ಗದಗ ಜಿಲ್ಲೆಯಲ್ಲಿಂದು 9 ಪಾಸಿಟಿವ್ ಎಲ್ಲೆಲ್ಲಿ..?

corona gadag update

ಗದಗನಲ್ಲಿಂದು ಪತ್ತೆಯಾದ ಕೊರೊನಾ ಸೋಂಕಿತರ ವಿವರ


ಗದಗ: ಗದಗ ಜಿಲ್ಲೆಯಲ್ಲಿ ಮಂಗಳವಾರ ದಿ. 14 ರಂದು 9 ಜನರಿಗೆ ಕೊವಿಡ್-19 ಸೋಂಕು ದೃಢ ಪಟ್ಟಿದೆ.

ಗಜೇಂದ್ರಗಡದ ಕುಷ್ಟಗಿ ರಸ್ತೆಯ ಸಿದ್ದತ ಬಡಾವಣೆ ನಿವಾಸಿ 25 ವರ್ಷದ ಪುರುಷ ಪಿ-41663 ಕೆಮ್ಮು, ಜ್ವರ ಲಕ್ಷಣಗಳಿಂದಾಗಿ ಸೋಂಕು ದೃಢಪಟ್ಟಿದೆ.

ಅಂತರ ಜಿಲ್ಲಾ ಪ್ರಯಾಣದ ಹಿನ್ನಲೆಯಲ್ಲಿ ಹಾವೇರಿ ಜಿಲ್ಲೆಯ ಕನವಳ್ಳಿ ಗ್ರಾಮದ ನಿವಾಸಿ 48 ವರ್ಷದ ಮಹಿಳೆ ಪಿ-41664 ಇವರಿಗೆ ಸೋಂಕು ದೃಢಪಟ್ಟಿದೆ.

ಪಿ-35070 ಸೋಂಕಿತರ ಸಂಪರ್ಕದಿಂದಾಗಿ ಗದಗ-ಬೆಟಗೇರಿ ದಾಸರ ಓಣಿ ನಿವಾಸಿ 34 ವರ್ಷದ ಮಹಿಳೆ ಪಿ-41665 ಇವರಿಗೆ ಸೋಂಕು ದೃಢಪಟ್ಟಿದೆ.

ಗದಗ ತಾಲೂಕಿನ ಮಲ್ಲಸಮುದ್ರ ಗ್ರಾಮದ ನಿವಾಸಿ 65 ವರ್ಷದ ಮಹಿಳೆ ಪಿ-41666 ಕೆಮ್ಮು ಹಾಗೂ ಜ್ವರ ಲಕ್ಷಣಗಳಿಂದಾಗಿ ಸೋಂಕು ದೃಢಪಟ್ಟಿದೆ.

ಗದಗ-ಬೆಟಗೇರಿ ನಗರದ ದಾಸರ ಓಣಿ ನಿವಾಸಿ 63 ವರ್ಷದ ಪುರುಷ ಪಿ-41667 ಇವರಿಗೆ ಸೋಂಕು ದೃಢಪಟ್ಟಿದೆ.

ಧಾರವಾಡ ಜಿಲ್ಲೆಯ ಸತ್ತೂರ ಪ್ರದೇಶದ ನಿವಾಸಿ 70 ವರ್ಷ ಪುರುಷ ಪಿ-41668 ಇವರಿಗೆ ಉಸಿರಾಟದ ತೊಂದರೆಯಿಂದ ಸೋಂಕು ದೃಢಪಟ್ಟಿದೆ.

ಗದಗ-ಬೆಟಗೇರಿ ನಗರದ ಅಂಬೇಡ್ಕರ ನಗರದ ನಿವಾಸಿ 38 ವರ್ಷದ ಮಹಿಳೆ ಪಿ-41696 ಕೆಮ್ಮು, ಜ್ವರದ ಲಕ್ಷಣಗಳಿಂದಾಗಿ ಸೋಂಕು ದೃಢಪಟ್ಟಿದೆ.

ಗದಗ ನಗರದ ಅಬ್ಬಿಗೇರಿ ಕಂಪೌಂಡ ನಿವಾಸಿ 55 ವರ್ಷದ ಮಹಿಳೆ ಪಿ-41715 ಸೋಂಕು ದೃಢಪಟ್ಟಿದ್ದು ಸೋಂಕಿನ ಪತ್ತೆ ಕಾರ್ಯ ನಡೆದಿದೆ.

ಗದಗ-ಬೆಟಗೇರಿ ನಗರದ ವಾರ್ಡ ನಂ 32 ಲೊಕೋಪಯೋಗಿ ಇಲಾಖೆ ಕಚೇರಿ ಹಿಂದುಗಡೆಯ ದಾಸರ ಓಣಿ ನಿವಾಸಿ 57 ವರ್ಷದ ಪುರುಷ ಪಿ-41732 ಇವರಿಗೆ ಸೋಂಕು ದೃಢಪಟ್ಟಿದೆ.

ಇವರಿಗೆ ನಿಗದಿತ ಕೊವಿಡ್-19 ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದ್ದಾರೆ.

Exit mobile version