ನವದೆಹಲಿ: ಟ್ವೀಟರ್ ನಲ್ಲಿ ತಪ್ಪಾಗಿ ಭಾರತ ನಕ್ಷೆ ತೋರಿಸಿದ್ದಕ್ಕೆ ಕೇಂದ್ರ ಸರ್ಕಾರವು ಟ್ವೀಟರ್ ಸಿಇಓ ಜಾಕ್ ಡೋರ್ಸಿ ಅವರಿಗೆ ಪತ್ರ ಬರೆದಿದೆ.
ಕೇಂದ್ರ ಸರ್ಕಾರ, ದೇಶದ ನಕ್ಷೆಯನ್ನು ತಪ್ಪಾಗಿ ನಿರೂಪಿಸುವುದರ ಬಗ್ಗೆ ತೀವ್ರ ಅಸಮ್ಮತಿಯನ್ನು ತಿಳಿಸಿದೆ ಮತ್ತು ದೇಶದ ಸಾರ್ವಭೌಮತ್ವ ಮತ್ತು ಸಮಗ್ರತೆಯನ್ನು ಅಗೌರವಗೊಳಿಸುವ ಮೈಕ್ರೋ-ಬ್ಲಾಗಿಂಗ್ ವೇದಿಕೆಯ ಯಾವುದೇ ಪ್ರಯತ್ನವು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಇದು ಟ್ವೀಟರ್ ಗೆ ಅಪಖ್ಯಾತಿ ಉಂಟು ಮಾಡುತ್ತದೆ. ಅದರ ತಟಸ್ಥತತೆ ಮತ್ತು ಪ್ರಾಮಾಣಿಕತೆ ಬಗೆಗಿನ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಐಟಿ ಕಾರ್ಯದರ್ಶಿ ಅಜಯ್ ಸಾಹ್ನಿ, ಕಠಿಣ ಪದದ ಪತ್ರದ ಮೂಲಕ ಟ್ವೀಟರ್ ಗೆ ಎಚ್ಟರಿಕೆ ನೀಡಿದ್ದಾರೆ. ಈ ಹಿಂದೆ ಜಮ್ಮು ಮತ್ತು ಕಾಶ್ಮೀರದ ಲೇಹ್ ಫೀಪಲ್ಸ್ ರಿಪಬ್ಲಿಕ್ ಆಫ್ ಚೀನಾದಲ್ಲಿರುವುದಾಗಿ ಟ್ವೀಟರ್ ಭೂ ನಕ್ಷೆ ತೋರಿಸಿತ್ತು. ಇದಕ್ಕೆ ಭಾರತ ಆಕ್ರೋಶ ವ್ಯಕ್ತಪಡಿಸುತ್ತಿದೆ.
ಅಲ್ಲದೇ, ದೇಶದಲ್ಲಿನ ನಾಗರಿಕರ ಸೂಕ್ಷ್ಮತೆಯನ್ನು ಸಾಮಾಜಿಕ ಜಾಲತಾಣಗಳು ಗೌರವಿಸಬೇಕು ಎಂದು ಟ್ವೀಟರ್ ಗೆ ಸೂಚಿಸಿದೆ.
