ಭಾನುವಾರ ಮದುವೆಗೆ ಅವಕಾಶ ರಾಜ್ಯ ಸರ್ಕಾರದ ಆದೇಶ

ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಲಾಕ್ ಡೌನ್ 4.0 ಆರಂಭಲಾಗುತ್ತಿದ್ದಂತೆ ಲಾಕ್ ಡೌನ್ ಮುಕ್ತಾಯಗೊಳ್ಳವವರೆಗೆ ಪ್ರತಿ ಭಾನುವಾರದಂದು ಸಂಪೂರ್ಣ ಬಂದ್ ಮಾಡಲಾಗುತ್ತದೆ ಎಂಬುದಾಗಿ ಘೋಷಣೆ ಮಾಡಿದ್ದರು. ಇದರ ಬೆನ್ನಲ್ಲೇ, ರಾಜ್ಯಾಧ್ಯಂತ ಪ್ರತಿ ಭಾನುವಾರದಂದು ಬೆಳಿಗ್ಗೆ 7ಗಂಟೆಯಿಂದ ಸಂಜೆಯ 7 ಗಂಟೆಯವರೆಗೆ ಕರ್ಪ್ಯೂ ಜಾರಿ ಮಾಡಿದ್ದರಿಂದಾಗಿ, ಮದುವೆ ಸಮಾರಂಭ ಕೂಡ ನಡೆಸಬಾರದಾ ಎಂಬ ಗೊಂದಲಕ್ಕೆ ರಾಜ್ಯದ ಜನತೆ ಒಳಗಾಗಿದ್ದರು. ಇದೀಗ ಮದುವೆ ಸಮಾರಂಭವನ್ನು ನಡೆಸುವುದಕ್ಕೆ ಅವಕಾಶ ನೀಡಿ, ರಾಜ್ಯ ಸರ್ಕಾರದ ಆದೇಶ ಹೊರಡಿಸಿದೆ.

ಈ ಕುರಿತಂತೆ ಸ್ಪಷ್ಟೀಕರಣದ ಆದೇಶ ಹೊರಡಿಸಿರುವ ರಾಜ್ಯ ವಿಪತ್ತಿ ನಿರ್ವಹಣಾ ಪ್ರಾಧಿಕಾರದ ರಾಜ್ಯ ಕಾರ್ಯಕಾರಿ ಸಮಿತಿ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಸದಸ್ಯ ಕಾರ್ಯದರ್ಶಿ ಟಿಕೆ ಅನಿಲ್ ಕುಮಾರ್, ರಾಜ್ಯ ಸರ್ಕಾರವು ದಿನಾಂಕ 18-05-2020ರಂದು ಕೋವಿಡ್-19 ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ಲಾಕ್ ಡೌನ್ ಕ್ರಮಗಳ ಕುರಿತು ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಇವುಗಳು ರಾಜ್ಯಾದ್ಯಂತ ದಿನಾಂಕ 18-05-2020ರಿಂದ ದಿನಾಂಕ 31-05-2020ರವರೆಗೆ ಜಾರಿಯಲ್ಲಿರುತ್ತವೆ.

