ನೀವು ಬ್ಯಾಂಕಿನಲ್ಲಿ ಹಣ ಇಟ್ಟಿದ್ದಿರಾ? ಹಾಗಾದರೆ ಇದು ನಿಮಗೆ ಗೊತ್ತಿರಲಿ

ದೆಹಲಿ: ಬ್ಯಾಂಕ್ ಅಧಿಕಾರಿಗಳು ಎಂದು ಹೇಳಿಕೊಂಡು ಕರೆ ಮಾಡಿ ಜನರನ್ನು ವಂಚಿಸುವ ಪ್ರಕರಣಗಳು ಕಂಡು ಬಂದಿದ್ದು, ಇದಕ್ಕೆ ಕಡಿವಾಣ ಹಾಕಲು ಎಸ್.ಬಿ.ಐ ಹೊಸ ನಿರ್ಧಾರ ತೆಗೆದುಕೊಂಡಿದೆ.

ಗ್ರಾಹಕರ ಸುರಕ್ಷತೆಗಾಗಿ ಎಸ್ ಬಿಐ ನೀಡಿದ ಸಲಹೆಗಳು

1) OTP ಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ

2) ರಿಮೋಟ್ ಆಕ್ಸೆಸ್ ಅಪ್ಲಿಕೇಶನ್ ಗಳನ್ನು ಕಟ್ಟುನಿಟ್ಟಾಗಿ ತಪ್ಪಿಸಿ.

3) ಅಪರಿಚಿತರೊಂದಿಗೆ ಆಧಾರ್ ಪ್ರತಿಯನ್ನು ಹಂಚಿಕೊಳ್ಳಬೇಡಿ

4) ನಿಮ್ಮ ಇತ್ತೀಚಿನ ಸಂಪರ್ಕ ವಿವರಗಳನ್ನು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಅಪ್ ಡೇಟ್ ಮಾಡಿ.

5) ನಿಮ್ಮ ಪಾಸ್ ವರ್ಡ್ ಅನ್ನು ಮಧ್ಯಂತರಗಳಲ್ಲಿ (ಅಗಾಗ್ಗೆ) ಬದಲಿಸಿ.

6) ನಿಮ್ಮ ಮೊಬೈಲ್ ಮತ್ತು ಗೌಪ್ಯ ಡೇಟಾವನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.

7) ಯಾವುದೇ ಲಿಂಕ್ ಕ್ಲಿಕ್ ಮಾಡುವ ಮುನ್ನ ಯೋಚಿಸಿ.

KYC ಎಂದರೆ ಗ್ರಾಹಕರು ನೈಜವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಬ್ಯಾಂಕುಗಳು ಅನುಸರಿಸುವ ಒಂದು ಪ್ರಮುಖ ಹೆಜ್ಜೆಯಾಗಿದೆ. ಅಂದರೆ ಫೋನ್, ಟೆಕ್ಸ್ಟ್ ಅಥವಾ ಇಮೇಲ್ ಮೂಲಕ ವೆರಿಫಿಕೇಶನ್ ಮಾಡುವುದು ಸರಿಯಲ್ಲ. ಹಾಗಾಗಿ, ನೀವು KYC ವೆರಿಫಿಕೇಶನ್ ಗಾಗಿ ಕರೆ ಅಥವಾ ಸಂದೇಶವನ್ನು ಪಡೆದಲ್ಲಿ, ಅದು ಒಂದು ಮೋಸದ ಕರೆಯಾಗಿರುತ್ತದೆ ಎಂಬುದು ತಿಳಿದಿರಲಿ.

ಟೋಲ್ ಫ್ರೀ ಸಂಖ್ಯೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಯಾವುದೇ ಅನಧಿಕೃತ ವಹಿವಾಟು ಕಂಡುಬಂದರೆ ಕೂಡಲೇ ಟೋಲ್ ಫ್ರೀ ಕಸ್ಟಮರ್ ಕೇರ್ ನಂಬರ್ ಗಳಿಗೆ – 18004253800, 1800112211 ಗೆ ವರದಿ ಮಾಡಿ. https://cybercrime.gov.in/ ಸೈಬರ್ ಅಪರಾಧಗಳ ಬಗ್ಗೆಯೂ ವರದಿ ಮಾಡಲು ಎಸ್ ಬಿಐ ಸೂಚಿಸಿದೆ.

ಕೆವೈಸಿಯ ಉದ್ದೇಶಕ್ಕಾಗಿ ವಿವಿಧ ವ್ಯಕ್ತಿಗಳು ಬಳಸಬಹುದಾದ ಹಲವಾರು ದಾಖಲೆಗಳನ್ನು ಎಸ್ ಬಿಐ ಅನುಮತಿ ನೀಡಿದೆ. ವೈಯಕ್ತಿಕ ಖಾತೆದಾರರು ಪಾಸ್ ಪೋರ್ಟ್, ಮತದಾರರ ಗುರುತಿನ ಚೀಟಿ, ಚಾಲನಾ ಪರವಾನಗಿ, ಆಧಾರ್ ಕಾರ್ಡ್, ನರೇಗಾ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಗಳನ್ನು ಸಲ್ಲಿಸಬಹುದು. 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಪ್ರಾಪ್ತ ವಯಸ್ಸಿನ ಅರ್ಜಿದಾರರಿಗೆ, ಖಾತೆಯನ್ನು ನಿರ್ವಹಿಸುವ ವ್ಯಕ್ತಿಯ ಐಡಿ ಪ್ರೂಫ್ ಅನ್ನು ಬ್ಯಾಂಕಿಗೆ ಸಲ್ಲಿಸಬೇಕಾಗುತ್ತದೆ.

Exit mobile version