ಕೊವಿಡ್-19 ಸೋಂಕು: ಉಸಿರಾಟದ ಸಮಸ್ಯೆ ಸ್ಥಳದಲ್ಲೇ ಪರೀಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

ರಾಜ್ಯದಲ್ಲಿಂದು ಕೊರೊನಾ ಪಾಸಿಟಿವ್

ರಾಜ್ಯದಲ್ಲಿಂದು ಸೋಂಕಿತರ ಸಂಖ್ಯೆಯಲ್ಲಿ ಪಲ್ಲಟ:


ಗದಗ : ಕೋವಿಡ್-19 ಸಾಂಕ್ರಾಮಿಕ ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಜಿಲ್ಲೆಯ ಎಲ್ಲ 9 ಸ್ಥಳಿಯ ಸಂಸ್ಥೆಗಳ ವಾರ್ಡ ಮಟ್ಟದ ಟಾಸ್ಕಫೋರ್ಸ್ ಸಮಿತಿಗಳನ್ನು ಮತ್ತು ಬೂತ ಮಟ್ಟದ ಸಮಿತಿಗಳನ್ನು ರಚಿಸಿ ಜಿಲ್ಲಾಡಳಿತ ನೀಡುವ ನಿರ್ದೇಶನಗಳನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ವಹಿಸಲಾಗಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ. ಸುಂದರೇಶಬಾಬು ತಿಳಿಸಿದ್ದಾರೆ.


ಸಾರ್ವಜನಿಕರಿಗೆ ಜಾಗೃತಿ ಹಾಗೂ ಸೋಂಕುನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ಕ್ರಮಗಳನ್ನು ಕಾಲಕಾಲಕ್ಕೆ ಕೈಗೊಳ್ಳಲು ಈ ಸಮಿತಿಗಳು ಸಾರ್ವಜನಿಕರ ಸಹಕಾರದೊಂದಿಗೆ ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಬೂತ ಹಾಗೂ ವಾರ್ಡ ಮಟ್ಟದ ತಮ್ಮ ವ್ಯಾಪ್ತಿಯಲ್ಲಿ ಕೊವಿಡ್-19 ಸೋಂಕು ಪೂರ್ಣವಾಗಿ ನಿಯಂತ್ರಣಕ್ಕೆ ತರುವ ಜವಾಬ್ದಾರಿ ನಿರ್ವಹಿಸಬೇಕು.

ಇದಕ್ಕೆ ಪೂರಕವಾಗಿ ಕೊವಿಡ್-19 ಸೋಂಕಿನ ಒಂದು ಲಕ್ಷಣವಾದ ಉಸಿರಾಟದ ತೋಂದರೆ ಸ್ಥಳದಲ್ಲೇ ತಕ್ಷಣವೇ ಪರೀಕ್ಷಿಸಲು ಪಲ್ಸ ಅಕ್ಸಿಯೋಮೀಟರ್ ಉಪಕರಣವನ್ನು ನೀಡಲಾಗುತ್ತಿದ್ದು ಇದನ್ನು ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಸಂಬAಧಿತ ವಾರ್ಡ ಮತ್ತು ಬೂತ ಮಟ್ಟದ ಸಿಬ್ಬಂದಿಗೆ ವಿತರಿಸಿ ಅವರಿಗೆ ಅದನ್ನು ಬಳಸುವ ಬಗೆ ಮತ್ತು ಸಾರ್ವಜನಿಕರಿಗೆ ತಿಳುವಳಿಕೆ ನೀಡುವ ಕುರಿತು ತರಬೇತಿಯನ್ನು ನೀಡಿ ವಿತರಿಸಿ ತಕ್ಷಣದಿಂದ ಸಮಸ್ಯೆ ಇರುವ ಸಾರ್ವಜನಿಕರ ಆರೋಗ್ಯ ತಪಾಸಣೆ ಚುರುಕುಗೊಳಿಸಬೇಕು. ಎಂದು ಜಿಲ್ಲಾಧಿಕಾರಿ ಕಟ್ಟು ನಿಟ್ಟಿನ ನಿರ್ದೇಶನ ನೀಡಿದ್ದಾರೆ. ಗದಗ ಬೆಟಗೇರಿ ನಗರ ಸಭೆ ಪೌರಾಯುಕ್ತ ಮನ್ಸೂರ್ ಅಲಿ ಅವರಿಗೆ ಜಿಲ್ಲಾಧಿಕಾರಿ ಎಂ. ಸುಂದರೇಶಬಾಬು ಅವರು ಸಾಂಕೇತಿಕವಾಗಿ ಪಲ್ಸ ಅಕ್ಸಿಯೋಮೀಟರ್ ಉಪಕರಣ ಹಸ್ತಾಂತರಿಸಿದರು. ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೇಶ ಎಸ್.ಎನ್. ಹಾಗೂ ಬಸವರಾಜ ಇದ್ದರು.

Exit mobile version