ಜಾರ್ಖಂಡ್ ನಲ್ಲಿ ಜುಲೈ ಅಂತ್ಯದವರೆಗೆ ಲಾಕ್ ಡೌನ್ ಘೋಷಣೆ!

ರಾಂಚಿ : ಕೊರೊನಾ ವೈರಸ್ ನ ಹಾವಳಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಾರ್ಖಂಡ್ ನಲ್ಲಿ ಜುಲೈ 31ರ ವರೆಗೂ ಲಾಕ್ ಡೌನ್ ಹೇರಲಾಗಿದೆ. 

ಈ ಹಿಂದೆ ಹೇರಲಾಗಿದ್ದ ಲಾಕ್ ಡೌನ್ ಅವಧಿ ಭಾನುವಾರ ಪೂರ್ಣಗೊಳ್ಳಲ್ಲಿದ್ದು, ಮತ್ತೆ ಲಾಕ್ ಡೌನ್ ಅವಧಿಯನ್ನು ವಿಸ್ತರಿಸಲಾಗಿದೆ. ಜಾರ್ಖಂಡ್ ಸರ್ಕಾರದ ಆದೇಶದ ಪ್ರಕಾರ ಲಾಕ್ ಡೌನ್ ಜಾರಿಯಲ್ಲಿದ್ದರೂ ಈಗ ನೀಡಿರುವ ವಿನಾಯಿತಿಗಳು ಮುಂದುವರೆಯಲಿವೆ. ರಾತ್ರಿಯ ಕರ್ಫ್ಯೂ ಎಂದಿನಂತೆ ಮುಂದುವರೆಯಲಿದೆ. ಜಾರ್ಖಂಡ್‌ ರಾಜ್ಯದಲ್ಲಿ ಜುಲೈ 1 ರಿಂದ ಜುಲೈ 31ರ ತನಕ ಲಾಕ್ ಡೌನ್ ಜಾರಿಗೆ ಬರಲಿದೆ. 

ಈ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2,261ಕ್ಕೆ ಏರಿಕೆಯಾಗಿದ್ದು, ಇದುವರೆಗೂ 12 ಜನರು ಮೃತಪಟ್ಟಿದ್ದಾರೆ. ಕೇಂದ್ರ ಗೃಹ ಇಲಾಖೆ ಘೋಷಿಸಿರುವ 5ನೇ ಹಂತದ ಲಾಕ್ ಡೌನ್  ಜೂನ್ 30ರ ತನಕ ದೇಶದಲ್ಲಿ ಜಾರಿಯಲ್ಲಿ ಇರುತ್ತದೆ. ಪಶ್ಚಿಮ ಬಂಗಾಳ ಸರ್ಕಾರ ಈಗಾಗಲೇ ಜುಲೈ 31ರ ತನಕ ಲಾಕ್ ಡೌನ್ ವಿಸ್ತರಣೆ ಮಾಡಿದೆ. ದೆಹಲಿ ಸರ್ಕಾರ ಜುಲೈ 31ರ ತನಕ ಶಾಲೆಗಳನ್ನು ತೆರೆಯುವುದಿಲ್ಲ ಎಂದು ಹೇಳಿದೆ.

Exit mobile version