ಬಿಟ್ ಕಾಯಿನ್ ದಂಧೆಯ ಕೈವಾಡ: ಒಬಾಮಾ, ಗೇಟ್ಸ್ ಟ್ವೀಟರ್ ಅಕೌಂಟ್ ಹ್ಯಾಕ್ಡ್!

bitcoin

ಬಿಟ್ ಕಾಯಿನ್ ದಂಧೆಯ ಕೈವಾಡ: ಒಬಾಮಾ, ಗೇಟ್ಸ್ ಟ್ವೀಟರ್ ಅಕೌಂಟ್ ಹ್ಯಾಕ್ಡ್!

ಬಿಟ್ ಕಾಯಿನ್ ಹಗರಣವೊಂದನ್ನು ಪ್ರಮೋಟ್ ಮಾಡಲು ಅಮೆರಿಕದ ಖ್ಯಾತನಾಮರ ಟ್ವೀಟರ್ ಅಕೌಂಟ್ ಗಳನ್ನು ಬುಧವಾರ ಹ್ಯಾಕ್ ಮಾಡಲಾಗಿದೆ. ಬೆಚ್ಚಿಬಿದ್ದಿರುವ ಟ್ವೀಟರ್ ಕಂಪನಿ ಈಗ ಆ ಅಕೌಂಟ್ಸ್ ಸ್ಥಗಿತಗೊಳಿಸಿ, ರಿಕವರಿ ಮಾಡುತ್ತಿದೆ.

ಬರಾಕ್ ಒಬಾಮಾ, ಜೆಫ್ ಬೆಜೊಸ್, ಎಲಾನ್ ಮಸ್ಕ್, ಬಿಲ್ ಗೇಟ್ಸ್ ಸೇರಿದಂತೆ ಅಮೆರಿಕದ ಹಲವು ಖ್ಯಾತ ರಾಜಕಾರಣಿಗಳು ಮತ್ತು ಉದ್ಯಮಿಗಳ ಟ್ವೀಟರ್ ಅಕೌಂಟ್ಸ್ ಹ್ಯಾಕ್ ಮಾಡಲಾಗಿದ್ದು, ಬಿಟ್ ಕಾಯಿನ್ ಹಗರಣವೊಂದನ್ನು ಪ್ರಮೋಟ್ ಮಾಡಲು ಈ ಕೃತ್ಯ ಎಸಗಲಾಗಿದೆ ಎನ್ನಲಾಗಿದೆ.

ಅಮೆರಿಕ ಅಧ್ಯಕ್ಷೀಯ ಸ್ಥಾನದ ಅಭ್ಯರ್ಥಿ ಜೋ ಬಿಡೆನ್, ಹಾಲಿವುಡ್ ಸೆಲೆಬ್ರಿಟಿ ಕಿಮ್ ಕರ್ದಾಶಿಯನ್, ರಾಪರ್ ಕಾನ್ಯೆ ವೆಸ್ಟ್ ಮುಂತಾದವರ ಟ್ವೀಟರ್ ಅಕೌಂಟ್ಸ್ ಹ್ಯಾಕ್ ಆಗಿವೆ.

‘ಬಿಟ್ ಕಾಯಿನ ಮುಖಾಂತರ ನನಗೆ ಹಣ ಕಳುಹಿಸಿ. ನಾನು ನಿಮಗೆ ದುಪ್ಪಟ್ಟು ಹಣ ನೀಡುವೆ’ ಎಂಬ ಸಂದೇಶಗಳನ್ನು ಈ ಅಕೌಂಟುಗಳಿಂದ ಹರಿಬಿಡಲಾಗಿದೆ.

‘ಇದು ಶಾಕಿಂಗ್ ಸುದ್ದಿ ಎಂದಿರುವ ಟ್ವಿಟರ್ ಕಂಪನಿ ಟ್ವೀಟ್ ಮಾಡಿ, ನಾವು ಇದನ್ನು ತನಿಖೆ ಮಾಡುತ್ತಿದ್ದೇವೆ ಮತ್ತು ಎಲ್ಲವನ್ನೂ ಸರಿಪಡಿಸುತ್ತಿದ್ದೇವೆ’ ಎಂದಿದೆ.

Exit mobile version