ಸಿಂಧನೂರು: ನಗರದ ಗಾಂಧಿ ವೃತ್ತದಲ್ಲಿ ದಡೇಸುಗೂರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಂದ ಜಿಲ್ಲಾ ಪಂಚಾಯತ ಸದಸ್ಯ ಕಾಂಗ್ರೆಸ್ ಪಕ್ಷದ ಮುಖಂಡ ಬಾಬುಗೌಡ ಬಾದರ್ಲಿ ನೇತೃತ್ವದಲ್ಲಿ ಕೊರೋನ್ ವೈರಸ್ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾಸ್ಕ್ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕೊರೋನ್ ವೈರಸ್ ಬಗ್ಗೆ ಜನರಲ್ಲಿ ಅರಿವು ಕೊರತೆ ಇರುವ ಕಾರಣ ನಿರ್ಲಕ್ಷ್ಯ ವಹಿಸಿ ರಸ್ತೆಯಲ್ಲಿ ಮಾಸ್ಕ್ ಧರಿಸದೆ ಸಮಾಜಿಕ ಅಂತರ ಕಾಪಾಡುತ್ತಿಲ್ಲ. ಈಗಾಗಲೇ ಕಾಂಗ್ರೆಸ್ ಪಕ್ಷದ ವತಿಯಿಂದ ಆರೋಗ್ಯ ಹಸ್ತ ಕಾರ್ಯಕ್ರಮವನ್ನು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ನೇತೃತ್ವದಲ್ಲಿ ಚಾಲನೆ ನೀಡಲಾಗಿದೆ.
ಇದರ ಭಾಗವಾಗಿ ದಡೇಸುಗೂರು ಗ್ರಾಮದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಕೊರೊನಾ ವೈರಸ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆಯೋಜನೆ ಮಾಡಿದ್ದು. ಜನರು ಕೊರೋನ್ ವೈರಸ್ ಬಗ್ಗೆ ಜಾಗೃತಿರಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿ ಕೊರೋನ್ ವೈರಸ್ ಹರಡದಂತೆ ತಡೆಗಟ್ಟಲು ಮನವಿ ಮಾಡಿದರು.. ಈ ಸಂಧರ್ಭದಲ್ಲಿ ಹೆಚ್.ಮಹಿಬೂಬ್ ಸಾಬ್ ದಡೇಸುಗೂರು, ರವಿಚಂದ್ರರೆಡ್ಡಿ, ಚಾಗಪ, ಚಿದಾನಂದ, ಸಲ್ಮಾನ್, ಮಹೆಬೂಬ್ ಮಹೆಬೂಬ್ ಕಾಲೋನಿ, ಲಿಂಗನಗೌಡ, ಯಂಕಪ್ಪ ರಾಗಲಪರ್ವಿ ಸೇರಿದಂತೆ ಅನೇಕರು ಇದ್ದರು. ಈ ವೇಳೆ ಐದು ನೂರಕ್ಕೂ ಅಧಿಕ ಜನರಿಗೆ ಮಾಸ್ಕ್ ವಿತರಣೆ ಮಾಡಲಾಯಿತು
