ಲಕ್ಕುಂಡಿ ಗ್ರಾಮ ಪಂಚಾಯತಿಗೆ ಆಡಳಿತಾಧಿಕಾರಿ ಯಾರು..?

ಗದಗ: ಅವಧಿ ಮುಗಿದ್ರು ಚೇರಿನ ವ್ಯಾಮೋಹ ಮುಗಿಲ್ಲವೇ..? ಆಡಳಿತಾಧಿಕಾರಿ ನೇಮಕವಾದ್ರು, ಅಧ್ಯಕ್ಷ ಪದವಿಯ ಅವಧಿ ಮುಗಿದಿರೋದು ನೆನಪಿಲ್ಲವೇ..? ಹೀಗೊಂದು ವ್ಯಂಗ್ಯ ಪ್ರಶ್ನೆಗಳು ಗದಗ ತಾಲೂಕಿನ ಲಕ್ಕುಂಡಿ ಗ್ರಾಮ ಪಂಚಾಯತಿ ಅಧ್ಯಕ್ಷರ ವರ್ತನೆಯಿಂದ ಉದ್ಭವವಾಗಿವೆ. ಈಗಾಗಲೇ ಲಕ್ಕುಂಡಿ ಗ್ರಾಮ ಪಂಚಾಯತಿಯ ಆಡಳಿತ ಮಂಡಳಿಯ ಅವಧಿ ಪೂರ್ಣಗೊಂಡಿದೆ. ಸದ್ಯ ಕೊರೊನಾ ಹಿನ್ನೆಲೆ ಚುನಾವಣೆ ಪ್ರಕ್ರಿಯೇ ಮುಂದೂಡಲಾಗಿದೆ. ಈಗಾಗಲೇ ಆಡಳಿತಾಧಿಕಾರಿ ನೇಮಕವಾಗಿದ್ದು ಲಕ್ಕುಂಡಿ ಗ್ರಾಮ ಪಂಚಾಯತಿಗೆ ಗದಗ ತಾಲೂಕಿನ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕನ್ನು ಆಡಳಿತಾಧಿಕಾರಿಯಾಗಿ ನೇಮಿಸಲಾಗಿದೆ. ಆದ್ರೆ ಆಡಳಿತಾಧಿಕಾರಿ ಕರ್ತವ್ಯಕ್ಕೆ ಹಾಜರಾಗಿ ಹೋದ ಮೇಲೂ ಗ್ರಾಮ ಪಂಚಾಯತಿ ಅಧ್ಯಕ್ಷ ಎಸ್.ಎಮ್.ಬೂದಿಹಾಳ್ ಪಂಚಾಯತಿಯಲ್ಲಿ ಅಧ್ಯಕ್ಷರ ಕೊಠಡಿಯಲ್ಲಿ ಅಧ್ಯಕ್ಷರ ಚೇರ್ ನಲ್ಲಿ ಕುಳಿತು ಜನರೊಂದಿಗೆ ಸಂಭಾಷಣೆ ನಡೆಸಿದ್ದಾರೆ. ಇದು ಗ್ರಾಮದ ಬಹುತೇಕರ ಆಕ್ಷೇಪಕ್ಕೂ ಕಾರಣವಾಗಿದೆ. ಅವಧಿ ಮುಗಿದು ಆಡಳಿತಾಧಿಕಾರಿ ನೇಮಕವಾದ ಮೇಲೂ ಅಧ್ಯಕ್ಷರಿಗೆ ಚೇರಿನ ವ್ಯಾಮೋಹ ಮುಗಿದಿಲ್ಲವೇ ಎಂದು ಜನ ವ್ಯಂಗ್ಯವಾಡುತ್ತಿದ್ದಾರೆ.
ಈ ಕುರಿತು ಗ್ರಾಮಸ್ಥ ಉಸ್ಮಾನಲಿ ನಮಾಜಿ, ಆಡಳಿತಾಧಿಕಾರಿಗಳ ನೇಮಕವಾದ ಮೇಲೆ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿದ್ದವರು ಈ ರೀತಿ ಚೇಂಬರ್ ನಲ್ಲಿ ಅಧ್ಯಕ್ಷರ ಚೇರ್ ಗೆ ಕಳಿತುಕೊಳ್ಳುವುದು ತಪ್ಪು ಎಂದು ಸ್ವತ: ಅಧಿಕಾರಿಗಳು ಹೇಳಿದ್ದಾರೆ. ಅವಧಿ ಮುಗಿದ ಮೇಲೂ ಅಧ್ಯಕ್ಷರ ಈ ವರ್ತನೆ ಆಡಳಿತ ವಿರೋಧಿಯಾಗಿದೆ ಎಂದು ಆರೋಪಿಸಿದರು.

Exit mobile version