ಭೀಮ ಆರ್ಭಟ: ವಿಜಯಪುರ ಜನ ತತ್ತರ – 400 ಕುಟುಂಬಗಳ ಸ್ಥಳಾಂತರ!

bhima river

bhima river problem

ವಿಜಯಪುರ : ಜಿಲ್ಲೆಯ ಇಂಡಿ ಹಾಗೂ ಸಿಂದಗಿ ತಾಲೂಕುಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, 400ಕ್ಕೂ ಹೆಚ್ಚು ಕುಟುಂಬಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದೆ.

ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಹಾಗೂ ಆಣೆಕಟ್ಟಿಯಿಂದ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡುತ್ತಿರುವುದರಿಂದಾಗಿ ಭೀಮಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. 

ಈ ಹಿನ್ನೆಲೆಯಲ್ಲಿ ಸೊನ್ನಾ ಬ್ಯಾರೇಜ್ ನ ಒಳಹರಿವು ಹೆಚ್ಚಾಗಿದೆ. ಹೀಗಾಗಿ ಅಪಾಯ ಸಂಭವಿಸಬಹುದು ಎಂಬ ಕಾರಣದಿಂದ ಎನ್ ಡಿಆರ್ ಎಫ್ ನೆರವು ಪಡೆಯಲಾಗಿತ್ತು. ಆದರೆ, ಈ ಪಡೆ ಜನರ ಪ್ರಾಣ ರಕ್ಷಿಸಲು ಸಾಕಷ್ಟು ಶ್ರಮ ವಹಿಸುತ್ತಿದೆ.

ಪ್ರವಾಹದಿಂದಾಗಿ ಸಿಂಧಗಿ ತಾಲೂಕಿನಲ್ಲಿ 10, ಇಂಡಿಯಲ್ಲಿ 5 ಹಾಗೂ ಚಡಣಚ ತಾಲೂಕಿನ 3 ಹಳ್ಳಿಗಳು ಸಂಕಷ್ಟದಲ್ಲಿದ್ದವು. ಎನ್ ಡಿಆರ್ ಎಫ್ ಪಡೆಗಳು ಧಾವಿಸಿ, ಜನರನ್ನು ಸ್ಥಳಾಂತರ ಮಾಡಿದೆ. ಈ ಪಡೆ ಜಿಲ್ಲೆಯ 401 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ. ಈಗಾಗಲೇ 1,861 ಜನರಿಗೆ ಪರಿಹಾರ ಕೇಂದ್ರಗಳಲ್ಲಿ ವಸತಿ ಕಲ್ಪಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ವೇಳೆ ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.  

Exit mobile version