ಟ್ವೀಟರ್ ನಟ ರಜನಿಕಾಂತ ಟ್ವೀಟ್ ಅಳಿಸಿ ಹಾಕಿದ್ದು ಯಾಕೆ?

ಬೆಂಗಳೂರು: ಖ್ಯಾತ ನಟ ರಜನಿಕಾಂತ್ ಮಾಡಿದ ಟ್ವೀಟ್ ನ್ನು ಸ್ವತಃ ಟ್ವೀಕರ್ ಅಳಿಸಿ ಹಾಕಿದೆ. ಅವರ ಟ್ವೀಟ್ ಜಾಗದಲ್ಲೀಗ ಟ್ವೀಟರ್ ನಿಯಮ ಉಲ್ಲಂಘಿಸಿರುವುದರಿಂದ ಈ ಟ್ವೀಟ್ ಲಭ್ಯವಿಲ್ಲ ಎಂದು ಸೂಚಿಸಿದೆ.

ರಜನಿಕಾಂತ ಮಾಡಿದ ಈ ಟ್ವೀಟ್ ಸಾಕಷ್ಟು ಟೀಕೆಗೆ ಕಾರಣವಾಗಿತ್ತು. ಅಷ್ಟಕ್ಕೂ ಈ ಟ್ವೀಟ್ ಅಳಸಿ ಹಾಕಲು ಕಾರಣ ಜನತಾ ಕರ್ಪೂ ಬಗ್ಗೆ ರಜನಿ ಮಾಡಿದ ವಿಡಿಯೋ ಸಂದೇಶದ ಪೋಸ್ಟ್..!

ರಜನಿ ವಿಡಿಯೋ ಸಂದೇಶದಲ್ಲಿ ಏನಿತ್ತು?

ರಜನಿಕಾಂತ, ಟ್ವೀಟರ್ ನಲ್ಲಿ ವಿಡಿಯೋ ಸಂದೇಶದ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಕೊರೋನಾ ವೈರಸ್ ಹರಡುವಿಕೆಯ ಬಗ್ಗೆ ಪ್ರಾಸ್ತಾಪಿಸಿದ್ದಾರೆ. ಈಗಾಗಲೇ ಭಾರತದಲ್ಲಿ ಕೊರೋನಾ ವೈರಸ್ ಎರಡನೇ ಹಂತದಲ್ಲಿದೆ. ಕೊರೋನಾ ವೈರಸ್ ಜನರ ಮೂಲಕ ಹರುಡುತ್ತದೆ. ಹೀಗಾಗಿ ಪ್ರತಿಯೊಬ್ಬರು ಹೆಚ್ಚು ಜಾಗೃತರಾಗಬೇಕು. ಈ ಸೋಂಕು ಮೂರನೇ ಹಂತಕ್ಕೆ ವ್ಯಾಪಿಸದಂತೆ ಎಚ್ಚರ ವಹಿಸಬೇಕಾಗಿದೆ. ಎಲ್ಲರೂ 12-14 ಗಂಟೆಗಳವರೆಗೆ ಮನೆಯಲ್ಲಿರುವುದರಿಂದ ಸೋಂಕು ನಿಯಂತ್ರಣಕ್ಕೆ ಬರಲು ಸಾಧ್ಯವಾಗುತ್ತದೆ.

ಇಟಲಿಯಲ್ಲಿಯೂ ಕೂಡ ಕರ್ಪ್ಯೂ ನಿಂದಾಗಿ ಸೋಂಕು ಮೂರನೇ ಹಂತ ತಲುಪದಂತೆ ಕ್ರಮ ಕೈಗೊಳ್ಳಲಾಗಿತ್ತು. ಆದರೆ ಇಟಲಿಯಲ್ಲಿಯೂ ಜನರು ಸಹಕಾರ ನೀಡದ ಕಾರಣ ಹೆಚ್ಚಿನ ಸಾವುನೋವುಗಳು ಸಂಭವಿಸಿದ್ದವು. ಈ ಕಾರಣದಿಂದ ಜನತಾ ಕರ್ಪ್ಯೂಗೆ ಸಹಕರಿಸಿ ಮನೆಯೊಳಗೆ ಇರುವ ಮೂಲಕ ಆರೋಗ್ಯ ಕಾಪಾಡಿಕೊಳ್ಳೋಣ ಎಂದು ಮನವಿ ಮಾಡಿಕೊಂಡ ವಿಡಿಯೋ ಟ್ವೀಟರ್ ಖಾತೆಗೆ ಪೋಸ್ಟ್ ಮಾಡಿದ್ದರು.

ಇವರ ಈ ಟ್ವೀಟ್ ಗೆ ಸಾಕಷ್ಟು ಟೀಕೆ ಹಾಗೂ ಪ್ರಶ್ನೆಗಳು ಉದ್ಭವವಾದವು. ಜೊತೆಗೆ ರಜನಿಕಾಂತ್ ಹೇಳಿಕೆ ಬಗ್ಗೆ ಆಕ್ಷೇಪ ಕೂಡ ವ್ಯಕ್ತವಾದ  ಕಾರಣದಿಂದ ಟ್ವೀಟರ್ ಈ ನಿರ್ಧಾರ ಕೈಗೊಂಡಿದೆ.

Exit mobile version