ಆಕ್ಸ್ ಫರ್ಡ್ ವಿವಿ ಕೋರೊನಾ ಲಸಿಕೆ : ಮೊದಲ ಹಂತದಲ್ಲಿ ಫಲಪ್ರದ

covid-19-vaccine

covid-19-vaccine

ಆಕ್ಸ್ ಫರ್ಡ್ ವಿವಿ ಅಭಿವೃದ್ಧಿಪಡಿಸುತ್ತಿರುವ ಕೋರೊನಾ ಲಸಿಕೆಯು ಆರಂಭಿಕ ಹಂತದಲ್ಲಿ ಭರವಸೆದಾಯಕ ಫಲಿತಾಂಶ ನೀಡಿದೆ.

ಲಂಡನ್: ಅಸ್ಟ್ರೋಜೈನೆಕಾ ಕಂಪನುಯ ಸಹಯೋಗದೊಮದಿಗೆ ಬ್ರಟನ್ನಿನ ಆಕ್ಸ್ ಫರ್ಡ್ ವಿವಿ ಅಭಿವೃದ್ಧಿಪಡಿಸುತ್ತಿರುವ ಕೋರೊನಾ ಲಸಿಕೆಯು ಆರಂಭಿಕ ಹಂತದಲ್ಲಿ ಸುರಕ್ಷಿತ ಎಂದು ಸಾಬೀತಾಗಿದೆ.

ಆರೋಗ್ಯವಂತ ಸ್ವಯಂಸೇವಕರ ಮೇಲೆ ನಡೆಸಿದ ಕ್ಲಿನಿಕಲ್ ಟ್ರಯಲ್ ನಲ್ಲಿ, ದೇಹದಲ್ಲಿ ರೋಗ ಪ್ರತಿರೋಧಕ ಕಣಗಳ ಹೆಚ್ಚಳ ಕಂಡುಬಂದಿದೆ ಎಂದು ಲ್ಯಾನ್ಸರ್ ಮೆಡಿಕಲ್ ಜರ್ನಲ್ ತಿಳಿಸಿದೆ.

AZD1222 ಎಂದು ಕರೆಯಲ್ಪಡುವ ಈ ಲಸಿಕೆಯು ಪ್ರತಿರೋಧಕಗಳು ಮತ್ತು ‘ಟಿ’ ಕೋಶಗಳ ನಿರೋಧಕ ಪ್ರತಿಕ್ರಿಯೆಯನ್ನು ಹೊರಹೊಮ್ಮಿಸಿದೆ.

‘ಇದರರ್ಥ, ರೋಗ ನಿರೋಧಕ ಶಕ್ತಿಯು ವೈರಸ್ ನೆನಪಿಟ್ಟುಕೊಳ್ಳಲಿದೆ ಮತ್ತು ಇದು ದೀರ್ಘ ಕಾಲ ದೇಹದಲ್ಲಿ ಕೆಲಸ ಮಾಡಲಿದೆ ಎಂದು ಆಕ್ಸ್ ಫರ್ಡ್ ವಿವಿಯ ಆಂಡ್ರ್ಯೂ ಪೊಲಾಡ್ ತಿಳಿಸಿದ್ದಾರೆ. ‘ಇದಿನ್ನೂ ಆರಂಭದ ಹಂತವಾಗಿದ್ದು, ಮುಂದಿನ ಹಂತಗಳಲ್ಲೂ ಯಶಸ್ವಿಯಾಗುವ ಭರವಸೆ ಇದೆ ಎಂದು ತಿಳಿಸಿದ್ದಾರೆ.

Exit mobile version