ಸುಪ್ರೀಂಕೋರ್ಟ್ ಆದೇಶ: ಅನಂತ ಪದ್ಮನಾಭ ದೇವಸ್ಥಾನ ಆಡಳಿತ ರಾಜಮನೆತನದ ಹಕ್ಕು

suprim court padmanabha tempal

ಸುಪ್ರೀಂಕೋರ್ಟ್ ಆದೇಶ: ಅನಂತ ಪದ್ಮನಾಭ ದೇವಸ್ಥಾನ ಆಡಳಿತ ರಾಜಮನೆತನದ ಹಕ್ಕು

ಈ ಐತಿಹಾಸಿಕ ದೇವಸ್ಥಾನದ ಆಡಳಿತದ ಮೇಲೆ ಹಿಡಿತ ಸಾಧಿಸಲು ಟ್ರಸ್ಟ್ ಒಂದನ್ನು ಸ್ಥಾಪಿಸುವಂತೆ ಕೇರಳ ಹೈಕೋರ್ಟ್ ಕೇರಳ ಸರ್ಕಾರಕ್ಕೆ ನೀಡಿದ್ದ ಆದೇಶ ರದ್ದು.

ನವದೆಹಲಿ: ಕೇರಳದ ಅನಂತ ಪದ್ಮನಾಭ ದೇವಾಲಯದ ಆಡಳಿತ  ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ತಿರುವಾಂಕೂರಿನ ರಾಜ ಮನೆತನದ ಹಕ್ಕನ್ನು ಸುಪ್ರೀಂಕೋರ್ಟ್ ಸೋಮವಾರ ಎತ್ತಿ ಹಿಡಿದಿದೆ.

2011ರಲ್ಲಿ ಕೇರಳ ಹೈಕೋರ್ಟ್ ಟ್ರಸ್ಟ್ ಒಂದನ್ನು ರಚಿಸುವಂತೆ ಕೇರಳ ಸರ್ಕಾರಕ್ಕೆ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ರದ್ದು ಮಾಡಿದೆ.

ಕೇರಳ ಹೈಕೋರ್ಟ್ ಆದೇಶ ಪ್ರಶ್ನಿಸಿ ರಾಜಮನೆತನದವರು ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.

ಎಲ್ಲೆಡೆ ರಾಜಪ್ರಭುತ್ವಗಳ ಅಧಿಕಾರಕ್ಕೆ ಕತ್ತರಿ ಹಾಕಿ ಅಲ್ಲಿ ಪ್ರಜಾಪ್ರಭುತ್ವದ ಅಡಿಯ ಟ್ರಸ್ಟ್ ನಿರ್ಮಾಣಕ್ಕೆ ಆದ್ಯತೆ ನೀಡುತ್ತಿರುವಾಗ ಸುಪ್ರೀಂಕೋರ್ಟ್ ಅನಂತಪದ್ಮನಾಭ ದೇವಸ್ಥಾನದ ಆಡಳಿತದ ಹಕ್ಕು ರಾಜಮನೆತನದವರಲ್ಲೇ ಉಳಿಯುವಂತೆ ಮಾಡಿದ್ದು ಜನಸಾಮಾನ್ಯರಲ್ಲಿ ಆಶ್ಚರ್ಯ ಮೂಡಿಸಿದೆ.

Exit mobile version