15 ತಿಂಗಳ ಮಗುವನ್ನು ಮನೆಯಲ್ಲಿಯೇ ಬಿಟ್ಟು ಕೊರೊನಾ ವಿರುದ್ಧ ಹೋರಾಡುತ್ತಿರುವ ತಾಯಿ!

ವಿಜಯಪುರ: ಕೊರೊನಾ ವಾರಿಯರ್ಸ್ ತಮ್ಮ ಜೀವವನ್ನೇ ಮುಡಿಪಾಗಿಟ್ಟು ಕೆಲಸ ಮಡುತ್ತಿದ್ದಾರೆ. ಇಲ್ಲೊಬ್ಬರು ಸ್ಟಾಫ್ ನರ್ಸ್ ತಮ್ಮ 15 ತಿಂಗಳ ಹಸುಗೂಸನ್ನು ಮನೆಯಲ್ಲಿಯೇ ಬಿಟ್ಟು ಕೊರೊನಾ ವಿರುದ್ಧ ಹೋರಾಡುತ್ತಿದ್ದು, ವಾರಿಯರ್ಸ್ ನಡುವೆಯೇ ಮಾದರಿಯಾಗಿದ್ದಾರೆ.

ಇಲ್ಲಿಯ ಶಕ್ತಿ ನಗರ ನಿವಾಸಿ ಸವಿತಾರಾಣಿ ನಗರದ ಕೋವಿಡ್ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ಒಂದು ತಿಂಗಳಿನಿಂದ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಇಲ್ಲಿಯವರೆಗೂ ಅವರು ಮನೆಗೆ ತೆರಳಿಲ್ಲ. 15 ತಿಂಗಳ ಹೆಣ್ಣು ಮಗು ಹಾಗೂ 3 ವರ್ಷದ ಗಂಡು ಮಗುವನ್ನು ಅಜ್ಜಿ ಮನೆಯಲ್ಲಿಯೇ ಬಿಟ್ಟು ಸೇವೆ ಮಾಡುತ್ತಿದ್ದಾರೆ.

ಸವಿತಾರಾಣಿ ಪತಿ ಚಂದ್ರಶೇಖರ್ ಮಕ್ಕಳನ್ನು ಭೇಟಿ ಮಾಡಸಲೆಂದು ಹೆರಿಟೇಜ್ ಹೊಟೇಲ್ ಗೆ ಬಂದಿದ್ದರು. ತಾಯಿಯನ್ನು ಕಂಡ ಮಕ್ಕಳು ಅಮ್ಮನಿಗಾಗಿ ಅಳಲಾರಂಭಿಸಿವೆ. ಇತ್ತ ಅಮ್ಮ ಸವಿತಾರಾಣಿ ಕೂಡ ಮಕ್ಕಳನ್ನು ಕಂಡು ಅಪ್ಪಿಕೊಂಡು ಮುದ್ದಾಡಲಾರದೆ ಕಣ್ಣೀರು ಹಾಕಿದ್ದಾರೆ.

Exit mobile version