ಮನಗೆದ್ದ ಹುಡುಗಿ ನೀನು ಮನೆಗೆಂದು ಬರುವೆ…?

ಪ್ರೀತಿಯ ಮೊಗ್ಗು ಮೂಡಿದೆ

ಅರಳುವುದೇ ಸಾಯುವ ಮುನ್ನ

ಜೀವದ ಉಸಿರಾಗಿರುವೆ ನೀ

ನೀ ನನ್ನ ಸೇರದಿದ್ದರೆ ನಿಲ್ಲುವುದು ಈ ಉಸಿರು

ಕಾಯುವಿಕೆಯ ತಾಳ್ಮೆ ಮೀರಿದೆ ಈ ಜೀವಕೆ

ಇನ್ನೂ ನಿನಗೆ ಅರ್ಥವಾಗುತ್ತಿಲ್ಲವೇ ನನ್ನ ಪ್ರೀತಿ ಬಯಕೆ

ನಿನ್ನ ಎದೆಯಾಳದ ಬಡಿತದಲ್ಲಿ ನಾ ಬಂಧಿಯಾಗಿರುವೆ

ಜೀವ ಜೀವನ ನಿನ್ನ ಕೈಯಲ್ಲಿದೆ ನನ್ನ ಒಲವೇ

ನಿನ್ನ ಸೇರುವ ಆಸೆ ಬಲವಾಗುತ್ತಿದೆ

ಮನ ನಿನ್ನಯ ಜಪ ಮಾಡುತಿದೆ

ಸಾಕಾಗಿದೆ ಈ ದೂರ

ಬಯಿಸಿರುವೆ ನಿನ್ನ ಒಲವಿನ ಆಸರೆ

ಮನಗೆದ್ದ ಹುಡುಗಿ ನೀನು

ಮನೆಗೆಂದು ಬರುವೆ

ನಿನ್ನ ಮನದಲ್ಲೆಂದು ಜಾಗ ನೀಡುವೆ

ಕಾಯುತ್ತಿರುವೆ ಕಾತರದಿಂದ ಕ್ಷಣಕ್ಕೂ…

ಅನು ಕ್ಷಣಕ್ಕೂ…

ಹೀಗೆ ಈ ಕವನದಲ್ಲಿ ಮೂಡಿರುವ ಒಂದೊಂದು ಪದಗಳೂ ಮನದಾಳದಿಂದ ಹೊರ ಬಂದಿವೆ… ಈ ಪತ್ರದ ಮೂಲಕ ನಾನು ನಿನಗೆ ನನ್ನ ಪ್ರೀತಿಯ ಪರಿಚಯ ಮಾಡಿಕೊಡುವೆ…

ಮೊಗ್ಗಿನಲ್ಲಿ ಮಾಡಿದ ಪ್ರೀತಿ ಈಗ ಅರಳುವುದೇ…?

ನಾವಿಬ್ಬರೂ ಕೂಡಿ ಆಡಿದ್ದು ಮತ್ತು ಬೆಳೆದಿದ್ದು, ಒಂದೇ ಶಾಲೆಯ ಅಂಗಳದಲ್ಲಿ. ನಿನ್ನ ಸೌಂದರ್ಯ ಛಾಯೆಯು ನನ್ನನ್ನು ಒಂದು ದಿನ ಶಾಲೆಯನ್ನು ಬಿಡದೆ ಕಾಡುತ್ತಿತ್ತು. ನೀನು ಶಾಲೆಗೆ ಬಂದರೇ ಸಾಕು ನನಗಾದ ಸಂತೋಷವು ಬೇರೆಯವರಿಗೆ ಆಗುತ್ತದೆಯೊ ಗೊತ್ತಿಲ್ಲವೊ ಅನಿಸುತಿತ್ತು. ನೀನಾಡುವ ಮಾತ್ತು ಕೇಳುತಿದ್ದರೆ ನನ್ನ ಮನಸ್ಸು ಸಣ್ಣ ಮಗುವಿನಂತೆ ನಲಿಯುತಿತ್ತು. ನೀನು ಚಂದವಳ್ಳಿಯ ತೋಟದಲ್ಲಿ ಅರಳಿದ ಹೂವಿನಂತಿದೆ. ನಮ್ಮಿಬ್ಬರ ಸಣ್ಣ ವಯಸ್ಸಿನ ಪ್ರೀತಿಯು ಈಗ ಅರಳುವುದೇ ಎಂದು ನನ್ನ ಮನಸ್ಸುನಲ್ಲಿ  ಕಾತುರದಿಂದ ಕಾಡುತ್ತಿದೆ.?

