ಎಂಎಲ್ ಸಿ ಹೆಚ್.ವಿಶ್ವನಾಥ್ ಮಂತ್ರಿಯಾಗುವ ಕನಸಿಗೆ: ಸುಪ್ರೀಂ ಶಾಕ್

ನವದೆಹಲಿ: ಸೋತು ಎಂಎಲ್ಸಿಯಾಗಿದ್ದಂತ ಹೆಚ್.ವಿಶ್ವನಾಥ್ ಅವರಿಗೆ ಪರಿಷತ್ ಸ್ಥಾನದ ಮೂಲಕ ಸಚಿವ ಸ್ಥಾನದ ಕನಸು ಕಂಡಿದ್ದ ವಿಶ್ವನಾಥ್‌ಗೆ ಸುಪ್ರೀಂ ಕೋರ್ಟ್ ಶಾಕ್ ನೀಡಿದೆ.

ರಾಜ್ಯ ಸರ್ಕಾರ ಮಾತ್ರ ಸಚಿವ ಸ್ಥಾನ ನೀಡೋದಕ್ಕೆ ಚಿಂತನೆಯೂ ನೆಡೆಸಿತ್ತು.

ಇಂತಹ ಪ್ರಕರಣದಲ್ಲಿ ರಾಜ್ಯ ಹೈಕೋರ್ಟ್ ಹೆಚ್.ವಿಶ್ವನಾಥ್ ಅವರು ನಾಮನಿರ್ದೇಶನಗೊಂಡು ಸದಸ್ಯರಾಗಿರುವವರು. ಅವರು ಜನರಿಂದ ಆಯ್ಕೆಯಾಗಿಲ್ಲ. ಹೀಗಾಗಿ ಮಂತ್ರಿಯಾಗಲು ಅರ್ಹರಲ್ಲ ಎಂಬುದಾಗಿ ಆದೇಶ ನೀಡಿತ್ತು.

ಇಂತಹ ಆದೇಶ ಪ್ರಶ್ನಿಸಿ ಅವರು, ಸುಪ್ರೀಂ ಮೋರೆ ಹೋಗಿದ್ದರು. ಇದೀಗ ಸುಪ್ರೀಂ ಕೋರ್ಟ್ ಸಹ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದ್ದು, ವಿಶ್ವನಾಥ್ ಮಂತ್ರಿಯಾಗಲು ಅರ್ಹರಲ್ಲ ಎಂಬುದಾಗಿ ತಿಳಿಸಿದೆ.

ಸುಪ್ರೀಂ ಕೋರ್ಟ್ ಕೂಡ ರಾಜ್ಯ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದೆ. ಹೆಚ್ ವಿಶ್ವನಾಥ್ ಅವರು ಮಂತ್ರಿಯಾಗುವಂತಿಲ್ಲ ಎಂಬ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿರುವಂತ ಸುಪ್ರೀಂ ಕೋರ್ಟ್, ವಿಶ್ವನಾಥ್ ಸಲ್ಲಿಸಿದ್ದ ಮೇಲ್ಮನವಿಯ ಅರ್ಜಿಯನ್ನು ವಜಾಗೊಳಿಸಿದೆ. ಈ ಮೂಲಕ ಪರಿಷತ್ ಸದಸ್ಯ ಎಚ್. ವಿಶ್ವನಾಥ್‌ಗೆ ಸುಪ್ರೀಂ ಕೋರ್ಟ ಸಚಿವ ಸ್ಥಾನದ ಆಸೆಗೆ ತಣ್ಣಿರರೆಚಿದೆ.

Exit mobile version