ಮನೆಯಲ್ಲಿಯೇ ಕುಳಿತ ಮಕ್ಕಳಲ್ಲಿ ಹೆಚ್ಚಾಗುತ್ತಿದೆ ಬೊಜ್ಜು ಸಮಸ್ಯೆ!

ಬೆಂಗಳೂರು: ಲಾಕ್ ಡೌನ್ ನಿಂದಾಗಿ ಸದ್ಯ ಮಕ್ಕಳು ಮನೆಯಲ್ಲಿಯೇ ತಮ್ಮ ಬಾಲ್ಯ ಕಳೆಯುತ್ತಿದ್ದಾರೆ. ಇದರಿಂದಾಗಿ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಸದ್ಯ ಮಕ್ಕಳ ಶಾಲೆಗಳು ಕೂಡ ಇಲ್ಲ. ಅಲ್ಲದೇ, ಕೊರೊನಾಕ್ಕೆ ಹೆದರಿ ಮಕ್ಕಳನ್ನು ಪಾಲಕರು ಹೊರಗಡೆ ಕೂಡ ಬಿಡುತ್ತಿಲ್ಲ. ಮಕ್ಕಳು ರಂಪ ಹಿಡಿಯಬಾರದೆಂದು ಅವರಿಗೆ ಬೇಕಾದ ತಿಂಡಿ ಕೊಟ್ಟು ಅವರನ್ನು ಮನೆಯಲ್ಲಿಯೇ ಕೂಡಿ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಈ ಕಾರಣದಿಂದ ಮಕ್ಕಳು ಮನೆಯಲ್ಲಿಯೇ ತಿಂದು ತಿಂದು ಸ್ಥೂಲ ಕಾಯ ಹೊಂದುತ್ತಿದ್ದಾರೆ. ಇದರಿಂದಾಗಿ ಅವರ ಆರೋಗ್ಯದ ಮೇಲೆ ಅಡ್ಡ ಪರಿಣಾಗಳು ಬೀರುತ್ತಿವೆ.

ಇದಕ್ಕೂ ಹೆಚ್ಚಾಗಿ ಮಕ್ಕಳು ನಿದ್ದೆ ಮಾಡುತ್ತಿದ್ದಾರೆ. ಇದರೊಂದಿಗೆ ಟಿವಿ, ಮೊಬೈಲ್, ಕಂಪ್ಯೂಟರ್ ಗಳೊಂದಿಗೆ ತಮ್ಮ ಬಾಲ್ಯ ಕಳೆಯುತ್ತಿದ್ದಾರೆ. ಇವೆಲ್ಲ ಕಾರಣಗಳಿಂದ ಮಕ್ಕಳ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿದೆ. ನಗರ ಪ್ರದೇಶದಲ್ಲಿನ ಪಾಲಕರು ಹಣ್ಣುಗಳನ್ನು ಕೂಡ ಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಇದೆಲ್ಲದರ ಪರಿಣಾಮ ಮಕ್ಕಳ ಮೇಲೆಯೇ ಆಗುತ್ತಿದೆ. ಇದರಿಂದಾಗಿ ಮಕ್ಕಳಲ್ಲಿ ಬೊಜ್ಜು ಹೆಚ್ಚಾಗುತ್ತಿದೆ. ಹಾಗಾಗಿ ಪೋಷಕರು ತಮ್ಮ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಅಗತ್ಯವಿದೆ. ಹೀಗಾಗಿ ವೈದ್ಯರು ಪಾಲಕರಿಗೆ ಹತ್ತಾರು ಕಿವಿ ಮಾತುಗಳನ್ನು ಹೇಳಿದ್ದಾರೆ.

ಮಕ್ಕಳಿಗೆ ರೆಡಿಮೇಡ್ ಫುಡ್ ಗಳನ್ನು ನೀಡುವ ಬದಲು ತರಕಾರಿ, ಕಾಳುಗಳ ಪಲ್ಯ, ಹಣ್ಣುಗಳನ್ನು ನೀಡಬೇಕು. ಸಾಫ್ಟ್ ಡ್ರಿಂಕ್ಸ್, ಕೊಬ್ಬು ಹೆಚ್ಚಾಗಿರುವ ತಿಂಡಿ ಕೊಡುವುದನ್ನು ನಿಲ್ಲಿಸಿ, ಹಣ್ಣುಗಳ ಜ್ಯೂಸ್, ಹಾಲು ಹಾಗೂ ಆರೋಗ್ಯಕವಾದ ತಿಂಡಿ, ತಿನಿಸುಗಳನ್ನು ನೀಡಬೇಕು. ಎಣ್ಣೆ ಪದಾರ್ಥಗಳನ್ನು ಸಾಧ್ಯವಾದಷ್ಟು ಕಡಿಮೆ ನೀಡಬೇಕು. ಕಂಪ್ಯೂಟರ್, ಮೊಬೈಲ್ ಹಾಗೂ ಟಿವಿಗೆ ಕಡಿವಾಣ ಹಾಕಬೇಕು. ನಿಗದಿತ ಸಮಯದಲಿ ಮಾತ್ರ ನಿದ್ದೆ ಮಾಡುವಂತೆ ನೋಡಿಕೊಳ್ಳಬೇಕು. ದೈಹಿಕ ಚಟುವಟಿಕೆ ಮಾಡುವಂತೆ ನೋಡಿಕೊಳ್ಳಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.

Exit mobile version