ್ಪಂದಿಸಿದ ಘಟಕ ವ್ಯವಸ್ಥಾಪಕ ಕೆ.ಶೇಖರ ನಾಯ್ಕ, ಕೊರೊನಾ ಕಾರಣದಿಂದಾಗಿ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಅವಶ್ಯ ಇದ್ದಲ್ಲಿ ಹೆಚ್ಚಿನ ಬಸ್ ವ್ಯವಸ್ಥೆಗೆ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಆರ್.ಎಚ್.ದೇಶಪಾಂಡೆ, ಬಸವರಾಜ ಚಕ್ರಸಾಲಿ, ಲಿಂಗರಜ ಶಿರಹಟ್ಟಿ, ರಾಜು ಜೋಗೇರ, ವಿಜಯ ರಬಗಣ್ಣವರ, ಜಿ.ಮಂಜುನಾಥ, ಶಶಿಕಲಾ ತೋಟದ, ವೀಣಾ ಗುಂಡಮಿ, ಪೂರ್ಣಿಮಾ ಹೊಟ್ಟಿ ಇದ್ದರು.

Exit mobile version