ನೀನು ಅವಾಗ 2 ಅಥವಾ 3 ನೇ ತರಗತಿಯಲ್ಲಿ ಓದುತ್ತಿರುವಾಗ ನಾನು ನೀನು ಸ್ನೇಹದ ಸಂಗಡದಲ್ಲಿ ಸವಾರಿ ಮಾಡುತ್ತಿದ್ದೀವು. ಆದರೆ ಇಂದು ಪ್ರೀತಿಯ ಗೂಡಿನಲ್ಲಿ ಜೋಡಿ ಹಕ್ಕಿಗಳಾಗಬೇಕೆಂಬುದು ಮನ ಬಯಸುತಿದೆ. ನನ್ನ ಆಸೆ ಸ್ನೇಹದ ಕುಲುಮೆಗೆ ಸಿಕ್ಕ ಸಂಬAಧ ಈಗ ಪ್ರೀತಿಯ ಹಂತಕ್ಕೆ ಬಡ್ತಿ ಪಡೆಯಬೇಕೆಂಬುದು ನನ್ನ ಆಸೆ. ಮೊಗ್ಗಿನ ಪ್ರೀತಿಯನ್ನು ಚಿಗರಿಸುವೆಯಾ ಗೆಳತಿ..?

ನನ್ನಯ ಮೊಗ್ಗಿನ ವಯಸ್ಸಿನ ಪ್ರೇಮ ಚಿಗರುವು ಸಮಯದಲ್ಲಿ, ನೀನು ನನಗೆ ಬೆಳದಿಂಗಳAತೆ ಕಂಡೆ. ಆದರೆ ಆ ವಯಸ್ಸಿನಲ್ಲಿ ನಮ್ಮಿಬ್ಬರಿಗೆ ಪ್ರೀತಿ ಎಂದರೆ ಗೊತ್ತಿಲ್ಲದ ಸಮಯದಲ್ಲಿ ಪ್ರೀತಿ ಬೆಳೆದಿತ್ತು. ನಿನ್ನನ್ನು ನೋಡಿದಾಗಲೆಲ್ಲ ನನ್ನ ಮನಸ್ಸಿನಲ್ಲಿ ಏನೂ ಒಂತರಾ ಆಗುತಿತ್ತು, ನಿನ್ನ ಆ ಗೆಜ್ಜೆ ಶಬ್ದವು ನನಗೆ ಶಾಲೆಯ ಗಂಟೆಹೊಡೆದAತೇ ಆಗುತಿತ್ತು. ಒಂದಿನ ಶಾಲೆ ರಜೆ ಸಿಕ್ಕರೆ ಸಾಕು ನಾನು ನಿನ್ನ ನೋಡಲು ನಿಮ್ಮ ಮನೆಯ ಮುಂದೆ ಬಂದು ಗೋಲಿಯ ಆಟದ ನೆಪದಲ್ಲಿ ಬರುತ್ತಿದ್ದೆ.

ನಿನ್ನ ಗೆಳತಿಯರು ಮತ್ತು ನನ್ನ ಗೆಳೆಯರು ಸೇರಿ ನಿಮ್ಮ ಮನೆಯ ಮುಂದೆ ಆಟವಾಡುವಾಗ ನಿನ್ನನ್ನು ನನ್ನ ಹೆಂಡತಿಯಾಗಿ ನನ್ನ ಮಗಲಲ್ಲಿ ಕುಂದುರಸಿದ್ದರು. ಮಾವಿನ ಎಲೆಯಿಂದ ಅಲಂಕಾರ ಮಾಡಿ ಮತ್ತು ದಾರದಿಂದ ನಿನ್ನ ಕೊರಳಿಗೆ ತಾಳಿ ಮಾಡಿ ನಕಲು ಮದುವೆಯನ್ನು ಮಾಡಿಸಿದ ಆ ಆಟವನ್ನು ನೀ ಮರೆಯಬೇಡ. ಮೊಗ್ಗಿನಲ್ಲಿ ಅರಳಿದ ಪ್ರೀತಿಗೆ ಜೀವ ರೂಪ ಕೂಡುವೆಯಾ ಗೆಳತಿ..?