ಸದರಿ ಆದೇಶದ ಮಾರ್ಗ ಸೂಚಿಗಳ ಕ್ರಮ ಸಂಖ್ಯೆ.6(ಕರ್ಪ್ಯೂ)ರಲ್ಲಿ ಈ ಕೆಳಕಂಡಂತಿರುತ್ತದೆ. ‘ಪ್ರತಿ ದಿನ ರಾತ್ರಿ 7ರಿಂದ ಬೆಳಿಗ್ಗೆ 7ರವರೆಗೆ ಎಲ್ಲಾ ಅವಶ್ಯಕವಲ್ಲದ ಚಟುವಟಿಕೆಗಳ ವ್ಯಕ್ತಿಗಳ ಸಂಚಾರವನ್ನು ಕಟ್ಟು ನಿಟ್ಟಾಗಿ ನಿಷೇಧಿಸತಕ್ಕದ್ದು. ಭಾನುವಾರದಂದು ಹೆಚ್ಚುವರಿಯಾಗಿ ಬೆಳಿಗ್ಗೆ 7ರಿಂದ ಸಂಜೆ 7ರವರೆಗೆ ಸಹ ಎಲ್ಲಾ ಅವಶ್ಯಕವಲ್ಲದ ಚಟುವಟಿಕೆಗಳ ವ್ಯಕ್ತಿಗಳ ಸಂಚಾರವನ್ನು ನಿಷೇಧಿಸಿದೆ.(ಭಾನುವಾರದಂದು ಪೂರ್ಣ ದಿನದ ಲಾಕ್ ಡೌನ್ ಇರುತ್ತದೆ) ಈ ಉದ್ದೇಶಕ್ಕಾಗಿ ಸಿಆರ್.ಪಿಸಿ ಸೆಕ್ಷನ್ 144ರಡಿಯಲ್ಲಿ ನಿಷೇಧಾತ್ಮಕ ಆದೇಶ(ಕರ್ಪ್ಯೂ)ವನ್ನು ಸ್ಥಳೀಯ ಪ್ರಾಧಿಕಾರಗಳ ವತಿಯಿಂದ ಆದೇಶಗಳನ್ನು ಹೊರಡಿಸಿ, ಕಟ್ಟು ನಿಟ್ಟಿನ ಅನುಪಾಲನೆಯನ್ನು ಖಾತರಿಪಡಿಸತಕ್ಕದ್ದು’ ಎಂಬುದಾಗಿ ಸೂಚಿಸಿದ್ದಾರೆ.

ಅನೇಕ ಸಾರ್ವಜನಿಕರು ಭಾನುವಾರದಂದು ಪೂರ್ಣ ದಿನದ ಲಾಕ್ ಡೌನ್ ಇರುವ ಹಿನ್ನಲೆಯಲ್ಲಿ ಈಗಾಗಲೇ ನಿಗಧಿಪಡಿಸಿರುವಂತ ಮದುವೆ ಸಮಾರಂಭಗಳನ್ನು ನಡೆಸಲು ಸ್ಪಷ್ಟೀಕರಣ/ಅನುಮತಿ ನೀಡುವಂತೆ ಕೋರಿರುತ್ತಾರೆ.

ಮೇಲಿನ ಉಲ್ಲೇಖಿತ ಆದೇಶದಲ್ಲಿ ಭಾನುವಾರದಂದು ಪೂರ್ಣ ದಿನದ ಲಾಕ್ ಡೌನ್ ಎಂದು ಆದೇಶಿಸಲಾಗಿರುತ್ತದೆ. ಆದರೇ ಮದುವೆ ಸಮಾರಂಭಗಳು ಈ ಹಿಂದೆಯೇ ನಿಗಧಿಪಡಿಸಿರುವ ಹಿನ್ನಲೆಯಲ್ಲಿ ವಿಶೇಷ ಪ್ರಕರಣವೆಂದು ಪರಿಗಣಿಸಿ, ಸಾಮಾಜಿಕ ಅಂತರವನ್ನು ಖಾತರಿಪಡಿಸಿಕೊಂಡು, ಗರಿಷ್ಟ ಅತಿಥಿಗಳ ಸಂಖ್ಯೆಯನ್ನು 50ಕ್ಕೆ ಸೀಮಿತಗೊಳಿಸಿ, ರಾಷ್ಟ್ರೀಯ ನಿರ್ದೇಶನಗಳನ್ನು ಕಟ್ಟು ನಿಟ್ಟಾಗಿ ಅನುಸರಿಸಿ, ಸರಳವಾಗಿ ಮದುವೆ ಸಮಾರಂಭವನ್ನು ನಡೆಸಲು ಈ ಮೂಲಕ ಅನುಮತಿಸಲಾಗಿದೆ ಎಂದು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸ್ಪಷ್ಟಪಡಿಸಲಾಗಿದೆ. ಇದಲ್ಲದೇ ಭಾನುವಾರದಂದು ಅವಶ್ಯ ಚಟುವಟಿಕೆಗಳಿಗೂ ಅವಕಾಶವಿರುವುದನ್ನು ಗಮನಿಸಿಸುವುದು ಎಂಬುದಾಗಿ ಸ್ಪಷ್ಟೀಕರಣ ನೀಡಿದ್ದಾರೆ

Exit mobile version