ಒಂದು ವರ್ಷದವರೆಗೆ ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯ: ಉಲ್ಲಂಘನೆಗೆ 10 ಸಾವಿರ ದಂಡ

ತಿರುವನಂತಪುರ: ಇನ್ನೂ ಒಂದು ವರ್ಷ ಕಾಲ ಫೇಸ್ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ನಿಯಮ ಪಾಲಿಸುವುದು ಕಡ್ಡಾಯ ಎಂದು ಕೇರಳ ಸರ್ಕಾರ ಭಾನುವಾರ ನಿಯಮ ರೂಪಿಸಿದೆ.

ಕೇರಳ ಸಾಂಕ್ರಾಮಿಕ ತಡೆ ಸುಗ್ರಿವಾಜ್ಞೆ -2020ರ ಅನ್ವಯ ಸಾರ್ವಜನಿಕ ಸ್ಥಳ ಮತ್ತು ಕೆಲಸದ ಸ್ಥಳದಲ್ಲಿ ಮಾಸ್ಕ್ ಧರಿಸದೇ ಇದ್ದರೆ 10 ಸಾವಿರ ರೂ ದಂಡ ವಿಧಿಸಲು ನಿಯಮ ರೂಪಿಸಲಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ 6 ಅಡಿ ಸಾಮಾಜಿಕ ಅಂತರ ಕಾಪಾಡಬೇಕು, ಮದುವೆ ಸಮಾರಂಭದಲ್ಲಿ ಗರಿಷ್ಠ 50 ಮತ್ತು ಅಂತ್ಯ ಸಂಸ್ಕಾರ ಸಂದರ್ಭದಲ್ಲಿ ಗರಿಷ್ಠ 20 ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಉಗುಳುವುದನ್ನು ನಿಷೇಧಿಸಲಾಗಿದೆ.

ಈ ಎಲ್ಲ ನಿಯಮಗಳು ಒಂದು ವರ್ಷ ಜಾರಿಯಲ್ಲಿರಲಿವೆ ಎಂದು ಕೇರಳ ಸರ್ಕಾರದ ಪ್ರಕಟಣೆ ತಿಳಿಸಿದೆ.

Exit mobile version