ಕೊವಿಡ್-19 ಸೋಂಕು ನಿಯಂತ್ರಣ: ಗದಗ ಜಿಲ್ಲೆಯಲ್ಲಿ 3 ಕಂಟೇನ್‍ಮೆಂಟ್ ಪ್ರದೇಶಗಳ ನಿರ್ಬಂಧ ತೆರವು

containment gadag district

District of Gadag Impunity clearance of 9 containment areas

ಗದಗ: ಜಿಲ್ಲೆಯ ಕೊವಿಡ್-19 ಸೋಂಕು ನಿಯಂತ್ರಣಕ್ಕಾಗಿ ಸೋಂಕಿನ ಸಕಾರಾತ್ಮಕ ಪ್ರಕರಣಗಳು ವರದಿಯಾದ ಕೆಳಕಂಡ 3 ಪ್ರದೇಶಗಳನ್ನು ನಿರ್ಬಂಧಿತ ಪ್ರದೇಶಗಳೆಂದು ಘೋಷಿಸಲಾಗಿತ್ತು.

ರೋಣ ತಾಲ್ಲೂಕಿನ ಕುರಹಟ್ಟಿ ಗ್ರಾಮ ಪಂಚಾಯತ್ ವಾರ್ಡ ನಂ 1, ಮುದೇನಗುಡಿ ಗ್ರಾಮ, ಮತ್ತು ಮಲ್ಲಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂದಿಗವಾಡ ಗ್ರಾಮ

ಮುಂಡರಗಿ ತಾಲೂಕ ಶೀಂಗಟಾಲೂರ ಗ್ರಾಮ ಪಂಚಾಯತ್ ವಾರ್ಡ ನಂ.1, ಶೀರನಹಳ್ಳಿ ಗ್ರಾಮ

ಗದಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ವರದಿಯನ್ವಯ ಈ 3 ಪ್ರದೇಶಗಳನ್ನು ಕೊವಿಡ್-19 ಸೋಂಕು ನಿಯಂತ್ರಣ ಪ್ರತಿಬಂಧಿತ (ಕಂಟೇನ್‍ಮೆಂಟ್) ಪ್ರದೇಶಗಳೆಂದು ಘೋಷಿಸಿರುವುದನ್ನು ಹಿಂಪಡೆದು ತಕ್ಷಣದಿಂದ ಸಾಮಾನ್ಯ ವಲಯವಾಗಿ ಬದಲಾವಣೆಗೊಳಿಸಿ ಗದಗ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ ಎಂ. ಸುಂದರೇಶ ಬಾಬು ಆದೇಶ ಹೊರಡಿಸಿದ್ದಾರೆ.

Exit mobile version