ರಷ್ಯಾ ಲಸಿಕೆ ಹೊರಬರಲು ಸಾಕಷ್ಟು ಸಮಯ ಬೇಕು

corona vaccine

corona vaccine

ಮಾಸ್ಕೋದ ಸೆಚೆನೆವ್ ವಿವಿಯ ಪ್ರಕಟಣೆ ಆಧರಿಸಿ ಬಂದಿರುವ ವರದಿಗಳ ಪ್ರಕಾರ, ವಿಶ್ವದ ಮೊದಲ ಕೋರೊನಾ ಲಸಿಕೆ ಸದ್ಯದಲ್ಲೇ ಸಿಗಲಿದೆ ಎಂಬ ಭಾವ ಮೂಡುತ್ತದೆ. ಆದರೆ ಅದಿನ್ನೂ ಮೊದಲ ಹಂತವನ್ನು ಪರಿಪೂರ್ಣಗೊಳಿಸಿಲ್ಲ.

ನವನಗರ: ರಷ್ಯಾದ ತಾಸ್ ನ್ಯೂಸ್ ಏಜೆನ್ಸಿಯ ಜುಲೈ 10 ರ ವರದಿ ಪ್ರಕಾರ, ಮೊದಲ ಹಂತದ ಕ್ಲಿನಿಕಲ್ ಟ್ರಯಲ್ಸ್ ಜುಲೈ 15ರಂದು ಮುಗಿಯುತ್ತವೆ. ಎರಡನೇ ಹಂತ ಜುಲ್ಐ 13ಕ್ಕೆ( ಇಂದು ಸೋಮವಾರ) ಆರಂಭಗೊಳ್ಳಲಿದೆ.

ಮಾನವ ಕ್ಲಿನಿಕಲ್ ಟ್ರಯಲ್ ಹಂತ ತಲುಪಿದ ಒಂದು ಲಸಿಕೆ ಕ್ಯಾಂಡಿಡೇಟ್ ಅನ್ನು ಮಾತ್ರ ಸದ್ಯಕ್ಕೆ ಸಂಶೋಧಿಸಲಾಗಿದೆ. ಈ ಲಸಿಕೆಯನ್ನು ಜೂನ್ 18ರಿಂದ ರಷ್ಯಾ ಸೇನೆಯ 18 ಜನರ ಮೇಲೆ ಟ್ರಯಲ್ ಮಾಡುತ್ತ ಬರಲಾಗಿದೆ.

ಲಸಿಕೆಯ ‘ಸುರಕ್ಷತೆ ಮತ್ತು ತಾಳಿಕೆ’ ತಿಳಿಯಲು ನಡೆಸಿರುವ ಮೊದಲ ಹಂತದ ಪ್ರಯೋಗ ಜುಲೈ 15ಕ್ಕೆ ಕೊನೆಗೊಳ್ಳಲಿದೆ. ಇಂದಿನಿಂದ( ಜುಲೈ13) ಎರಡನೆ ಸ್ವಯಂಸೇವಕರ ತಂಡದ ಮೇಲೆ ಲಸಿಕೆ ಪ್ರಯೋಗ ನಡೆಯಲಿದ್ದು ಇದರಲ್ಲಿ ಲಸಿಕೆ ಒದಗಿಸಬಹುದಾದ ನಿರೋಧಕ ಶಕ್ತಿಯನ್ನು ಪರೀಕ್ಷಿಸಲಾಗುತ್ತದೆ.

ಲಸಿಕೆ ಅಭಿವೃದ್ಧಿ ಸಾಮಾನ್ಯವಾಗಿ 3 ಹಂತಗಳನ್ನು ಒಳಗೊಂಡಿರುತ್ತದೆ. ಮೂರನೆ ಹಂತದಲ್ಲಿ ಸಾವಿರಾರು ಜನರ ಮೇಲೆ ಇದರ ಪ್ರಯೋಗ ಮಾಡಲಾಗುತ್ತದೆ. ಕೆಲವೊಮ್ಮೆ ಎರಡನೆ ಹಂತದ ನಂತರವೂ ಲಸಿಕೆಗೆ ಅಪ್ರೂವಲ್ ಸಿಗಬಹುದು. ಮೂರನೆ ಹಂತ ಅಗತ್ಯವೇ ಇಲ್ಲವೇ ಎಂಬುದನ್ನು ರಷ್ಯಾದ ಅಧಿಕೃತ ಮಾನ್ಯತಾ ಸಂಸ್ಥೆ ನಿರ್ಧರಿಸಲಿದೆ.

ಮೂರನೆ ಹಂತ ಬಿಟ್ಟರೂ ಕೂಡ, ಎರಡನೆ ಹಂತದ ನಂತರ ಸಾಕಷ್ಟು ವಿಧಿ ವಿಧಾನಗಳನ್ನು ಪೂರೈಸಲು ಸಾಕಷ್ಟು ಸಮಯ ಹಿಡಿಯುತ್ತದೆ. ಹೀಗಾಗಿ ರಷ್ಯಾ ಲಸಿಕೆ ಸದ್ಯಕ್ಕೆ ಸಿಗುವ ಸಾಧ್ಯತೆ ಇಲ್ಲ.

Exit mobile version