ಕನ್ನಡ ರಾಜ್ಯೋತ್ಸವ ದಿನದಂದ ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟಿಸಲು ಮುಂದಾದ ಮಹಾರಾಷ್ಟ್ರ ಸಚಿವರು!

ಬೆಳಗಾವಿ : ರಾಜ್ಯದಲ್ಲಿ ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ತಯಾರಿ ನಡೆದಿದೆ. ಆದರೆ, ಮಹಾರಾಷ್ಟ್ರ ಸರ್ಕಾರ, ಇದನ್ನು ವಿರೋಧಿಸುವ ಪ್ರಯತ್ನ ನಡೆಸುತ್ತಿದೆ. 

ಮುಂಬಿಯಯಲ್ಲಿ ಇತ್ತೀಚೆಗೆ ನಡೆದ ಸಂಪುಟ ಸಭೆಯಲ್ಲಿ ಮಹಾರಾಷ್ಟ್ರ ಸರ್ಕಾರ ತನ್ನ ಎಲ್ಲ ಸಚಿವರುಗಳಿಗೆ ಕೈಗಳಿಗೆ ಕಪ್ಪು ರಿಬ್ಬನ್ ಕಟ್ಟಿ ಕಪ್ಪು ದಿನ ಆಚರಿಸಲು ತಿಳಿಸಿದೆ. ಈ ಮೂಲಕ ಬೆಳಗಾವಿಯಲ್ಲಿರುವ ಮಹಾರಾಷ್ಟ್ರ ಪರ ಗುಂಪುಗಳಿಗೆ ಬೆಂಬಲ ಸೂಚಿಸಲಾಗಿದೆ. 

ಮಹಾರಾಷ್ಟ್ರದ ಲೋಕೋಪಯೋದಗಿ ಸಚಿವ ಹಾಗೂ ಕರ್ನಾಟಕ – ಮಹಾರಾಷ್ಟ್ರ ಗಡಿ ವಿವಾದಗಳ ಸಚಿವ ಏಕನಾಥ್ ಶಿಂಧೆ, ನಾಳೆ ಎಲ್ಲ ಸಚಿವರು ತಮ್ಮ ಕೈಗೆ ಕಪ್ಪು ಬ್ಯಾಂಡ್ ಕಟ್ಟಿ ಬೆಳಗಾವಿಯ ಮರಾಠಿಗರ ಹೋರಾಟವನ್ನು ಬೆಂಬಲಿಸಬೇಕೆಂದು ಕರೆ ನೀಡಿದ್ದಾರೆ. ಕರ್ನಾಟಕ – ಮಹಾರಾಷ್ಟ್ರ ವಿವಾದದ ಮತ್ತೊಬ್ಬ ಸಚಿವ ಚುಗನ್ ಬುಜ್ ಬಲ್, ಶಿಂಧೆ ಅವರ ಪ್ರಸ್ತಾಪಕ್ಕೆ ಬೆಂಬಲ ಸೂಚಿಸಿದ್ದಾರೆ.

ಶಿವಸೇನೆ – ಎನ್ ಸಿಪಿ – ಕಾಂಗ್ರೆಸ್ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ಎಲ್ಲ ಸಚಿವರು ನ. 1ರಂದು ಕನ್ನಡ ರಾಜ್ಯೋತ್ಸವದ ದಿನ ಕಪ್ಪು ಪಟ್ಟಿ ಧರಿಸಲಿದ್ದಾರೆ. 

Exit mobile version