ಸೇಡಿನ ಕೊಲೆಗಳಲ್ಲಿ ದೇಶದಲ್ಲಿಯೇ ಬೆಂಗಳೂರು ಮೊದಲ ಸ್ಥಾನದಲ್ಲಿ!

ಬೆಂಗಳೂರು : ದೇಶದಲ್ಲಿ ದ್ವೇಷದಿಂದ ಕೊಲೆಗಳು ಹೆಚ್ಚಾಗುತ್ತಿದ್ದು, ಆತಂಕ ಮನೆ ಮಾಡುತ್ತಿದೆ.
ಹೀಗೆ ಸೇಡಿನ ಕೊಲೆಗಳು ನಡೆದಿರುವ ಪಟ್ಟಿಯಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿ ಬಂದು ನಿಂತಿದೆ. ಆ ನಂತರದ ಸ್ಥಾನದಲ್ಲಿ ದೆಹಲಿ ಇರುವುದು ಬೆಳಕಿಗೆ ಬಂದಿದೆ.

ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ (NCRB) ಈ ಕುರಿತು ಮಾಹಿತಿ ಬಿಡುಗಡೆ ಮಾಡಿದೆ. ಬೆಂಗಳೂರು ನಗರದಲ್ಲಿ 2019ರಲ್ಲಿ ಬರೋಬ್ಬರಿ 106 ಸೇಡಿನ ಕೊಲೆಗಳು ನಡೆದಿವೆ. ಇದೇ ಅವಧಿಯಲ್ಲಿ ದೆಹಲಿಯಲ್ಲಿ 87 ಕೊಲೆಗಳು ನಡೆದಿವೆ.

ವೈಯಕ್ತಿಕ ದ್ವೇಷವೇ ಹೆಚ್ಚಿನ ಕೊಲೆಗಳಿಗೆ ಕಾರಣವಾಗಿದೆ. ಭೂಮಿ, ಹೆಣ್ಣು ಹಾಗೂ ಸಂಪತ್ತಿಗಾಗಿ ಹೆಚ್ಚಿನ ಕೊಲೆಗಳು ನಡೆದಿವೆ. ಅಲ್ಲದೇ, ಅತೀ ಹೆಚ್ಚು ಕೊಲೆಗಳಲ್ಲಿ ಸಂಬಂಧಿಕರೇ ಕೊಲೆಗೆ ಕಾರಣರಾಗಿದ್ದಾರೆ. 2019ರ ಅಪರಾಧ ಪ್ರಕರಣಗಳ ದತ್ತಾಂಶಗಳಂತೆ, ದೇಶದಲ್ಲಿ ನಡೆದ ಒಟ್ಟಾರೆ ಕೊಲೆ ಪ್ರಕರಣಗಳ ಪಟ್ಟಿಯಲ್ಲಿ ದೆಹಲಿ ಅಗ್ರಾ ಸ್ಥಾನದಲ್ಲಿದೆ. ದೆಹಲಿಯಲ್ಲಿ ಒಟ್ಟು 505 ಕೊಲೆಗಳು 2019ರ ಅವಧಿಯಲ್ಲಿ ನಡೆದಿವೆ.

ಇದೇ ಅವಧಿಯಲ್ಲಿ ಬೆಂಗಳೂರಿನಲ್ಲಿ ಒಟ್ಟು 210 ಕೊಲೆ ನಡೆದಿದ್ದು, 2ನೇ ಸ್ಥಾನದಲ್ಲಿದೆ. 58 ದ್ವೇಷದ ಕೊಲೆ ಪ್ರಕರಣಗಳು ದಾಖಲಾಗಿರುವ ನಾಗಪುರ ಮೂರನೇ ಸ್ಥಾನದಲ್ಲಿದ್ದು, ಚೆನ್ನೈ (45 ಪ್ರಕರಣ), ಸೂರತ್ (43 ಪ್ರಕರಣ), ಕೋಲ್ಕತಾ (27 ಪ್ರಕರಣ) ಅಹ್ಮದಾಬಾದ್ (23 ಪ್ರಕರಣ) ಮತ್ತು ಇಂದೋರ್ (16 ಪ್ರಕರಣ) ನಂತರದ ಸ್ಥಾನದಲ್ಲಿದೆ.

ಒಟ್ಟು ಕೊಲೆ ಪ್ರಕರಣಲ್ಲಿ ಶೇ.75 ಪ್ರಕರಣಗಳು ವೈಯಕ್ತಿಕ ದ್ವೇಷ, ಮಾರಾಟ ಹಾಗೂ ಪೂರ್ವ ನಿಯೋಜಿತ ಕೃತ್ಯಗಳಾಗಿವೆ.

Exit mobile version