ಬಿಎಂಟಿಸಿ ಪಾಸ್ ದರ ಇಳಿಕೆ: ಇನ್ಮುಂದೆ ಟಿಕೇಟ್ ಬದಲಾಗಿ ಪಾಸ್, ಯಾವುದಕ್ಕೆ ಎಷ್ಟು?

ಬೆಂಗಳೂರು: ಕೊನೆಗೂ ಪ್ರಯಾಣಿಕರ ಮನವಿಗೆ ಸ್ಪಂದಿಸಿದ ಬಿಎಂಟಿಸಿ ಪಾಸ್ ದರವನ್ನು ಇಳಿಕೆಗೆ ಮುಂದಾಗಿದೆ. ನಾಳೆಯಿಂದಲೇ ಹೊಸ ದರ ಅನ್ವಯವಾಗಲಿದೆ. ಹೀಗಾಗಿ ನಿತ್ಯ ಸಿಲಿಕಾನ್ ಸಿಟಿಯಲ್ಲಿ ಬಿಎಂಟಿಸಿ ಬಸ್ ಗಳನ್ನೆ ನೆಚ್ಚಿಕೊಂಡಿದ್ದ ಲಕ್ಷಾಂತರ ಜನರಿಗೆ ಇಂದು ಬಿಎಂಟಿಸಿ ಸಿಹಿ ಸುದ್ದಿ ನಿಡಿದೆ.

70ರೂ ಇದ್ದ ನಿತ್ಯದ ಪಾಸ್ ದರ 50ರೂಗೆ ಇಳಿಕೆ ಮಾಡಿದೆ. ಇದರ ಜೊತೆಗೆ ಹೊಸದಾಗಿ 5ರೂ, 10ರೂ, 15ರೂ ಹಾಗೂ 20ರೂ ಮತ್ತು 30ರೂಪಾಯಿಗೆ ಪಾಸ್ ನೀಡಲು ಬಿಎಂಟಿಸಿ ಮುಂದಾಗಿದೆ. ಈ ಮೂಲಕ ಟಿಕೆಟ್ ಬದಲಾಗಿ ಪಾಸ್ ವಿತರಣೆ ಮಾಡಲು ಬಿಎಂಟಿಸಿ ಮುಂದಾಗಿದೆ. 

ಈಗಾಗಲೇ ನಿತ್ಯ ಪಾಸಿನ ದರ 70 ರೂಪಾಯಿ ಪ್ರಯಾಣಿಕರಿಗೆ ಹೊರೆಯಾಗಿತ್ತು. ಇದರಿಂದ ಪ್ರಯಾಣಿಕರು ದರ ಇಳಿಕೆಗೆ ಸಾಕಷ್ಟು ಬಾರಿ ಒತ್ತಾಯಿಸಿದ್ದರು. ಕೊನೆಗೂ ಪ್ರಯಾನಿಕರ ಮನವಿಗೆ ಸ್ಪಂದಿಸಿದ ಬಿಎಂಟಿಸಿ ಈ ನಿರ್ಧಾರಕ್ಕೆ ಬಂದಿದೆ. ಇಲಾಖೆಯ ಈ ನಿರ್ಧಾರ ಕೇವಲ ಬೆಂಗಳೂರಿಗರಿಗಷ್ಟೆ ಅಲ್ಲ, ಅನ್ಯ ಕಾರ್ಯದ ಮೇಲೆ ನಿತ್ಯ ಬೆಂಗಳೂರಿಗೆ ಬರುವ ಲಕ್ಷಾಂತರ ಜನರಿಗೆ ಉಪಯೋಗವಾಗಿದೆ.

ಇಟಿಎಂ ಯಂತ್ರದ ಮೂಲಕ ಪಾಸ್ ವಿತರಣೆ ಮಾಡಲಾಗುವುದು ಜೊತೆಗೆ ಪ್ರಯಾಣದ ದೂರ ಆಧರಿಸಿ ಪಾಸ್ ದರ ನಿಗದಿ ಮಾಡಲಾಗಿದೆ. ಒಟ್ಟು 5 ಮಾದರಿಯ ದರ ನಿಗದಿ ಮಾಡಿ ಬಿಎಂಟಿಸಿ ಆದೇಶ ಹೊರಡಿಸಿದೆ. ಒಂದು ವೇಳೆ ಪಾಸ್ ಖರೀದಿ ಮಾಡಲು ಆಗದವರು ಟಿಕೆಟ್ ಕೊಂಡು ಪ್ರಯಾಣ ಮಾಡಲು ಅವಕಾಶ ಕಲ್ಪಿಸಲಾಗಿದೆ.

Exit mobile version