ಕೋವಿಡ್ ಲಸಿಕೆ: ಆಕ್ಸ ಫರ್ಡ್ ವಿವಿಯಿಂದ ಇಂದು ಪಾಸಿಟಿವ್ ಸುದ್ದಿ?

corona vaccine

corona vaccine

ಇಂದು ಆಕ್ಸ ಫರ್ಡ್ ವಿವಿ ಕೋವಿಡ್ ಲಸಿಕೆ ಕುರಿತಂತೆ ಶುಭ ಸುದ್ದಿ ನೀಡುವ ಸಾಧ್ಯತೆ ಇವೆ.

ನವದೆಹಲಿ: ಅಸ್ಟ್ರೋಜೆನಿಕಾ ಕಂಪನಿಯ ಸಹಯೋಗದೊಂದಿಗೆ ಬ್ರಿಟನ್ನಿನ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಸಂಶೋಧಿಸುತ್ತಿರುವ ಕೋವಿಡ್ ಲಸಿಕೆಯ ಕುರಿತು ಇಂದು ಒಂದು ಒಳ್ಳೆಯ ಸುದ್ದಿ ಹೊರ ಬೀಳಲಿದೆ ಎನ್ನಲಾಗಿದೆ.

ಬ್ರಿಟನ್ನಿನ ಐಟಿವಿ ವಾಹಿನಿಯ ರಾಜಕೀಯ ಸಂಪಾದಕ ರಾಬರ್ಟ್ ಪೆಸ್ಟಾನ್ ಟ್ವೀಟ್ ಮಾಡಿದ್ದು, ಈ ಲಸಿಕೆಯು ನಿರೀಕ್ಷಿತ ಪ್ರತಿಜೀವಕಗಳನ್ನು ಮತ್ತು ‘ಟಿ’ ಸೆಲ್ ಉತ್ಪಾದಿಸುತ್ತಿದೆ ಎಂಬ ಆಶಾದಾಯಕ ಸುದ್ದಿಯಿದೆ ಎಂದು ಅವರು ಹೇಳಿದ್ದಾರೆ.

ಆಕ್ಸ್ ಫರ್ಡ್ ವಿವಿ ಈಗ ಮೂರನೆ ಹಂತದ ಹ್ಯೂಮನ್ ಟ್ರಯಲ್ಸ್ ಆರಂಭಿಸಿದ್ದು, ಇಲ್ಲಿವರೆಗೂ ಮೊದಲ ಎರಡು ಹಂತದ ವಿವರಗಳನ್ನು ಇಲ್ಲಿವರೆಗೂ ಬಹಿರಂಗ ಮಾಡಿಲ್ಲ.

Exit mobile version