ನೀನು ಶಾಲೆಯಲ್ಲಿ ತುಂಬಾ ಜಾಣೆ ಮತ್ತು ದಿನಾಲು ಶಾಲೆಗೆ ಬರುವವಳು ನೀನು. ಗುರುಗಳ ಮನಸ್ಸು ಗೆದ್ದವಳು ನೀನು. ನಾನು ಶಾಲೆಯಲ್ಲಿ ಏನೇ ತಪ್ಪು ಮಾಡಿದರು ನಮ್ಮಪ್ಪನ ಮುಂದೆ ಬಂದು ಹೇಳುವವಳು ನೀನು. ನಾನು ನಮ್ಮಪ್ಪನ ಮುಂದೆ ಏಕೆ ಹೇಳುವೆ ಎಂದಾಗ ನೀನು ನನಗೆ ಆ ಸಮಯದಲ್ಲಿ ಹೇಳುತ್ತಿರುವಾಗ ನಿನ್ನ ಮಾತು ನನ್ನ ಜೀವನದಲ್ಲಿ ದೊಡ್ಡವನಾದ ಮೇಲೆ ನಿನ್ನ ಗುರಿ ಮುಟ್ಟಿದ ಮೇಲೆ ನಿಮ್ಮಪ್ಪನ ಮುಂದೆ ಬಂದು ನಿನ್ನನ್ನು ಮದುವೆ ಮಾಡಿಕೊಳ್ಳುವೆಂದು ಹೇಳುವೆ ಎನ್ನುತ್ತಿದ್ದೆ. ಆದರೆ ಈಗ ನೀನು ನನ್ನನ್ನು ಮರೆತಿರಬಹುದು, ಆದರೆ  ನಿನ್ನ ಹೆಸರು ನನ್ನ ಮನಸ್ಸು ಮಿಡಿಯುತಿದೆ. ನೀನು ನನ್ನನ್ನು ಬಿಟ್ಟು ಹೋದ ಆ ಪ್ರವಾಸದ ದಿನ ನನ್ನ ನರಕದ ದಿನ ಕಳೆದಂತೆ ಆಗುತ್ತಿತ್ತು. ಆದರೆ ಆ ನೆನಪು ನೆನಪಾದಗಲೇಲ್ಲ ನನ್ನ ಕಣ್ಣೀರು ತರುವುದು.

ಗೆಳತಿ ನಿನ್ನನ್ನು ನೋಡಲು ನನ್ನ ಮನಸ್ಸು ಮಿಡಿಯುತ್ತಿದೆ, ಆದರೇ ನೀನೆಲ್ಲೂ.. ನಾನೆಲ್ಲೊ ಎಂಬಂತೆ ಆಗುತೀದೆ, ನೀನು ಒಂದು ದಿನಾ ಏನಾದರೂ ಊರಿಗೆ ಬಂದರೇ ಮತ್ತು ನಿನ್ನನ್ನು ನೋಡಿದರೆ ನನ್ನ ಹೃದಯದ ಬಡಿತ ಒಂದು ಕ್ಷಣ ಸ್ಥಬ್ಧವಾಗಿ ನಿಲ್ಲುತ್ತದೆ. ನಿನ್ನನ್ನು ನಾನು ಮಾತನಾಡಿಸಬೇಕು  ಎಂದು ಬಂದಾಗಲೆಲ್ಲ ಏನೂವಂತರಾ ಮುಜುಗರ ನನ್ನನ್ನು ಕಾಡುತ್ತದೆ ಗೆಳತಿ,,,?

ನಾನು ನಿನ್ನ ರೊಪದ ಛಾಯೆಯಲ್ಲಿ ಪ್ರೀತಿ ಕನಸು ಕಾಣುತ್ತಿರುವೆನು.  ನಾನು ನಿನ್ನ ಅತಿ  ಸುಂದರವಾದ ಮನಸ್ಸು ವಿಶಾಲವಾದದ್ದು ಮತ್ತು ಮಗುವಿನಂತೆ ಯಾವಾಗಲೂ ಇನ್ನೊಬ್ಬರ ಬಗ್ಗೆ ಅತಿ ಕಾಳಜಿವಹಿಸುವದು. ಮೊಗ್ಗನ್ನು ಅರಳಿಸುವೇ ಎಂದು ನಾನು ಕಾಯುತೀರುವೇ ಗೆಳತಿ …

-ರಾಘವೇಂದ್ರ ಹುನಗುಂದ(ಪರ್ವತಿ)

Exit mobile version