ಎಂಇಎಸ್ ಗೆ ಖಡಕ್ ವಾರ್ನಿಂಗ್…ಬೆಳಗಾವಿಯಲ್ಲಿ ಹೈ ಅಲರ್ಟ್!

ಬೆಳಗಾವಿ: ರಾಜ್ಯದಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುತ್ತಿದೆ. ಇದಕ್ಕೆ ಬೆಳಗಾವಿ ಜಿಲ್ಲೆ ಕೂಡ ಹೊರತಾಗಿಲ್ಲ. ಆದರೆ, ಕನ್ನಡ ಹಬ್ಬ ಆಚರಿಸುವ ಬದಲಾಗಿ ಕರಾಳ ದಿನಾಚರಣೆ ಆಚರಿಸಲು ಮುಂದಾಗಿದ್ದ ಎಂಇಎಸ್‍ ಗೆ ಮುಖ ಭಂಗವಾಗಿದೆ.

ಎಂಇಎಸ್ ಕಾರ್ಯಕರ್ತರಿಗೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಕರಾಳ ದಿನಾಚರಣೆ ಆಚರಿಸದಂತೆ ಖಡಕ್ ಆದೇಶ ನೀಡಿದ್ದಾರೆ. ಆದರೂ ನಾಡ ದ್ರೋಹಿಗಳು ಪ್ರತಿಭಟನೆಗೆ ಮುಂದಾಗಿದ್ದಾರೆ. ಬೆಳಿಗ್ಗೆ 10ಕ್ಕೆ ಇಲ್ಲಿಯ ಶಿವಾಜಿ ಗಾರ್ಡನ್ ಹತ್ತಿರ ಪ್ರತಿಭಟನೆಗೆ ಸಜ್ಜಾಗಿದ್ದಾರೆ.

ಮನೆಯ ಮಹಡಿ ಮೇಲೆ ನಿಂತು ಕಪ್ಪು ಬಲೂನ್ ಗಳನ್ನ ಹಾರಿ ಬಿಡಲು ಕೆಲವು ಪುಢಾರಿಗಳು ಸಿದ್ಧತೆ ನಡೆಸಿದ್ದಾರೆ. ಈ ನಾಡ ದ್ರೋಹಿಗಳಿಗೆ ಮಹಾರಾಷ್ಟ್ರ ಸರ್ಕಾರ ಕೂಡ ಬೆಂಬಲ ನೀಡುತ್ತಿದೆ.

ಇಂದು ಮಹಾರಾಷ್ಟ್ರದಲ್ಲಿನ ಸಚಿವರು ಕಪ್ಪು ಪಟ್ಟಿ ಕಟ್ಟಿಕೊಂಡು ಕೆಲಸ ಮಾಡುತ್ತಿದ್ದಾರೆ. ನಗರದಾದ್ಯಂತ ಪೊಲೀಸ್ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಆಯಾಕಟ್ಟಿನ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಒಡಗಿಸಲಾಗಿದೆ.

Exit mobile version