ಗಂಡು ಮಕ್ಕಳಿಗಾಗಿ ಸಿಕ್ಕಾಪಟ್ಟೆ ಹೆಣ್ಣು ಮಕ್ಕಳನ್ನು ಹೆರುವವರ ಮಧ್ಯೆ ಇದೊಂದು ಸ್ಟೋರಿ ಓದಿ!

ವಾಷಿಂಗ್ಟನ್ : ಗಂಡು ಬೇಕೆಂದು ಡಜನ್ ಗಟ್ಟಲೇ ಹೆಣ್ಣು ಮಕ್ಕಳನ್ನು ಹೆತ್ತವರ ಕಥೆಗಳನ್ನು ನಾವು ಕೇಳಿದ್ದೇವೆ. ಆದರೆ, ಇಲ್ಲೊಂದು ದಂಪತಿ ಹೆಣ್ಣು ಮಗುವಿಗಾಗಿ ಬರೋಬ್ಬರಿ 14 ಜನ ಗಂಡು ಮಕ್ಕಳನ್ನು ಹೆತ್ತಿದ್ದಾರೆ.

ಅಮೆರಿಕದ ಮಿಚಿಗಾನ್ ರಾಜ್ಯದಲ್ಲಿ ಈ ಘಟನೆ ನಡೆದಿದೆ. ಕಟೇರಿ ಶ್ವಾಂಡ್ಟ್ ಎಂಬುವವರೇ ಈ ಪ್ರಯತ್ನದಲ್ಲಿ ಯಶಸ್ವಿಯಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಸದ್ಯ 14 ಜನ ಸಹೋದರರು ತಮ್ಮ ಸಹೋದರಿ ಮ್ಯಾಗಿ ಜಯ್ನೆಯನ್ನು ಸ್ವಾಗತಿಸಿ ಸಂಭ್ರಮಿಸಿದ್ದಾರೆ. ಗ್ರ್ಯಾಂಡ್ ರಾಪಿಡ್ಸ್ ನ ಮರ್ಸಿ ಹೆಲ್ತ್ ಸೇಂಟ್ ಮೇರಿಸ್ ಆಸ್ಪತ್ರೆಯಲ್ಲಿ ಮ್ಯಾಗಿ ಜನಿಸಿದ್ದಾಳೆ. ಈ ದಂಪತಿಗಳಿಬ್ಬರೂ 45 ವರ್ಷದವರಾಗಿದ್ದಾರೆ. ಹೆಣ್ಣು ಮಗು ಹುಟ್ಟಿದ್ದಕ್ಕೆ ಇವರು ದೊಡ್ಡ ಸಂಭ್ರಮಾಚರಣೆ ಆಚರಿಸುತ್ತಿದ್ದಾರೆ. ಮ್ಯಾಗಿ ಜಯ್ನೆಯನ್ನು ನಮ್ಮ ಕುಟುಂಬಕ್ಕೆ ಸ್ವಾಗತಿಸಲು ಕಾತುರದಿಂದ ಕಾಯುತ್ತಿದ್ದೆವು.

ಈ ವರ್ಷ ಹೆಣ್ಣು ಮಗು ಸಿಕ್ಕಿದ್ದರಿಂದ ಹಿಡಿದು, ಸಾಕಷ್ಟು ರೀತಿಯ ಸಂತಸಗಳು ಆಗಿವೆ ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ. ನಾವು ಈ ಘಳಿಗೆ ನಮ್ಮ ಬದುಕಿನಲ್ಲಿ ಬರುತ್ತದೆ ಎಂದು ಊಹಿಸಿರಲಿಲ್ಲ ಎಂದು ಜೇ ಸಂತಸ ವ್ಯಕ್ತಪಡಿಸಿದ್ದಾರೆ.

ಕಟೇರಿ ಹಾಗೂ ಜೇ ಗೇಲಾರ್ಡ್ ಹೈ ಸ್ಕೂಲ್ ಹಾಗೂ ಗೇಲಾರ್ಡ್ ಸೇಂಟ್ ಮೇರಿಸ್ ಹೈ ಸ್ಕೂಲ್ ನಿಂದ ಡೇಟಿಂಗ್ ಮಾಡುತ್ತಿದ್ದರು. 1993ರಲ್ಲಿ ಇಬ್ಬರೂ ಫೇರಸ್ ಸ್ಟೇಟ್ ವಿಶ್ವವಿದ್ಯಾಲಯಕ್ಕೆ ಸೇರಿದ್ದಾರೆ. ಪದವೀಧರರಾಗುವ ಮೊದಲೇ ಅವರಿಗೆ ಮೂವರು ಗಂಡು ಮಕ್ಕಳು ಜನಿಸಿದ್ದರು. ಕುಟುಂಬದೊಂದಿಗೆ ಓದನ್ನೂ ಈ ದಂಪತಿ ಮುಂದುವರೆಸಿಕೊಂಡು ಹೋಗಿದ್ದರು.

ಕಟೇರಿ ಅವರು ವೇಲ್ಲಿ ಸ್ಟೇಟ್ ವಿಶ್ವವಿದ್ಯಾಲಯದಲ್ಲಿ ಸಾಮಾಜಿಕ ಕಾರ್ಯದಲ್ಲಿ ಮಾಸ್ಟರ್ ಡಿಗ್ರಿ ಪೂರೈಸಿದ್ದೆ, ಜೇ ಅವರು ವೆಸ್ಟರ್ನ್ ಮಿಚಿಗನ್ ವಿಶ್ವವಿದ್ಯಾಲಯದ ಥಾಮಸ್ ಎಂ ಕೂಲೆ ಲಾ ಶಾಲೆಯಲ್ಲಿ ಕಾನೂನು ಪದವಿ ಪಡೆದಿದ್ದಾರೆ, ಜೇ ವೃತ್ತಿಯಲ್ಲಿ ವಕೀಲರಾಗಿದ್ದು ಭೂ ಸಮೀಕ್ಷೆ ವ್ಯವಹಾರ ಹೊಂದಿದ್ದಾರೆ.

Exit mobile version