ಕೊರೊನಾ ಜಾಗೃತಿ ಬಗ್ಗೆ ಮಹಿಳೆಯೊಬ್ಬಳ ಮಾತುಗಳನ್ನು ನೀವೊಮ್ಮೆ ಕೇಳಲೇಬೇಕು..!

ಕೊರೊನಾದ ಅನುಭವ ಮಹಿಳೆಯೊಬ್ಬರ ಬಾಯಲ್ಲಿ ಕೇಳಿ.
ಮಹಿಳೆಯೊಬ್ಬರು ಕೊರೊನಾದ ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ, ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದ್ದಾರೆ.
ಈ ಮಹಿಳೆ ವಾಸ ಮಾಡಿದ್ದ ಕಟ್ಟಡದಲ್ಲಿಯೇ ವ್ಯಕ್ತಿಯೊಬ್ಬರಿಗೆ ಕೊರೊನಾ ಅಂಟಿಕೊಂಡಿದೆ. ಆದರೆ, ಆ ವ್ಯಕ್ತಿ ಕೆಲವು ದಿನಗಳಿಂದ ಅಲ್ಲಿಯೇ ವಾಸವಾಗಿದ್ದಾರೆ. ಅಷ್ಟೊತ್ತಿಗಾಗಲೇ ಈ ಮಹಿಳೆಗೂ ಕೊರೊನಾ ಆವರಿಸಿದೆ.
ನಂತರ ಇವರು ಕೂಡ ಮನೆಯವರೊಂದಿಗೆ ಚೆನ್ನಾಗಿಯೇ ಇದ್ದಾರೆ. ಆ ನಂತರ ಇವರು ನಾಲಿಗೆ ರುಚಿ ಕಳೆದುಕೊಂಡಿದ್ದಾರೆ. ನಂತರ ತಲೆ ನೋವು, ಜ್ವರ, ಶೀತ ಆವರಿಸಿದೆ. ಅಷ್ಟೊತ್ತಿಗಾಗಲೇ ಕೊರೊನಾ ಆವರಿಸಿದ್ದು, ತಿಳಿದು ಬಂದಿದೆ. ಕೈ ಮೀರಿದ ಮೇಲೆ ಮಾಸ್ಕ್ ಹಾಕಿಕೊಂಡಿದ್ದಾರೆ.
ಕೊನೆಗೆ ಕೊರೊನಾ ಇರುವುದು ಖಚಿತವಾಗಿದೆ. ಸದ್ಯ ಮಹಾಮಾರಿಯಿಂದ ಗುಣಮುಖರಾಗಿದ್ದು, ಆರಾಮಾಗಿದ್ದಾರೆ. ಹೀಗಾಗಿ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದ್ದಾರೆ.
ಪ್ರತಿಯೊಬ್ಬರೂ ಮನೆಯಲ್ಲಿದ್ದರೂ ಮಾಸ್ಕ್ ಹಾಕಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಸ್ಯಾನಿಟೈಸರ್ ಬಳಕೆ ಮಾಡುವಂತೆ ಮನವಿ ಮಾಡಿದ್ದಾರೆ.


ಆದರೆ, ಎಲ್ಲರೂ ಮನೆಯಲ್ಲಿ ಮಾಸ್ಕ್ ಹಾಕಿಕೊಳ್ಳಬೇಕು ಎಂಬುದರ ಕುರಿತು ದೇಶದ ವೈದ್ಯರು ಸಹಮತ ವ್ಯಕ್ತಪಡಿಸಿಲ್ಲ. ಇನ್ನು ಕೆಲವರು ಎಲ್ಲರೂ ಮಾಸ್ಕ್ ಧರಿಸುವ ಅಗತ್ಯವಿಲ್ಲ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ. ಆದರೆ, ಹೊರಗೆ ಹೋದ ಸಮಯದಲ್ಲಿ ಮಾಸ್ಕ್ ಧರಿಸುವುದು ಒಳ್ಳೆಯದು ಎಂಬುದು ಬಹುತೇಕರ ಹೇಳಿಕೆಯಾಗಿದೆ.

https://m.facebook.com/story.php?story_fbid=935859056895234&id=268114290336384

Exit mobile version