ಕಳ್ಳತನ ಪ್ರಕರಣ ಇಬ್ಬರ ಬಂಧನ.

ಹಾವೇರಿ: ಜಿಲ್ಲೆಯಲ್ಲಿ ಈಚೆಗೆ ನಡೆದ ಎರಡು ಕಳ್ಳತನ ಪ್ರಕರಣಗಳಿಗೆ ಸಂಬಂಧಪಟ್ಟಂತೆ, ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರಿಂದ 5.18 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿವೈಎಸ್ಪಿ ಸಂತೋಷ ವಿಜಯಕುಮಾರ ತಿಳಿಸಿದರು.

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲ್ಲೂಕಿನ ವ್ಯಾಪಾರಿಗಳಾದ ಚಿತ್ರಗಿ ಪ್ಲಾಟ್‌ ಭದ್ರಾಪುರ ಗ್ರಾಮದ ಉಮರ್‌ ಫಾರೂಕ್‌ ಮತ್ತು ಪಾಳಾ ಗ್ರಾಮದ ಮಹಮದ್‌ ಜಾಫರ್‌ ಖಾನ್‌ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.

ಹಾವೇರಿ ನಗರದಲ್ಲಿ ಜನವರಿ 29ರಂದು ಶ್ರೀಕಂಠೇಶ್ವರ ಗೃಹೋಪಯೋಗಿ ಮಳಿಗೆಯ ಕಿಟಕಿ ಮುರಿದು ಒಟ್ಟು 4.59 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳನ್ನು ಮತ್ತು ನಗದನ್ನು ಕಳ್ಳತನ ಮಾಡಿದ್ದರು. ಈ ಸಂಬಂಧ ಪ್ರಕರಣ ದಾಖಲಾಗಿತ್ತು ಎಂದು ತಿಳಿಸಿದರು.

ಆರೋಪಿಗಳಿಂದ ಎರಡು ಟಿ.ವಿ, 8 ಮೊಬೈಲ್‌ ಫೋನ್‌, 1 ಮೈಕ್ರೋವೇವ್‌ ಮತ್ತು ಇತರೆ ಗೃಹೋಪಯೋಗಿ ವಸ್ತುಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಹಾನಗಲ್‌ ನಗರದಲ್ಲಿ ಕಳ್ಳತನ ಮಾಡಿದ್ದ ಬೈಕನ್ನು ಜಪ್ತಿ ಮಾಡಲಾಗಿದೆ. ಇನ್ನೂ ಎರಡು ಟಿ.ವಿ, 5 ಮೊಬೈಲ್‌ ಫೋನ್‌ಗಳನ್ನು ಜಪ್ತಿ ಮಾಡುವ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಹೇಳಿದರು.

ಸಿಪಿಐ ಪ್ರಭಾವತಿ ಸಿ.ಶೇತಸನದಿ, ಎಸ್‌ಐ ಪಿ.ಜಿ.ನಂದಿ, ಪ್ರೊಬೇಷನರಿ ಎಸ್‌ಐ ಚಂದನ್‌, ಎಎಸ್‌ಐ ಎಸ್‌.ಡಿ. ಸಾಗರ ಮತ್ತು ಸಿಬ್ಬಂದಿ ಹಾಜರಿದ್ದರು.

Exit mobile version